Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಟೈಲಿಷ್ ಗ್ಯಾಂಗ್‌ಸ್ಟರ್ ಆದ ಶಿವಣ್ಣ, 'ಗೋಸ್ಟ್' ಲುಕ್‌ಗೆ ವಾವ್ ಎಂದ ಅಭಿಮಾನಿಗಳು
'ವೇದ' ಸಿನಿಮಾ ಮೂಲಕ ಹಿಟ್ ಸಿನಿಮಾ ನೀಡಿರುವ ನಟ ಶಿವರಾಜ್ ಕುಮಾರ್ ಈಗ ಮತ್ತೊಂದು ಸ್ಟೈಲಿಷ್ ಸಿನಿಮಾಕ್ಕೆ ತಯಾರಾಗಿದ್ದಾರೆ.
60 ರ ವಯಸ್ಸಿನಲ್ಲೂ ವಿವಿಧ ಪಾತ್ರಗಳ ಮೂಲಕ ಜನರನ್ನು, ಅಭಿಮಾನಿಗಳನ್ನು ರಂಜಿಸುತ್ತಿರುವ ಶಿವಣ್ಣ ತಮ್ಮ ಮುಂದಿನ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಂಬಳ
ಕುರಿತ
ಸಿನಿಮಾ
ಕಮಾಲ್
ಮಾಡುವ
ಭರವಸೆಯಲ್ಲಿ
ರಾಜೇಂದ್ರ
ಸಿಂಗ್
ಬಾಬು
ಶಿವಣ್ಣನ ನಟಿಸಲಿರುವ 'ಗೋಸ್ಟ್' ಸಿನಿಮಾದ ಪೋಸ್ಟರ್ ಒಂದು ಹೊಸ ವರ್ಷದ ಶುಭ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿನ ಶಿವಣ್ಣನ ಗೆಟಪ್ ಸಖತ್ ಗಮನ ಸೆಳೆಯುತ್ತಿದೆ.
'ಗೋಸ್ಟ್' ಸಿನಿಮಾದ ಪೋಸ್ಟರ್‌ನಲ್ಲಿ ಶಿವಣ್ಣ ಬಹಳ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ನಿಜ ಚಿತ್ರವಲ್ಲದೆ ಒಂದು ರೀತಿ ಗ್ರಾಫಿಕಲ್ ಚಿತ್ರವನ್ನು ಬಳಸಲಾಗಿದ್ದು, 'ಓಂ' ಸಮಯದ ಶಿವಣ್ಣನನ್ನು ನೋಡಿದ ಅನುಭವವಾಗುತ್ತದೆ.
ಶಿವಣ್ಣ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಹೊಂದಿದ್ದ ಹೇರ್‌ಸ್ಟೈಲ್ ರೀತಿಯಲ್ಲಿಯೇ 'ಗೋಸ್ಟ್' ಸಿನಿಮಾದ ಪೋಸ್ಟರ್‌ನಲ್ಲಿಯೂ ಹೇರ್‌ಸ್ಟೈಲ್ ಇದೆ. 'ಒನ್ಸ್ ಎ ಗ್ಯಾಂಗ್‌ಸ್ಟರ್ ಆಲ್‌ವೇಸ್ ಎ ಗ್ಯಾಂಗ್‌ಸ್ಟರ್' ಎಂಬ ಟ್ಯಾಗ್‌ಲೈನ್ 'ಗೋಸ್ಟ್' ಸಿನಿಮಾದ ಪೋಸ್ಟರ್‌ನಲ್ಲಿದೆ.
ಸೂಟು ಧರಿಸಿ, ಹಳೆಯ ಹೇರ್‌ಸ್ಟೈಲ್‌ನಲ್ಲಿ ಬಾಯಲ್ಲಿ ಬೀಡಿ ಕಚ್ಚಿಕೊಂಡು ನಗುತ್ತಾ ಭರ್ಜರಿ ಲುಕ್‌ನಲ್ಲಿ ಶಿವಣ್ಣ 'ಗೋಸ್ಟ್' ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್ ಸಖತ್ ವೈರಲ್ ಆಗಿದ್ದು, ಶಿವಣ್ಣನ ಅಭಿಮಾನಿಗಳಂತೂ ಸಖತ್ ಥ್ರಿಲ್ ಆಗಿದ್ದಾರೆ.
'ಗೋಸ್ಟ್' ಸಿನಿಮಾವನ್ನು ನಟ, ನಿರ್ದೇಶಕ ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಕತೆಯಾಗಿದ್ದು ಆಕ್ಷನ್, ಥ್ರಿಲ್ಲರ್ ಅಂಶಗಳ ಜೊತೆಗೆ ಕಾಮಿಡಿಯೂ ಇರಲಿದೆ. ಕೆಲವು ದಶಕಗಳ ಹಿಂದಿನ ಸಮಯದಲ್ಲಿ ಕತೆ ನಡೆಯಲಿದೆ. ಸಿನಿಮಾದಲ್ಲಿ ಶಿವಣ್ಣ ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿವರಾಜ್ ಕುಮಾರ್ ನಟನೆಯ 'ವೇದ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ತಮ್ಮದೇ ಹೋಮ್ ಪ್ರೊಡಕ್ಷನ್‌ನ ಮೊದಲ ಸಿನಿಮಾ 'ವೇದ' ಆಗಿದ್ದು ಸೂಪರ್ ಹಿಟ್ ಆಗಿದೆ. ಪ್ರಬಲ ಮಹಿಳಾ ಪಾತ್ರಗಳು ಈ ಸಿನಿಮಾದಲ್ಲಿ ಗಮನ ಸೆಳೆದಿವೆ.
'ವೇದ'ದ ಬಳಿಕ ಶಿವಣ್ಣ 'ಗೋಸ್ಟ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ರಜನೀಕಾಂತ್ ಜೊತೆಗೆ 'ಜೈಲರ್' ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ತೆಲುಗಿನಲ್ಲಿಯೂ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ನೀ ಸಿಗೋವರೆಗೆ' ಸಿನಿಮಾದಲ್ಲಿ ನಟಿಸಿದ್ದು ಅದು ಬಿಡುಗಡೆಗೆ ತಯಾರಾಗಿದೆ. ತೆಲುಗು ನಿರ್ದೇಶಕರೊಬ್ಬರ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ 'ಕ್ಯಾಪ್ಟನ್ ಮಿಲ್ಲರ್', 'ಬಾದ್ ಶಾ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.