»   » ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?

ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?

Posted By:
Subscribe to Filmibeat Kannada

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಡೋದು ಅಂದ್ರೆ ಸುಮ್ನೆ ಮಾತಾ. ಇಲ್ಲಿ ಸ್ವಂತಕ್ಕೆ ಅಂತ ಒಂದು ಪುಟ್ಟ ಮನೆ ಇದ್ದರೂ, ಅವರೇ ಶ್ರೀಮಂತರು. ಇನ್ನೂ ಬಂಗಲೆ ಇದ್ದು ಬಿಟ್ಟರೆ, ಅವರೇ ಅದೃಷ್ಟವಂತರು ಅಲ್ವೇ.!

ಬೆಂಗಳೂರಿನಲ್ಲಿ ಸ್ವಂತ ಮನೆ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೂ, ಗೋಲ್ಡನ್ ಸ್ಟಾರ್ ಗಣೇಶ್ ಗೂ ಒಂದು ಲಿಂಕ್ ಇದೆ. ಇಂದು ಗಣೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೂ ಒಂದಲ್ಲಾ ಒಂದು ಉಡುಗೊರೆ ಕೊಡ್ತಾನೆ ಬಂದಿರುವ ಗಣೇಶ್ ಪತ್ನಿ ಶಿಲ್ಪಾ ಈ ಬಾರಿ 'ಅರಮನೆ' ಗಿಫ್ಟ್ ಮಾಡಿದ್ದಾರೆ. [ಗೋಲ್ಡನ್ ಸ್ಟಾರ್ ಗೆ ಬೆಂಜ್ ಕಾರು ಉಡುಗೊರೆ]

Shilpa Ganesh gifts a house for Husband Ganesh on his birthday

ನಂಬಿದ್ರೆ ನಂಬಿ, ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಬಂಗಲೆಯನ್ನ ಕಟ್ಟಿಸಿ, ಅದನ್ನ ಪತಿ ಗಣೇಶ್ ಗೆ ಬರ್ತಡೆ ಗಿಫ್ಟ್ ಆಗಿ ನೀಡಿದ್ದಾರೆ. ಬರೋಬ್ಬರಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಸತತ ಎರಡು ವರ್ಷಗಳಿಂದ ಖುದ್ದಾಗಿ ನಿಂತುಕೊಂಡು ಶಿಲ್ಪಾ ಗಣೇಶ್ ಮನೆಯನ್ನ ಕಟ್ಟಿಸಿದ್ದರು.

ಇಟಾಲಿಯನ್ ಡಿಸೈನ್ ನಲ್ಲಿ ಮನೆ ನಿರ್ಮಾಣವಾಗಿದೆ. ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಸೇರಿದಂತೆ ಅತ್ಯಾಧುನಿಕ ಎಲ್ಲಾ ಸೌಲಭ್ಯಗಳಿವೆ. ಗಣೇಶ್ ಆಸೆ, ಕನಸಿಗೆ ತಕ್ಕಂತೆ ಮನೆಯ ಒಳಾಂಗಣ ವಿನ್ಯಾಸವನ್ನ ಶಿಲ್ಪಾ ಗಣೇಶ್ ಅವರೇ ಮಾಡಿರುವುದು ವಿಶೇಷ. [ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!]

ಸದ್ಯಕ್ಕೆ ನಿರ್ಮಾಣ ಪೂರ್ಣಗೊಂಡಿರುವ ಮನೆಯನ್ನ ಉಡುಗೊರೆ ರೂಪದಲ್ಲಿ ಪತಿ ಗಣೇಶ್ ಗೆ ಶಿಲ್ಪಾ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ನಿಜಕ್ಕೂ ಅದೃಷ್ಟವಂತ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ. ನೀವೇ ಹೇಳಿ....

English summary
Kannada Actor Ganesh is celebrating his 38th birthday today (July 2nd). On this occasion, his wife Shilpa Ganesh has gifted him a house built in Rajarajeshwarinagar, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada