ಮೆಲ್ಬರ್ನ್ನಲ್ಲಿ 'ಮುಂಬಾ' ಪ್ರಶಸ್ತಿ ಪಡೆದ ಶಿವಣ್ಣ

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಆಸ್ಟ್ರೇಲಿಯಾದ 'ಮೆಲ್ಬರ್ನ್‌ ಕನ್ನಡ ಸಂಘ'ದ ವತಿಯಿಂದ 'ಮುಂಬಾ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನವೆಂಬರ್ 10 ರಂದು ಮೆಲ್ಬರ್ನ್‌ ಕನ್ನಡ ಸಂಘ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮೆಲ್ಬರ್ನ್‌ ಹೋಗಿದ್ದ ಶಿವಣ್ಣಗೆ ಅಲ್ಲಿನ ಕನ್ನಡಿಗರು ಪ್ರೀತಿಯಿಂದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸುಮಾರು 32ವರ್ಷಗಳಿಂದ ಕಾಂಗರೋ ನಾಡಲ್ಲಿ ಕನ್ನಡಾಭಿಮಾನ ಮೆರೆಯುತ್ತಿರುವ ಮೆಲ್ಬರ್ನ್‌ ಕನ್ನಡ ಸಂಘ 'ಕನ್ನಡ ಭವನ' ನಿರ್ಮಾಣ ಮಾಡಲು ಮುಂದಾಗಿದೆ. ಈ ಕನ್ನಡ ಭವನವನ್ನ ನಿರ್ಮಾಣ ಕಾರ್ಯಕ್ಕೆ ನಟ ಹ್ಯಾಟ್ರಿಕ್ ಹೀರೋ ಚಾಲನೆ ನೀಡಿ ಶುಭಹಾರೈಸಿದ್ದಾರೆ.

ಅಂದ್ಹಾಗೆ, ಮುಂಬಾ ಫೆಸ್ಟಿವಲ್ ಎಂದು ಕರೆಯಲ್ಪಡುವ ಈ ಕಾರ್ಯಕ್ರಮ ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಸುಮಾರು ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವವನ್ನು 1955ರಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

Shiva rajkumar Received Moomba Star Award

ಮೆಲ್ಬರ್ನ್‌ ಕನ್ನಡ ಸಂಘದ ಬಗ್ಗೆ

35 ವರ್ಷಗಳಿಂದ ಕನ್ನಡ ಕುರಿತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಕನ್ನಡದ ಕಂಪು ಹೆಚ್ಚಿಸಿದ್ದಾರೆ. ಮೆಲ್ಬರ್ನ್‌ನಲ್ಲಿ ಕನ್ನಡ ಶಾಲೆಯನ್ನ ತೆರೆದಿದ್ದು, ಇವರೆಗೂ ಅಲ್ಲಿ ಸುಮಾರು 75ಕ್ಕೂ ಹೆಚ್ಚು ಮಕ್ಕಳು ಕನ್ನಡವನ್ನ ಕಲಿತಿದ್ದು, ಈಗಲೂ ಕಲಿಯುತ್ತಿದ್ದಾರೆ.

ಅಷ್ಟೇ ಅಲ್ಲ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯ ಕೂಡ ಇದೆ. 32ವರ್ಷಗಳ ಅವಧಿಯಲ್ಲಿ ಕರುನಾಡಿನಿಂದ ಅನೇಕ ಕಲಾವಿದ್ರು, ಸಾಹಿತಿಗಳು, ನಾಟಕಕಾರರು ಸೇರಿದಂತೆ, ನಾಡಿನ ಜನಪ್ರಿಯರೆಲ್ಲಾ ಮೆಲ್ಬರ್ನ್‌ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
HatrickHero Dr.Shivarajkumar Received the Prestigious “Moomba Star”Award from Melbourne Kannada Sangha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X