»   » 'ಕತಾರ್'ನಲ್ಲಿ ಪ್ರಣಿತಾ ಜೊತೆ ಹ್ಯಾಟ್ರಿಕ್ ಹೀರೋ ಡ್ಯುಯೆಟ್

'ಕತಾರ್'ನಲ್ಲಿ ಪ್ರಣಿತಾ ಜೊತೆ ಹ್ಯಾಟ್ರಿಕ್ ಹೀರೋ ಡ್ಯುಯೆಟ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡಿನ ಚಿತ್ರೀಕರಣವನ್ನ 'ಕತಾರ್'ನಲ್ಲಿ ಶೂಟ್ ಮಾಡಲಾಗಿದೆ. ಕತಾರ್ ಸಮೀಪದ ಜಕ್ರೀತ್ ಫಿಲಂ ಸಿಟಿ ಹಾಗೂ ಸಮುದ್ರ ತೀರದಲ್ಲಿ 'ಲೀಡರ್' ಚಿತ್ರದ ಹಾಡನ್ನ ಶೂಟ್ ಮಾಡಲಾಗಿದೆ. ಈ ಹಾಡಿನಲ್ಲಿ ನಟಿ ಪ್ರಣಿತಾ ಜೊತೆ ಸೆಂಚುರಿ ಸ್ಟಾರ್ ಶಿವಣ್ಣ ಡ್ಯುಯೆಟ್ ಹಾಡುತ್ತಿದ್ದಾರೆ.['ಲೀಡರ್' ನಲ್ಲಿ ಶಿವಣ್ಣ ನ ಪಾತ್ರ ಏನು ಗೊತ್ತೇ?]

''ಏನಿದೆ ನಿನ್ನ ಕಣ್ಣಲಿ ಹೇಳು ಪಿಸು ಮಾತಲಿ'' ಎಂಬ ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಸಾಹಿತ್ಯಕ್ಕೆ ವೀರ್ ಸಮರ್ಥ ಸಂಗೀತನ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಭೂಷಣ್ ನೃತ್ಯ ಸಂಯೋಜನೆಯಿದೆ. ಅಂದ್ಹಾಗೆ, ಭೂಷಣ್, ಈ ಹಿಂದೆ ಶಿವರಾಜ್ ಕುಮಾರ್ ತೀರ್ಪುಗಾರರಾಗಿದ್ದ 'ಕಿಕ್' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.[ಶಿವಣ್ಣನ 'ಲೀಡರ್' ಚಿತ್ರದ ಫಸ್ಟ್‌ ಲುಕ್ ರಿಲೀಸ್]

Shiva rajkumar Mass Leader Shooting in Qatar

'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಲಿದ್ದಾರೆ. ತರುಣ್ ಶಿವಪ್ಪ ಬಂಡವಾಳ ಹೂಡಲಿದ್ದಾರೆ. ಗುರು ಪ್ರಶಾಂತ್ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದಂತೆ, ಲೂಸ್ ಮಾದ ಯೋಗಿ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ ಸೇರಿದಂತೆ 'ಲೀಡರ್' ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ.

English summary
Shivarajakumar's New film 'Mass Leader' is Almost Complete Except for a Song and the Song is Being Shot in Qatar Currently. Shivarajakumar and Praneetha are Participating in the Shooting of the Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada