twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮಗುವನ್ನೇ ಕಳೆದುಕೊಂಡಿದ್ದೇನೆ: ಶಿವಣ್ಣ ಭಾವುಕ

    |

    ಪುನೀತ್ ರಾಜ್‌ಕುಮಾರ್ ನಿಧನದಿಂದ ನನ್ನ ಮಗುವನ್ನೇ ನಾನು ಕಳೆದುಕೊಂಡೆ ಎಂಬ ಭಾವ ಆವರಿಸಿದೆ ಎಂದು ನಟ ಶಿವರಾಜ್ ಕುಮಾರ್ ತಮ್ಮ ಮನದ ದುಃಖ ತೋಡಿಕೊಂಡರು.

    Recommended Video

    ಶಿವಣ್ಣನ ಪರಿಸ್ಥಿತಿ ಕಂಡು ಮರುಗಿದ ಕರುನಾಡು

    ಪುನೀತ್ ರಾಜ್‌ಕುಮಾರ್ ನಿಧನವಾದಾಗಿನಿಂದಲೂ ಅವರು ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಇಂದು ಪುನೀತ್ ಅವರ ಅಂತಿಮ ಕಾರ್ಯ ಮುಗಿದ ಮೇಲೆ ಮಾಧ್ಯಮಗಳ ಮುಂದೆ ಬಂದು ತಮ್ಮ ದುಃಖವನ್ನು ವ್ಯಕ್ತಪಡಿಸುವ ಯತ್ನ ಮಾಡಿದರು.

    ''ನನಗಿಂತಲೂ ಹದಿಮೂರು ವರ್ಷ ಚಿಕ್ಕವನು ಅಪ್ಪು, ಅವನು ಮಗುವಾಗಿದ್ದಾಗಿನಿಂದಲೂ ಅವನನ್ನು ನಾನು ನೋಡಿದ್ದೇನೆ. ಅವನು ಹೋಗಿದ್ದು ನನ್ನ ಮಗುವೇ ಹೋದಂತೆ ಆಗಿದೆ'' ಎಂದಿದ್ದಾರೆ ಶಿವರಾಜ್ ಕುಮಾರ್.

    ''ಅಪ್ಪು ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಅವನು ಎಲ್ಲರಿಗಿಂತ ಚಿಕ್ಕವನು. ಆದರೆ ಅವನೇ ಬೇಗ ಭಗವಂತನಿಗೆ ಪ್ರಿಯವಾಗಿಬಿಟ್ಟ. ಅತೀವ ನೋವಾಗುತ್ತಿದೆ. ನಮ್ಮ ಜೊತೆ ನೀವುಗಳು (ಅಭಿಮಾನಿಗಳು) ನೋವು ಪಟ್ಟಿದ್ದೀರ. ಮಹಿಳೆಯರು, ಮಕ್ಕಳು ಬಂದು ಕಣ್ಣೀರು ಹಾಕುತ್ತಿರುವುದು ನೋಡಿ ಇನ್ನಷ್ಟು ನೋವಾಗಿದೆ. ಅಭಿಮಾನಿಗಳ ನೋವು ನಮಗೆ ತೀವ್ರ ದುಃಖ ತಂದಿದೆ'' ಎಂದರು ಶಿವಣ್ಣ.

    ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ: ಶಿವಣ್ಣ

    ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ: ಶಿವಣ್ಣ

    ''ಪುನೀತ್ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದೇ ಕಷ್ಟ. ಯಾವುದೋ ಊರಿಗೆ ಹೋಗಿದ್ದಾನೆ ವಾಪಸ್ ಬರ್ತಾನೆ ಎನ್ನಿಸುತ್ತಿದೆ. ಅವನು ಮಲಗಿದ್ದಾಗಲೂ ಹಾಗೇ ಅನ್ನಿಸುತ್ತಿತ್ತು. ಆದರೆ ಏನೂ ಮಾಡಲಾಗದು ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು. ಜೀವನ ಮುಂದೆ ಸಾಗಲೇ ಬೇಕು. ಅವರ ಕುಟುಂಬಕ್ಕೆ ನಾವು ಜೊತೆಯಾಗಿರುತ್ತೇವೆ. ನಮ್ಮ ಇಡೀ ಕುಟುಂಬ ಅವರೊಟ್ಟಿಗೆ ಇದೆ. ಅವರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ಯತ್ನ ಮಾಡುತ್ತೇವೆ'' ಎಂದು ಸಮಾಧಾನ ತಂದುಕೊಳ್ಳುವ ಯತ್ನ ಮಾಡಿದರು ಶಿವಣ್ಣ.

    ಪೊಲೀಸರಿಗೆ ಸರ್ಕಾರಕ್ಕೆ ಶಿವಣ್ಣ ಧನ್ಯವಾದ

    ಪೊಲೀಸರಿಗೆ ಸರ್ಕಾರಕ್ಕೆ ಶಿವಣ್ಣ ಧನ್ಯವಾದ

    ಪೊಲೀಸರಿಗೆ ಧನ್ಯವಾದ ಹೇಳಿದ ಶಿವಣ್ಣ, ''ಸರ್ಕಾರ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿತು. ಪೊಲೀಸ್ ಇಲಾಖೆಗೆ ವಿಶೇಷ ಧನ್ಯವಾದ ಯಾರಿಗೂ ತೊಂದರೆ ಆಗದಂತೆ, ನೂಕಾಟ-ತಳ್ಳಾಟ ಆಗದಂತೆ ಅವರು ನೋಡಿಕೊಂಡರು. ಎರಡು ದಿನ ಅಂತಿಮ ದರ್ಶನ ಇಟ್ಟಿದ್ದರಿಂದ ಬಹಳ ಜನ ಬಂದರು ಆದರೆ ಪೊಲೀಸರು ಬಹಳ ಚೆನ್ನಾಗಿ ಬಂದೋಬಸ್ತ್ ಮಾಡಿದರು ಅವರಿಗೆ ಬಹಳ ಥ್ಯಾಂಕ್ಸ್. ಸಿಎಂ ಬೊಮ್ಮಾಯಿ ಸರ್‌ಗೂ ಬಹಳ ಥ್ಯಾಂಕ್ಸ್. ನಮ್ಮ ಕುಟುಂಬದ ಮೇಲಿಟ್ಟಿರುವ ಅಭಿಮಾನಕ್ಕೆ ನಾವು ಋಣಿ. ಕುಟುಂಬದವರು ಎಲ್ಲ ವಿಧಿ-ವಿಧಾನಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತೆ ಅವರು ವ್ಯವಸ್ಥೆ ಮಾಡಿಕೊಟ್ಟರು'' ಎಂದು ಧನ್ಯವಾದಗಳನ್ನು ಅರ್ಪಿಸಿದರು ಶಿವಣ್ಣ.

    ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ: ಶಿವಣ್ಣ

    ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ: ಶಿವಣ್ಣ

    ''ಕುಟುಂಬದವರು ಹಾಲು-ತುಪ್ಪ ಕಾರ್ಯ ಮಾಡಿದ ಮೇಲೆ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ಐದು ದಿನ ಆಗುವುದಿಲ್ಲ ಅದಕ್ಕೂ ಮುನ್ನವೇ ಜನರಿಗೆ ನಾವು ಅವಕಾಶ ಮಾಡಿಕೊಡುತ್ತೇವೆ. ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ. ಅಭಿಮಾನಿಗಳಲ್ಲದೆ ಇನ್ಯಾರು ನೋಡಬೇಕು. ಆದಷ್ಟು ಬೇಗ ಅಪ್ಪುವನ್ನು ನೋಡುವ ಅವಕಾಶ ಮಾಡಿಕೊಡುತ್ತೇವೆ'' ಎಂದರು ಶಿವರಾಜ್ ಕುಮಾರ್.

    ಅಭಿಮಾನಿಗಳಿಗೆ ಶಿವಣ್ಣ ಕಿವಿ ಮಾತು

    ಅಭಿಮಾನಿಗಳಿಗೆ ಶಿವಣ್ಣ ಕಿವಿ ಮಾತು

    ಪುನೀತ್ ನಿಧನದಿಂದ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ''ದಯವಿಟ್ಟು ಹಾಗೆ ಮಾಡುವುದು ಬೇಡ. ನಮಗೆ ಬೇಸರ ಇಲ್ಲವೆ, ಎಲ್ಲರಿಗೂ ಬೇಸರ ಇದೆ ಹಾಗೆಂದು ಇಂಥಹಾ ಕಾರ್ಯಗಳಿಗೆ ಕೈ ಹಾಕಬಾರದು. ಅಪ್ಪುವಿಗೂ ಇದು ಇಷ್ಟವಾಗುತ್ತಿರಲಿಲ್ಲ. ಅಪ್ಪು ಎಲ್ಲರನ್ನೂ ಇದ್ದಾನೆ, ನಮ್ಮಲ್ಲಿ, ರಾಘುವಿನಲ್ಲಿ ಇಡೀಯ ಉದ್ಯಮದವರ ಹೃದಯದಲ್ಲಿದ್ದಾನೆ. ಅಭಿಮಾನಿಗಳ ಹೃದಯದಲ್ಲಿದ್ದಾನೆ. ಯಾರೂ ಆತ್ಮಹತ್ಯೆಯಂತಹಾ ನಿರ್ಣಯ ಮಾಡುವುದು ಬೇಡ. ನಿಮ್ಮ ಕುಟುಂಬಕ್ಕೆ ನೀವು ಜವಾಬ್ದಾರರು ಹಾಗಾಗಿ ಯಾರೂ ಇಂಥಹಾ ಕೆಲಸಕ್ಕೆ ಕೈ ಹಾಕಬಾರದು'' ಎಂದಿದ್ದಾರೆ ಶಿವಣ್ಣ.

    English summary
    hiva Rajkumar emotional words about Puneeth Rajkumar. He said it seems like I lost my own child.
    Sunday, October 31, 2021, 11:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X