Don't Miss!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕುತೂಹಲ ಮೂಡಿಸುತ್ತಿದೆ ಶಿವಣ್ಣನ 'ವೇದ' ಹೊಸ ಟೀಸರ್: ಸಿನಿಮಾ ಬಿಡುಗಡೆ ಯಾವಾಗ?
ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಅದ್ಧೂರಿಯಾಗಿಯೂ, ಭಿನ್ನವಾಗಿಯೂ, ರಗಡ್ ಆಗಿಯೂ ಇರಲಿದೆ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ.
ಈಗಾಗಲೇ 'ವೇದಾ' ಸಿನಿಮಾದ 'ವೆಪನ್ಸ್ ಆಫ್ ವೇದಾ' ಹೆಸರಿನ ಟೀಸರ್ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಡೆಡ್ಲಿ ಆಯುಧಗಳು ಝಳಪಿಸಲಿವೆ ಎಂಬುದನ್ನು ಆ ಟೀಸರ್ ಹೇಳಿತ್ತು. ಬಳಿಕ 'ವೇದಾ' ಸಿನಿಮಾದ ಹಾಡೊಂದು ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿತ್ತು. ಇದೀಗ ಹೊಸದೊಂದು ಟೀಸರ್ ಬಿಡುಗಡೆ ಆಗಿದೆ.
'ವೇದ' ಸಿನಿಮಾದ ಎರಡನೇ ಟೀಸರ್ ಇದಾಗಿದ್ದು, 'ವೇದ' ಸಿನಿಮಾ ಭಿನ್ನವಾಗಿಯೂ, ಕತೆ ಭೀಕರವಾಗಿಯೂ, ಶಿವಣ್ಣ ರಗಡ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಟೀಸರ್ ತೋರಿಸುತ್ತಿದೆ.
ಈ ಟೀಸರ್ ಅಭಿಮಾನಿಗಳನ್ನು ತುಸು ಗೊಂದಲಕ್ಕೂ ನೂಕಿದೆ. 'ವೇದ' ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದಾಗ ಇದೊಂದು ರಿವೇಂಜ್ ಕತೆಯುಳ್ಳ ಸಿನಿಮಾ ಎಂದುಕೊಂಡಿದ್ದರು. ಆದರೆ ಈಗ ಬಿಡುಗಡೆ ಆಗಿರುವ ಟೀಸರ್‌ನಿಂದ 'ವೇದ' ಅತಿಮಾನುಷ ಕತೆಯುಳ್ಳ ಸಿನಿಮಾ ಇರಬಹುದೆಂಬ ಅನುಮಾನ ಮೂಡಿದೆ.
'ವೆಪನ್ಸ್ ಆಫ್ ವೇದ' ಟೀಸರ್ ಬಿಡುಗಡೆ ಆಗಿದ್ದಾಗ ಈ ಸಿನಿಮಾದ ಮೇಲೆ ತಮಿಳಿನ 'ಅಸುರನ್' ಸಿನಿಮಾದ ಛಾಯೆ ಇರುವುದಾಗಿ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದರು. ಆದರೆ ಈ ಹೊಸ ಟೀಸರ್ ಬಿಡುಗಡೆ ಆದ ಬಳಿಕ ಅದು ಸುಳ್ಳಾಗಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದ್ದು, ಸಿನಿಮಾವು ಡಿಸೆಂಬರ್ 23 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.
'ವೇದ' ಸಿನಿಮಾ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇದು ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಶಿವರಾಜ್ ಕುಮಾರ್ ಅವರ ಹೋಂ ಪ್ರೊಡಕ್ಷನ್‌ನ ಮೊದಲ ಸಿನಿಮಾ. 'ವೇದ' ಸಿನಿಮಾವನ್ನು ಗೀತಾ ಪ್ರೊಡಕ್ಷನ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾಕ್ಕೆ ಶಿವಣ್ಣನ ನಂಬಿಕಸ್ಥ ನಿರ್ದೇಶಕರಲ್ಲೊಬ್ಬರಾದ ಹರ್ಷಾ ನಿರ್ದೇಶನ ಮಾಡಿದ್ದಾರೆ.
'ವೇದ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಿ, ನಟಿ ಉಮಾಶ್ರೀ, ಶ್ವೇತಾ ಚೆಂಗಪ್ಪ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಸಾಗರ್ ಶಿವಮೊಗ್ಗ ಇನ್ನಿತರರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ.