»   » ಮತ್ತೆ ಒಂದಾದ ಹರ್ಷ-ಶಿವಣ್ಣ, ಚಿತ್ರದ ಹೆಸರೇನು ಗೊತ್ತಾ?

ಮತ್ತೆ ಒಂದಾದ ಹರ್ಷ-ಶಿವಣ್ಣ, ಚಿತ್ರದ ಹೆಸರೇನು ಗೊತ್ತಾ?

Posted By:
Subscribe to Filmibeat Kannada

ಬರೋಬ್ಬರಿ 3 ದಶಕಗಳ ಕಾಲ ಸುಮಾರು 110ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಲೂ 25ರ ಹರೆಯದ ಯುವಕರನ್ನು ಮೀರಿಸುವಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ಅವರು ಮತ್ತೆ ಹ್ಯಾಟ್ರಿಕ್ ಹೀರೋ ಆದ ಸಂಭ್ರಮದಲ್ಲಿದ್ದಾರೆ.

ಇನ್ನು ಇವರ ಜೊತೆ ಸತತ ಎರಡು ಬಾರಿ ಕೆಲಸ ಮಾಡಿ ಭರ್ಜರಿ ಗೆಲುವು ಕಂಡವರು ಎಂದರೆ ಅದು ನಿರ್ದೇಶಕ ಎ.ಹರ್ಷ ಅವರು. 'ಭಜರಂಗಿ' ನಂತರ 'ವಜ್ರಕಾಯ' ಸಿನಿಮಾ ಮಾಡಿ ಗೆದ್ದ ನಿರ್ದೇಶಕ ಹರ್ಷ ಅವರು ಇದೀಗ ಶಿವಣ್ಣ ಅವರ ಜೊತೆ ಮತ್ತೊಂದು ಪ್ರಾಜೆಕ್ಟ್ ಗೆ ತಯಾರಾಗಿದ್ದಾರೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

ಹೌದು ಎರಡು ಬಾರಿ ಕೂಡ ಆಂಜನೇಯ ಸ್ವಾಮಿಯ ಮೊರೆ ಹೋಗಿದ್ದ ನಿರ್ದೇಶಕ ಹರ್ಷ ಮತ್ತು ಶಿವಣ್ಣ ಅವರು ಈ ಬಾರಿ ಕೂಡ ಆಂಜನೇಯನ ಪಾದಕ್ಕೆರಗಿದ್ದಾರೆ. ಅಂದಹಾಗೆ ಈ ಬಾರಿ ಚಿತ್ರಕ್ಕೆ ಯಾವ ಹೆಸರು ಇಟ್ಟಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ಮೈ ನೇಮ್ ಇಸ್ ಆಂಜಿ'

ಈ ಬಾರಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಎ.ಹರ್ಷ ಅವರು ಮಾಡುತ್ತಿರುವ ಹೊಸ ಚಿತ್ರದ ಹೆಸರು 'ಮೈ ನೇಮ್ ಇಸ್ ಆಂಜಿ'. ಅಂತೂ ಹರ್ಷ ಅವರು ಮೂರನೇ ಬಾರಿ ಕೂಡ ಆಂಜನೇಯನ ಹೆಸರು ಬಿಡಲ್ಲ ಅಂತಾಯ್ತು.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]

ಜಯಣ್ಣ ನಿರ್ಮಾಣ

ನಿರ್ಮಾಪಕರಾದ ಜಯಣ್ಣ ಅವರು ಶಿವಣ್ಣ-ಹರ್ಷ ಅವರ ಹೊಸ ಚಿತ್ರಕ್ಕೆ ಬಂಡವಾಳ ಹೂಡಲು ಸಿದ್ದರಾಗಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ಅವರ 'ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ಜಯಣ್ಣ ಅವರು ಬಂಡವಾಳ ಹೂಡುತ್ತಿದ್ದು, ಶಿವಣ್ಣ ಅವರ ನಟನಾ ವೃತ್ತಿಪರತೆ ಮತ್ತು ಶಿಸ್ತು ನೋಡಿ ಅವರ ಮೇಲಿನ ಗೌರವ ಹೆಚ್ಚಾಗಿ ಮತ್ತೊಂದು ಯೋಜನೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

ನಿರ್ದೇಶಕ ಎ.ಹರ್ಷ

ಇನ್ನೇನು ನಿರ್ದೇಶಕ ಹರ್ಷ ಅವರು ಶರಣ್ ಅಭಿನಯದ 'ಜೈ ಮಾರುತಿ 800' ಸಿನಿಮಾದ ಬಿಡುಗಡೆಗೆ ಸಿದ್ಧರಾಗುತ್ತಿದ್ದು, ತದನಂತರ ದುನಿಯಾ ವಿಜಯ್ ಅವರ ಜೊತೆ ಹೊಸ ಪ್ರಾಜೆಕ್ಟ್ ನಲ್ಲಿ ಹಾಗೂ 'ಕಪಿಚೇಷ್ಠೆ' ಎಂಬ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಯಶಸ್ಸಿನ ನಂತರ 'ಸಂತೆಯಲ್ಲಿ ನಿಂತ ಕಬೀರ' ಮುಗಿಸಿದ್ದು, ನಂತರ 'ಸನ್ ಆಫ್ ಬಂಗಾರದ ಮನುಷ್ಯ' ಹಾಗೂ 'ಶ್ರೀಕಂಠ' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ. ಒಟ್ನಲ್ಲಿ ಶಿವಣ್ಣ ಅವರು ಕೈ ತುಂಬಾ ಪ್ರಾಜೆಕ್ಟ್ ಹಿಡಿದುಕೊಂಡು ಓಡಾಡುತ್ತಿದ್ದಾರೆ.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

ಎಲ್ಲಾ ಆದ ಮೇಲೆ 'ಆಂಜಿ'

ಒಟ್ನಲ್ಲಿ ನಿರ್ದೇಶಕ ಹರ್ಷ ಮತ್ತು ಶಿವಣ್ಣ ಅವರ ಈ ಎಲ್ಲಾ ಪೂರ್ವನಿಯೋಜಿತ ಯೋಜನೆಗಳು ಮುಗಿದ ನಂತರವಷ್ಟೇ ಇಬ್ಬರೂ ಒಟ್ಟಿಗೆ 'ಮೈ ನೇಮ್ ಇಸ್ ಆಂಜಿ' ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 'ಭಜರಂಗಿ', ವಜ್ರಕಾಯ' ದಂತಹ ಹಿಟ್ ಸಿನಿಮಾ ಕೊಟ್ಟ ಈ ಜೋಡಿ ಮತ್ತೆ ವಿಭಿನ್ನ ಪ್ರಾಜೆಕ್ಟ್ ನಲ್ಲಿ ತೊಡಗಿದ್ದಾರೆ.

English summary
After the success of Bhajarangi & Vajrakaya, Shivarajkumar & Harsha once again team up for yet another film. The new film of Harsha for Shivarajkumar has been titled as 'My Name Is Anji'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada