»   » ಗೋಲ್ಡನ್ ಸ್ಟಾರ್ ಗೆ ಬೆಂಜ್ ಕಾರು ಉಡುಗೊರೆ

ಗೋಲ್ಡನ್ ಸ್ಟಾರ್ ಗೆ ಬೆಂಜ್ ಕಾರು ಉಡುಗೊರೆ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಸಿಕ್ಕಿದೆ. ಈ ಉಡುಗೊರೆಯನ್ನು ನೀಡುತ್ತಿರುವುದು ಬೇರೆ ಯಾರು ಅಲ್ಲ ಅವರ ಮುದ್ದಿನ ಮಡದಿ ಶಿಲ್ಪಾ ಗಣೇಶ್. ಇಷ್ಟಕ್ಕೂ ಏನಪ್ಪಾ ಆ ಉಡುಗೊರೆ ಎಂದರೆ ಒಂದೂವರೆ ಕೋಟಿ ರುಪಾಯಿ ಬೆಲೆ ಬಾಳುವ ಬೆಂಚ್ ಕಾರು.

ಇದೇ ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಮೂವತ್ತ ಮೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅವರಿಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದಾರೆ. ಈಗವರು ತಮ್ಮ ಸ್ಟೈಲನ್ನೂ ಬದಲಾಯಿಸಿದ್ದಾರೆ. ಹುಟ್ಟುಹಬ್ಬದ ದಿನ ಅವರ ಹೊಸ ಚಿತ್ರ 'ಸ್ಟೈಲ್ ಕಿಂಗ್' ಆರಂಭವಾಗುತ್ತಿದೆ. [ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಶುಕ್ರದೆಸೆ ಆರಂಭ]


ಮೈಸೂರು ಡೀಲರ್ ಬಳಿ ಮರ್ಸಿಡೆಸ್ ಬೆಂಜ್ ಜಿಎಲ್ ಕ್ಲಾಸ್ ಕಾರನ್ನು ಖರೀದಿಸಲಾಗಿದೆ. ತಮ್ಮ ಪತಿಯ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಶಿಲ್ಪಾ ಅವರು ಈ ಕಾರನ್ನು ಆಯ್ಕೆ ಮಾಡಿದ್ದಾರೆ. ಕಾರಿನ ಬಣ್ಣ, ವಿನ್ಯಾಸ, ಅದರ ರೂಪವೈಶಿಷ್ಟ್ಯಗಳು ಅದಕ್ಕೆ ಅದೇ ಸಾಟಿ ಎಂಬಂತಿದೆ ಬೆಂಜ್ ಕಾರು.

ಹೊಸ ಕಾರಿನ ನಾಲ್ಕೂ ಚಕ್ರಗಳಿಗೆ ನಿಂಬೆಹಣ್ಣಿಟ್ತು ಪೂಜೆ ಮಾಡಿದ ಬಳಿಕ ತಮ್ಮ ಮಗಳು ಚಾರಿತ್ರಿಯಾ ಹಾಗೂ ಪತ್ನಿ ಜೊತೆಗೆ ಠೀವಿಯಿಂದ ಕೂತು ಗಣೇಶ್ ಎಲ್ಲರಿಗೂ ಪೋಸು ನೀಡಿದರು. ಸಿನಿಮಾ ತಾರೆಗಳಿಗೆ ಅವರು ಬಳಸುವ ಕಾರೇ ಪ್ರತಿಷ್ಠೆಯ ವಿಷಯ.

Style King first look

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್, ಶಿವಣ್ಣ...ಹೀಗೆ ಎಲ್ಲರೂ ದುಬಾರಿ ಬೆಲೆಯ ಕಾರುಗಳನ್ನೇ ಬಳಸುತ್ತಿದ್ದಾರೆ. ಈಗ ಗಣೇಶ್ ಒಂದೂವರೆ ಕೋಟಿ ಬೆಲೆಯ ಕಾರಿನ ಒಡೆಯ. (ಏಜೆನ್ಸೀಸ್)
English summary
Shilpa Ganesh Gifts Mercedes-Benz GL-Class to his husband Golden Star Ganesh on his Birthday. Shilpa personally selected the colour and features to ensure that it suited her actor husband's taste.
Please Wait while comments are loading...