»   » ನಟಿ ಮೇಲಿನ ದೌರ್ಜನ್ಯದ ವಿರುದ್ಧ ಶಿಲ್ಪಾ ಗಣೇಶ್ ಕೆಂಡಾಮಂಡಲ

ನಟಿ ಮೇಲಿನ ದೌರ್ಜನ್ಯದ ವಿರುದ್ಧ ಶಿಲ್ಪಾ ಗಣೇಶ್ ಕೆಂಡಾಮಂಡಲ

Posted By:
Subscribe to Filmibeat Kannada

ಬಹುಭಾಷಾ ನಟಿಯ ಅವರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನ ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಇಂಡಸ್ಟ್ರಿಯವರು ಖಂಡಿಸುತ್ತಿದ್ದಾರೆ. ಪ್ರತಿಭಟನೆ, ಹೋರಾಟಗಳನ್ನ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ, ನಿರ್ಮಾಪಕಿ ಹಾಗೂ ರಾಜಕಾರಣಿಯಾಗಿರುವ ಶಿಲ್ಪಾ ಗಣೇಶ್, ನಟಿಯ ಮೇಲೆ ಆಗಿರುವ ಲೈಂಗಿಕ ಕಿರುಕುಳದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ನಟಿಯ ಬೆಂಬಲಕ್ಕೆ ನಿಂತ ಶಿಲ್ಪಾ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್, ಬಹುಭಾಷಾ ನಟಿಯ ಬೆಂಬಲಕ್ಕೆ ನಿಂತಿದ್ದು, ದೌರ್ಜನ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ನಟಿಗೆ ಲೈಂಗಿಕ ಕಿರುಕುಳ: ಸಿಡಿದೆದ್ದ ಸ್ಯಾಂಡಲ್ ವುಡ್ ನಾಯಕಿಯರು]

ಉಗ್ರವಾದ ಶಿಕ್ಷೆ ಆಗಬೇಕು!

''ಒಬ್ಬ ನಟಿ ಈ ಪರಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆಂದರೆ, ಈ ಸಮಾಜದಲ್ಲಿ ಸಾಮಾನ್ಯ ಜನರ ಗತಿಯೇನು? ನಟಿ ಮೇಲೆ ದೌರ್ಜನ್ಯ ಎಸೆಗಿದವರಿಗೆ ಉಗ್ರ ಶಿಕ್ಷೆ ಆಗಬೇಕು'' ಎಂದು ಶಿಲ್ಪಾ ಗಣೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಗಣೇಶ್' ಸಿನಿಮಾದಲ್ಲಿ ನಟಿಸಿದ್ದ ನಟಿ

ಅಂದ್ಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರವೊಂದರಲ್ಲಿ ಈ ನಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಗಣೇಶ್ ಮನೆಗೂ ಭೇಟಿ ನೀಡಿದ್ದ ನಟಿ

ಶೂಟಿಂಗ್ ವೇಳೆ ಹಲವು ಬಾರಿ ಈ ನಟಿ ಗಣೇಶ್ ಅವರ ಮನೆಗೆ ಭೇಟಿ ನೀಡಿದ್ದರಂತೆ. ಹೀಗಾಗಿ ಶಿಲ್ಪಾ ಗಣೇಶ್ ಹಾಗೂ ಈ ನಟಿಯ ನಡುವೆ ಉತ್ತಮ ಬಾಂಧವ್ಯವಿದೆ. ಈ ನಟಿಯನ್ನ ಶಿಲ್ಪಾ ಗಣೇಶ್ ಅವರು ತೀರಾ ಹತ್ತಿರದಿಂದ ಬಲ್ಲವರಾಗಿದ್ದಾರೆ.

ನಟಿಯ ಭೇಟಿಗೆ ನಿರ್ಧಾರ!

ಸದ್ಯ, ಈ ಘಟನೆಯಿಂದ ನೊಂದಿರುವ ನಟಿಯನ್ನ ಶಿಲ್ಪಾ ಗಣೇಶ್ ಭೇಟಿ ಮಾಡಲು ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಅವರ ಮನೆಗೆ ಹೋಗಲಿದ್ದಾರಂತೆ.

English summary
Kannada Film Producer, Politician Shilp Ganesh Anguish on Actress Abduction incident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada