For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಹೆಜ್ಜೆಯನ್ನು ಹಿಂಬಾಲಿಸಿದ ಅಭಿಮಾನಿಗಳು

  |

  ತಮ್ಮ ನೆಚ್ಚಿನ ತಾರೆಯರ ಜೀವನ ಶೈಲಿಯನ್ನು ಸ್ಫೂರ್ತಿಯಾಗಿಸಿಕೊಂಡು ಸಾಗುತ್ತಿರುವ ಅಭಿಮಾನಿಗಳು ಹೆಚ್ಚಿದ್ದಾರೆ. ಸಮಾಜಕ್ಕೆ ಒಳ್ಳೆಯದು ಎನಿಸುವ ಕೆಲಸಗಳನ್ನು ನಟರು ಮಾಡಿದಾಗ ಅವರ ಅಭಿಮಾನಿಗಳು ಸಹ ಅದನ್ನು ಫಾಲೋ ಮಾಡ್ತಾರೆ. ಅದಕ್ಕೆ ತಾಜಾ ಉದಾಹರಣೆ ಶಿವರಾಜ್ ಕುಮಾರ್ ಅಭಿಮಾನಿಗಳು.

  Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Filmibeat Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಳೆದ ತಿಂಗಳು ಮೈಸೂರು ಮೃಗಾಯಲದಿಂದ ಪಾರ್ವತಿ ಎಂಬ ಆನೆಯನ್ನು ದತ್ತು ಪಡೆದುಕೊಂಡಿದ್ದರು. ಶಿವಣ್ಣನ ಈ ಕೆಲಸ ಅಭಿಮಾನಿ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಇದೀಗ, ಶಿವಣ್ಣನ ಸ್ಫೂರ್ತಿಯಿಂದ ಅಭಿಮಾನಿಗಳು ಸುಮಾರು 35 ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮುಂದೆ ಓದಿ....

  ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್

  ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

  ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಅಭಿಮಾನಿ ಸಂಘ 89000 ರೂಪಾಯಿಗಳನ್ನು ಪಾವತಿಸಿ ಮೈಸೂರು ಮೃಗಾಲಯದ ನವಿಲು, ರೀಸಸ್ ಮೆಕಾಕ್, ಮ್ಯಾಂಡರಿನ್ ಡಕ್, ನಾಲ್ಕು ಕೊಂಬಿನ ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

  ಮೃಗಾಯಲದಿಂದ ಶ್ಲಾಘನೆ

  ಮೃಗಾಯಲದಿಂದ ಶ್ಲಾಘನೆ

  ಒಂದು ವರ್ಷದ ಅವಧಿಗೆ ದಿನಾಂಕ 6 ಸೆಪ್ಟೆಂಬರ್ 2020 ರಿಂದ 5 ಸೆಪ್ಟೆಂಬರ್ 2020 ರವರೆಗೂ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಮೃಗಾಲಯ ಅಧಿಕೃರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಾಣಿ ಸಂರಕ್ಷಣೆ ಕಾರ್ಯಕ್ಕ ಕೈ ಜೋಡಿಸಿದವರಿಗೆ ಮೃಗಾಯಲ ಆಡಳಿತ ಮಂಡಳಿ ಹೃದಯಪೂರ್ವಕ ಧನ್ಯವಾದ ತಿಳಿಸಿದೆ.

  ಪಾರ್ವತಿ ಆನೆ ದತ್ತು ಪಡೆದಿದ್ದ ಶಿವಣ್ಣ

  ಪಾರ್ವತಿ ಆನೆ ದತ್ತು ಪಡೆದಿದ್ದ ಶಿವಣ್ಣ

  20/08/2020 ರಿಂದ 19/08/2021 ರವರೆಗೆ "ಪಾರ್ವತಿ" ಎಂಬ ಆನೆ ಮರಿಯನ್ನು 75,000 ರೂ ಪಾವತಿಸಿ ನಟ ಶಿವರಾಜ್ ಕುಮಾರ್ ದತ್ತು ಪಡೆದಿದ್ದರು. ಮೈಸೂರು ಮೃಗಾಲಯ ಮತ್ತು ಕರ್ನಾಟಕದ ಮೃಗಾಲಯ ಪ್ರಾಧಿಕಾರ ಡಾ.ಶಿವರಾಜ್ ‌ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿತ್ತು. ಈಗ ಅವರ ಅಭಿಮಾನಿಗಳು ಇದೇ ನಡೆಯನ್ನು ಅನುಸರಿಸಿದ್ದು ವಿಶೇಷವೆನಿಸಿಕೊಂಡಿದೆ.

  ಚಿರತೆ ದತ್ತು ಪಡೆದ ಧನ್ವೀರ್

  ಚಿರತೆ ದತ್ತು ಪಡೆದ ಧನ್ವೀರ್

  'ಬಜಾರ್' ಚಿತ್ರದ ನಾಯಕ ಧನ್ವೀರ್ ಅವರ ಸಹ ಮೈಸೂರು ಮೃಗಾಲಯದಿಂದ ಕರಿ ಚಿರತೆಯನ್ನು ದತ್ತು ಪಡೆದಿದ್ದಾರೆ. ಒಂದು ವರ್ಷದ ಅವಧಿಗೆ 35 ಸಾವಿರ ರೂಪಾಯಿ ನೀಡಿ ದತ್ತು ಪಡೆದಿದ್ದಾರೆ. ಧನ್ವೀರ್ ಅವರ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

  English summary
  Kannada actor shiva rajkumar fans club has adopted peacock, rhesus macaque, mandarin duck, four horned antelope and other animals of mysuru zoo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X