For Quick Alerts
  ALLOW NOTIFICATIONS  
  For Daily Alerts

  ಗುರಾಯ್ಸಿದ್ರೆ ಗುಮ್ಮುವ 'ಟಗರು' ಮೈ ತುಂಬಾ ಪೊಗರು!

  By ಕುಸುಮ
  |

  ಸ್ಯಾಂಡಲ್ವುಡ್ ಕಿಂಗ್ ಶಿವರಾಜ್ಕುಮಾರ್ ಅಭಿನಯದ 'ಟಗರು' ಚಿತ್ರದ ಟೈಟಲ್ ಪೋಸ್ಟರ್ ಹೊರಬಂದಿದೆ. ಶಿವಣ್ಣನನ್ನು ಗುರಾಯಿಸಿದ್ರೆ ಗುಮ್ಮುವ ಟಗರಿನ ತಲೆಗೆ ಹೊಂದಿಸಿರುವ ಟೈಟಲ್ ಡಿಸೈನ್ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗಂತೂ ಸಖತ್ ಖುಷಿಕೊಡಲಿದೆ.

  ದುನಿಯಾ ಸೂರಿ 'ಕಡ್ಡಿಪುಡಿ' ಚಿತ್ರದ ನಂತ್ರ ಶಿವಣ್ಣನಿಗಾಗಿ 'ಟಗರು' ಅನ್ನೋ ಚಿತ್ರ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಇತ್ತು. ಸುದ್ದಿ ಈಗ ಟೈಟಲ್ನ ಫಸ್ಟ್ ಲುಕ್ ಮೂಲಕ ಪಕ್ಕಾ ಆಗಿದೆ. ಕೆ.ಪಿ ಶ್ರೀಕಾಂತ್ ನಿರ್ಮಾಣದ 'ಟಗರಿ'ಗೆ ಮೈ ಎಲ್ಲ ಪೊಗರು ಅನ್ನೋ ಟ್ಯಾಗ್ಲೈನ್ ಕೂಡ ಸಖತ್ ಕಿಕ್ ಕೊಡ್ತಿದೆ.

  ಆದ್ರೆ ಶಿವಣ್ಣ ಸಿನಿಮಾಗಳ ಲಿಸ್ಟ್ ನೋಡಿದ್ರೆ ಇದು ತೆರೆಗೆ ಬರೋಕೆ ಇನ್ನೂ 2ರಿಂದ 3ವರ್ಷ ಕಾಯಲೇಬೇಕು. ಶಿವಣ್ಣ ಬಲಗೈ ಬಂಟರೇ ಆಗಿರುವ ಕೆಪಿ ಶ್ರೀಕಾಂತ್ ಸಿನಿಮಾ ಆಗಿರೋದ್ರಿಂದ ಶಿವಣ್ಣ ಗ್ಯಾಪಲ್ಲಿ ಟೈಂ ಕೊಟ್ರೆ ಮತ್ತು ಸದ್ದಿಲ್ಲದೆ ಶೂಟಿಂಗ್ ಮಾಡೋ ದುನಿಯಾ ಸೂರಿ ಸೈಲೆಂಟಾಗಿ ಶೂಟಿಂಗ್ ಮುಗಿಸಿದ್ರೆ 'ಟಗರು' ಮೈತುಂಬಾ ಪೊಗರು ತುಂಬಿಕೊಂಡು ಮುಂದಿನ ವರ್ಷವೇ ಬಂದ್ರೂ ಬರಬಹುದು ಯಾರಿಗ್ಗೊತ್ತು. [ಹುಬ್ಬಳ್ಳಿಯಲ್ಲಿ ಸಾದಾ ಸೀದಾ ಹೈದ ಮೈಲಾರಿ ಶತದಿನೋತ್ಸವ]


  ಆರ್ ಚಂದ್ರು ನಿರ್ದೇಶನದ 'ಮೈಲಾರಿ' ಸಿನಿಮಾದಲ್ಲಿ ಶಿವಣ್ಣ ಮತ್ತು ಟಗರಿನ ಸಂಬಂಧ ವಿಶೇಷವಾಗಿ ಕಾಣಿಸಿಕೊಂಡಿತ್ತು. ಆಗಲೇ ಒಂದು ಸಣ್ಣ ಕಥೆಯ ಎಳೆ ದುನಿಯಾ ಸೂರಿ ಮನಸ್ಸಿನಲ್ಲಿ ಜಾರಿಹೋಗಿದ್ದಿರಬೇಕು. ಎಂತಹಾ ಪಾತ್ರಗಳಿಗೂ ಒಗ್ಗಿಕೊಳ್ಳುವ ಅಪರೂಪದ ನಟ ಶಿವಣ್ಣನಿಂದ ಮಾತ್ರ ಇಂತಹಾ ಪಾತ್ರ ಮಾಡಿಸೋಕೆ ಸಾಧ್ಯ ಅಂತ ನಂಬಿರುವ ಸೂರಿ, ಮಾಸ್ ಜೊತೆಗೆ ಸೆಂಟಿಮೆಂಟ್ ಟಚ್ನ ಕಥೆಯನ್ನು ಶಿವಣ್ಣಗಾಗಿಯೇ ತಯಾರಿಸಿದ್ದಾರೆ ಎನ್ನುತ್ತಿದೆ ದುನಿಯಾ ಮೂಲ.

  ಸದ್ಯಕ್ಕಿಷ್ಟು, ಟಗರು ಮುಂದೆ ಎಲ್ಲೆಲ್ಲಿ ಗುಮ್ತಿದೆ ಅನ್ನೋ ಉಳಿದ ಮಾಹಿತಿಗಳನ್ನು ನಾವು ನಿಮಗೆ ಫಿಲ್ಮಿಬೀಟ್ ಮೂಲಕ ಕೊಡ್ತಾನೇ ಇರ್ತೀವಿ. ಅಂದ ಹಾಗೆ, ಈ ಸಿನೆಮಾಗೆ ಬ್ಯೂಟಿಫುಲ್ ನಾಯಕಿ ಯಾರಿರಬಹುದು, ಗೆಸ್ ಮಾಡಲು ಶುರು ಮಾಡಿ, ಕಲ್ಪನೆಗೊಂದಿಷ್ಟು ಸಾಣೆ ಹಿಡಿಯಿರಿ.

  English summary
  Shiva Rajkumar and Duniya Soori combination movie Tagaru poster released. After Kaddipudi director Soori has opted for an unusual story line for Shivanna. The Kannada film is produced by KP Srikanth. Start guessing the heroine opposite Shiva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X