ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಡ್ ನಲ್ಲಿಲ್ಲ ಶಿವರಾಜ್ ಕುಮಾರ್.!
ಜುಲೈ 12 ಬಂದರೆ ಸಾಕು... 'ಸೆಂಚುರಿ ಸ್ಟಾರ್' ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದಕ್ಕೆಲ್ಲ ಕಾರಣ 'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಹುಟ್ಟುಹಬ್ಬ.
ಪ್ರತಿ ವರ್ಷ ಶಿವಣ್ಣನ ಜನ್ಮದಿನವನ್ನ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಶಿವಣ್ಣನಿಗೆ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸೆಲೆಬ್ರೇಟ್ ಮಾಡುತ್ತಾರೆ. ಶಿವಣ್ಣನ ಬರ್ತಡೇ ದಿನ, ಅವರ ನಾಗವಾರ ನಿವಾಸದ ಮುಂದೆ ದೊಡ್ಡ ದೊಡ್ಡ ಕಟೌಟ್ ಹಾಗೂ ಪೋಸ್ಟರ್ ಗಳು ರಾರಾಜಿಸುವುದು ಸರ್ವೇ ಸಾಮಾನ್ಯ.

ಆದ್ರೆ, ಇವೆಲ್ಲ ಈ ಬಾರಿ ನಡೆಯುವುದು ಕೊಂಚ ಅನುಮಾನ. ಯಾಕಂದ್ರೆ, ಬರ್ತಡೇ ಸೆಲೆಬ್ರೇಟ್ ಮಾಡುವ ಮೂಡ್ ನಲ್ಲಿ ಶಿವಣ್ಣ ಇಲ್ಲ. ತಾಯಿಯನ್ನು (ಪಾರ್ವತಮ್ಮ ರಾಜ್ ಕುಮಾರ್) ಕಳೆದುಕೊಂಡ ನೋವಿನಲ್ಲಿ ಇರುವ ಶಿವಣ್ಣ ಈ ಬಾರಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರಂತೆ.
ನಾಳೆ (ಜುಲೈ 12) ಶಿವರಾಜ್ ಕುಮಾರ್ ಜನ್ಮದಿನ. ಎಂದಿನಂತೆ ಬರ್ತಡೇ ಆಚರಿಸದಿರಲು ಶಿವಣ್ಣ ಡಿಸೈಡ್ ಮಾಡಿದ್ದಾರಂತೆ. ಆದ್ರೆ, ಶಿವಣ್ಣನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸುವ ಅಭಿಮಾನಿಗಳಿಗೆ ಈ ಸಂಗತಿ ನಿರಾಸೆ ಆಗಬಹುದು. ಶಿವಣ್ಣ ರವರನ್ನ ಆರಾಧ್ಯದೈವನಂತೆ ಕಾಣುವ ಅಭಿಮಾನಿಗಳು ಶಿವಣ್ಣನ ಇಷ್ಟ-ಕಷ್ಟಗಳತ್ತ ಒಮ್ಮೆ ಕಣ್ಣಾಡಿಸಬೇಕು.


Click it and Unblock the Notifications











