»   » ಶಿವಣ್ಣ ಇಂತಹ ಪಾತ್ರ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಕನಸಾಗಿತ್ತು

ಶಿವಣ್ಣ ಇಂತಹ ಪಾತ್ರ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಕನಸಾಗಿತ್ತು

Posted By:
Subscribe to Filmibeat Kannada

ನಟ ಶಿವರಾಜ್ ಕುಮಾರ್ 115ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಶಿವಣ್ಣ ಕೆಲ ವಿಶೇಷವಾದ ಪಾತ್ರಗಳನ್ನು ಮಾಡಬೇಕು ಎಂಬ ದೊಡ್ಡ ಆಸೆ ಇತ್ತು.

ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣ

ಈ ವಿಷಯವನ್ನು ಸ್ವತ ಶಿವಣ್ಣ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ತಾಯಿ ಪಾರ್ವತಮ್ಮ ಅವರಿಗೆ ನಾನು ಕೆಲ ವಿಭಿನ್ನ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಇತ್ತು. ಅಂತಹ ಸಿನಿಮಾ ಮುಂದೆ ಮಾಡುತ್ತೇನೆ.' ಅಂತ ಶಿವಣ್ಣ ಹೇಳಿದ್ದಾರೆ. ಮುಂದೆ ಓದಿ..

'ಮನಸು ಮಲ್ಲಿಗೆ' ಕಾದಂಬರಿ

ಶಿವಣ್ಣ ಈಗಾಗಲೇ ಅನೇಕ ಕಾದಂಬರಿ ಆಧಾರಿತ ಸಿನಿಮಾ ಮಾಡಿದ್ದಾರೆ. ಅದೇ ರೀತಿ 'ಮನಸು ಮಲ್ಲಿಗೆ' ಎನ್ನುವ ಒಂದು ಕಾದಂಬರಿಯ ಮೇಲೆ ಸಿನಿಮಾ ಮಾಡಬೇಕು ಎಂಬುದು ಪಾರ್ವತಮ್ಮ ಅವರ ಆಸೆಯಾಗಿತ್ತು.

'ಭಕ್ತ ಅಂಬರೀಶ'

ಶಿವಣ್ಣ ಅವರಿಂದ 'ಭಕ್ತ ಅಂಬರೀಶ' ಪಾತ್ರವನ್ನು ಮಾಡಿಸಬೇಕು ಎಂಬುದು ಪಾರ್ವತಮ್ಮ ಅವರ ದೊಡ್ಡ ಕನಸು ಆಗಿತಂತೆ. ಆದರೆ ಈ ಹಿಂದೆಯೇ ಈ ಚಿತ್ರದ ಬಗ್ಗೆ ಸುದ್ದಿ ಹರಿದಾಡಿದರೂ, ಸಿನಿಮಾ ಮಾತ್ರ ಇನ್ನೂ ಸೆಟ್ಟೇರಿಲ್ಲ.

ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!

ಆದಷ್ಟು ಬೇಗ ಸಿನಿಮಾ ಮಾಡ್ತಾರೆ

ತಾಯಿ ಪಾರ್ವತಮ್ಮ ಅವರ ಆಸೆಯನ್ನು ಶಿವಣ್ಣ ನೆರವೇರಿಸಲಿದ್ದಾರಂತೆ. 'ಭಕ್ತ ಅಂಬರೀಶ' ಸಿನಿಮಾವನ್ನು ಆದಷ್ಟು ಬೇಗ ಶಿವಣ್ಣ ಮಾಡಲಿದ್ದಾರಂತೆ.

ಸಾಲು ಸಾಲು ಸಿನಿಮಾ

ಶಿವಣ್ಣ ಅವರ ಸಿನಿಮಾಗಳ ಲಿಸ್ಟ್ ತುಂಬನೇ ದೊಡ್ಡದಿದೆ. ಸದ್ಯ ಅವರ 'ಮಾಸ್ ಲೀಡರ್' ಮತ್ತು 'ಟಗರು' ಸಿನಿಮಾಗಳು ರಿಲೀಸ್ ಹಂತದಲ್ಲಿದೆ.

ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!

English summary
Kannada Actor Shiva Rajkumar Spoke About Parvathamma Rajkumar in his recent interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada