For Quick Alerts
  ALLOW NOTIFICATIONS  
  For Daily Alerts

  ಶಕ್ತಿಧಾಮ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಸೆಂಚುರಿ ಸ್ಟಾರ್: 'ಬೈರಾಗಿ' ಭರ್ಜರಿ ಡ್ಯಾನ್ಸ್

  |

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ ಬಹಳ ದಿನಗಳ ಬಳಿಕ ರಿಲೀಸ್ ಆಗುತ್ತಿದೆ. ಹೆಚ್ಚು ಕಡಿಮೆ ಎಂಟು ತಿಂಗಳಿನಿಂದ ಶಿವಣ್ಣನ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿರಲಿಲ್ಲ. ಅಪ್ಪು ನಿಧನದ ದಿನವೇ 'ಭಜರಂಗಿ 2' ಸಿನಿಮಾ ರಿಲೀಸ್ ಆಗಿತ್ತು. ಅದೇ ಕೊನೆ ಮತ್ತೆ ಶಿವಣ್ಣನ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿರಲಿಲ್ಲ.

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ( ಜೂನ್ 29) ಎಂಟು ತಿಂಗಳಿಗಳಾಗಿವೆ. ಈ ಎಂಟು ತಿಂಗಳಲ್ಲಿ ಶಿವಣ್ಣ ತಮ್ಮನನ್ನು ಕಳೆದುಕೊಂಡ ನೋವಿನಿಂದ ನಿಧಾನವಾಗಿ ಹೊರಬರುತ್ತಿದ್ದು, ಸೆಂಚುರಿ ಸ್ಟಾರ್ ತಮ್ಮ ಹೊಸ ಸಿನಿಮಾ 'ಬೈರಾಗಿ' ಪ್ರಚಾರದಲ್ಲಿ ನಿರತರಾಗಿದ್ದಾರೆ.

  ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ: 'ಟಗರು ಪಾರ್ಟ್ 2' ಇರಬಹುದಾ 'ಬೈರಾಗಿ'?ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ: 'ಟಗರು ಪಾರ್ಟ್ 2' ಇರಬಹುದಾ 'ಬೈರಾಗಿ'?

  ಒಂದ್ಕಡೆ 'ಬೈರಾಗಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ತಮ್ಮದೇ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಇದೇ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

  ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ಡ್ಯಾನ್ಸ್

  ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ಡ್ಯಾನ್ಸ್

  ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಡ್ಯಾನ್ಸ್ ಕಿಂಗ್ ಅನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಶಿವಣ್ಣನ ಡ್ಯಾನ್ಸ್ ಅಂದರೆ, ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಾರೆ. ರಿಲೀಸ್‌ಗೆ ರೆಡಿಯಾಗಿರುವ 'ಬೈರಾಗಿ' ಸಿನಿಮಾದಲ್ಲಿಯೂ ಶಿವಣ್ಣನಿಗಾಗಿ ಭರ್ಜರಿ ಸಾಂಗ್ ಇಡಲಾಗಿದೆ. ಇದೇ ಸಿನಿಮಾದ ಹಾಡಿಗೆ ಶಿವಣ್ಣ ತಾವೇ ನಡೆಸುತ್ತಿರುವ ಶಕ್ತಿಧಾಮದ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಅದೇ ಎನರ್ಜಿ. ಅದೇ ಡ್ಯಾನ್ಸ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  Exclusive: ಉಮಾಪತಿ ಕೈಯಲ್ಲಿ ಶಿವಣ್ಣನ ಟೈಟಲ್: 'ದೊರೆ' ಆಗಬೇಕಿತ್ತು ಪುನೀತ್!Exclusive: ಉಮಾಪತಿ ಕೈಯಲ್ಲಿ ಶಿವಣ್ಣನ ಟೈಟಲ್: 'ದೊರೆ' ಆಗಬೇಕಿತ್ತು ಪುನೀತ್!

  ಮಕ್ಕಳಿಂದಲೂ ಭರ್ಜರಿ ಡ್ಯಾನ್ಸ್

  ಮಕ್ಕಳಿಂದಲೂ ಭರ್ಜರಿ ಡ್ಯಾನ್ಸ್

  ಶಕ್ತಿಧಾಮದ ಮಕ್ಕಳಲ್ಲೂ ಶಿವರಾಜ್‌ಕುಮಾರ್ ಅವರಷ್ಟೇ ಎನರ್ಜಿ ಇತ್ತು. ಸೆಂಚುರಿ ಸ್ಟಾರ್ ಜೊತೆ ಶಕ್ತಿಧಾಮದ ಮಕ್ಕಳು ಕೂಡ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ಎನರ್ಜಿ ನೋಡಿ ಖುಷಿ ಅವರಂತೆಯೇ ಮಕ್ಕಳೂ ಕೂಡ ಹೆಜ್ಜೆ ಹಾಕಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಜೊತೆಗೆ ಶಿವಣ್ಣನ ಎನರ್ಜಿ ನೋಡಿ ಫ್ಯಾನ್ಸ್ ಅಂತೂ ಫುಲ್ ಥ್ರಿಲ್ ಆಗಿದ್ದಾರೆ. 'ಬೈರಾಗಿ' ಸಿನಿಮಾ ನೋಡಲು ಕಾತುರರಾಗಿದ್ದಾರೆ.

  ಮಕ್ಕಳೊಂದಿಗೆ ಕಾಲ ಕಳೆಯುವ ಶಿವಣ್ಣ

  ಮಕ್ಕಳೊಂದಿಗೆ ಕಾಲ ಕಳೆಯುವ ಶಿವಣ್ಣ

  ಶಿವರಾಜ್‌ಕುಮಾರ್ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಹಲವು ಬಾರಿ ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಅವರೊಂದಿಗೆ ಆಟ ಆಡಿದ್ದಾರೆ. ತಾವೇ ಶೂಟಿಂಗ್ ಸ್ಟಾಟ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಪ್ಪು ಅಗಲಿದ ಬಳಿಕ ಶಕ್ತಿಧಾಮದಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ 'ಬೈರಾಗಿ' ಬಿಡುಗಡೆಗೂ ಮುನ್ನ ಅದೇ ಮಕ್ಕಳೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

  ಅಪ್ಪು ಅಗಲಿ 8 ತಿಂಗಳ ಬಳಿಕ ಶಿವಣ್ಣನ ಸಿನಿಮಾ ರಿಲೀಸ್‌ : ದೊಡ್ಮನೆ ಫ್ಯಾನ್ಸ್‌ಗೆ ಸರ್ಪ್ರೈಸ್!ಅಪ್ಪು ಅಗಲಿ 8 ತಿಂಗಳ ಬಳಿಕ ಶಿವಣ್ಣನ ಸಿನಿಮಾ ರಿಲೀಸ್‌ : ದೊಡ್ಮನೆ ಫ್ಯಾನ್ಸ್‌ಗೆ ಸರ್ಪ್ರೈಸ್!

  ಬೈರಾಗಿಯಲ್ಲಿ ಶಿವಣ್ಣ ಜೊತೆ ಡಾಲಿ, ಪೃಥ್ವಿ

  ಬೈರಾಗಿಯಲ್ಲಿ ಶಿವಣ್ಣ ಜೊತೆ ಡಾಲಿ, ಪೃಥ್ವಿ

  'ಬೈರಾಗಿ' ಸಿನಿಮಾದಲ್ಲಿ ದೊಡ್ಡ ತಾರಾಗಣವಿದೆ. ಶಿವಣ್ಣ ಜೊತೆ ಮತ್ತೆ ಡಾಲಿ ಧನಂಜಯ್ ಕಾಣಿಸಿಕೊಂಡಿರೋದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನೊಂದು ಕಡೆ ದಿಯಾ ಖ್ಯಾತಿ ಪೃಥ್ವಿ ಅಂಬರ್ ಕೂಡ ನಟಿಸಿದ್ದಾರೆ. ವಿಜಯ್ ಮಿಲ್ಟನ್ ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾ ಹೈಲೈಟ್. ಶಿವಣ್ಣನ ಹುಟ್ಟುಹಬ್ಬಕ್ಕೂ ಮೊದಲೇ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  English summary
  Shiva Rajkumar Dance With Shakthidhama Children From His Movie Bairagee Video Goes Viral, Know More.
  Thursday, June 30, 2022, 9:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X