»   » 'ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!

'ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!

Posted By:
Subscribe to Filmibeat Kannada

'ರಾಜ್ ಕುಟುಂಬಕ್ಕೂ, ರಾಜಕಾರಣಕ್ಕೂ ಮಾರುದ್ದ ದೂರ' ಅನ್ನುವ ಮಾತಿದ್ರೂ, ಡಾ.ಶಿವರಾಜ್ ಕುಮಾರ್ 'ಸಿ.ಎಂ' ಆಗೋಕೆ ಹೋರ್ಟಿದ್ದಾರಾ? ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ನಿಂತು ಸೋಲು ಅನುಭವಿಸಿದ್ದಾಯ್ತು. ಇದೀಗ ಶಿವಣ್ಣ ಎಂತಹ ನಿರ್ಧಾರ ಮಾಡಿಬಿಟ್ಟರು' ಅಂತ ದೂರಾಲೋಚನೆ ಮಾಡುವ ಮುನ್ನ ಪೂರಾ ಸಮಾಚಾರವನ್ನ ಕೇಳಿ.

ನಿಮಗೆ ಗೊತ್ತಿರುವಂತೆ, ಇದು ರೀಲ್ ಸಮಾಚರವಷ್ಟೆ. ಅದ್ರಲ್ಲೂ ನಾವು ಸ್ವಲ್ಪ ಟ್ವಿಸ್ಟ್ ಕೊಟ್ಟಿದ್ದೀವಿ. ಸಿ.ಎಂ ಅಂದ ಮಾತ್ರಕ್ಕೆ ಶಿವಣ್ಣ ಸಿನಿಮಾದಲ್ಲಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ತಿಲ್ಲ. ಸಿ.ಎಂ ಅಂದ್ರೆ (C)ಕಾಮನ್ (M)ಮ್ಯಾನ್ ಆಗಿ ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಗೆ ಸೂಚಿಸಿದ್ದಾರೆ.

'ಜೈಹೋ' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು 'ಠಾಗೂರ್' ಚಿತ್ರದಲ್ಲಿ ಚಿರಂಜೀವಿ, ಕಾಮನ್ ಮ್ಯಾನ್ ಆಗಿ ಸಮಾಜದಲ್ಲಿನ ಕುಂದುಕೊರತೆಯನ್ನ ತಿದ್ದಿತೀಡಿದಂತೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನ ಎಬ್ಬಿಸುವುದಕ್ಕೆ ಶಿವಣ್ಣ ಸಿ.ಎಂ ಆಗ್ತಿದ್ದಾರೆ! ಅಂದ್ಹಾಗೆ ಶಿವಣ್ಣ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿರುವುದು 'ಶ್ರೀಕಂಠ' ಚಿತ್ರದಲ್ಲಿ. [ಶಿವಮೊಗ್ಗದಲ್ಲಿ ಗೀತಾ ಪರ ಉಪೇಂದ್ರ ರೋಡ್ ಶೋ]

Shivanna as Common Man in his next Srikanta

'ಶ್ರಾವಣಿ-ಸುಬ್ರಮಣ್ಯ' ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ 'ಶ್ರೀಕಂಠ' ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಖಾತೆಯಲ್ಲಿರುವ 110 ಚಿತ್ರಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟ ಪಾತ್ರದಲ್ಲಿ ಶಿವಣ್ಣನ ತೋರಿಸ್ಬೇಕು ಅಂತ ಕಳೆದ 10 ತಿಂಗಳಿನಿಂದ ಮಂಜು ಸ್ವರಾಜ್ ಚಿತ್ರಕಥೆಯನ್ನ ರೆಡಿಮಾಡ್ತಿದ್ದಾರೆ. [ಪ್ರಧಾನಿ ಮೋದಿಯ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು?]

ಕಾಮನ್ ಮ್ಯಾನ್ 'ಶ್ರೀಕಂಠ' ಆಗಿರುವುದರಿಂದ ಇಲ್ಲಿ ಶಿವಣ್ಣ ಲಾಂಗ್ ಹಿಡಿಯುವುದಿಲ್ಲ. ಹಳೇ ಪಂಟರ್ ಆಗಿ ಪ್ರತ್ಯಕ್ಷವಾಗುವುದಿಲ್ಲ. ಶಿವಣ್ಣನಿಗೆ ಹೊಸ ಇಮೇಜ್ ಕೊಡುತ್ತಿರುವ ಮಂಜು ಸ್ವರಾಜ್, ''ಇಲ್ಲಿವರೆಗೂ ನೀವು ಊಹಿಸಿಕೊಳ್ಳದ ಶಿವಣ್ಣನನ್ನ 'ಶ್ರೀಕಂಠ' ಮೂಲಕ ತೆರೆಮೇಲೆ ತರ್ತೀನಿ. 'ಶ್ರೀಕಂಠ' ವಿಭಿನ್ನವಾಗಿರುವ ಕಥೆ. ಈಗಿನ ಸಮಾಜದ ದುಸ್ಥಿತಿಯಿಂದ ನಲಗುವ ಸಾಮಾನ್ಯ ಜನರ ಕಥೆಯಿದು. ಅಂತ ಸಾಮಾನ್ಯ ಜನರ ಪ್ರತಿನಿಧಿಯಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ'', ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ.

Shivanna1

''ಶಿವಣ್ಣ ಇಮೇಜ್ ಬದಲಾದ್ರೂ, ಅವರ ಅಭಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತೆ. ಎಲ್ಲಾ ಮನರಂಜನಾ ಸರಕುಗಳಿರುವ ಕಂಪ್ಲೀಟ್ ಎಂಟರ್ ಟೇನರ್ ಈ ಶ್ರೀಕಂಠ'', ಅಂತಾರೆ ಮಂಜು ಸ್ವರಾಜ್. 'ಚೆಲುವಿನ ಚಿತ್ತಾರ'ದ ಜೋಡಿಯನ್ನ 'ಶ್ರಾವಣಿ ಸುಬ್ರಮಣ್ಯ'ದಲ್ಲಿ ಒಂದು ಮಾಡಿದ ಹಾಗೆ 'ಶ್ರೀಕಂಠ' ಚಿತ್ರದಲ್ಲೂ ಶಿವರಾಜ್ ಕುಮಾರ್ ಜೊತೆ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ನಾಯಕಿಯೊಬ್ರನ್ನ ಕರೆತರ್ತಾರಂತೆ. ಅದ್ಯಾರು ಅನ್ನುವುದು ಇನ್ನೂ ಸೀಕ್ರೆಟ್ ಆಗಿದೆ. [ಗಣೇಶ್ ಬಾಳಲ್ಲಿ ಮತ್ತೆ ಮೂಡಿದ ಗೆಲುವಿನ ಚಿತ್ತಾರ]

ಜನವರಿಯಲ್ಲಿ ಅದ್ದೂರಿಯಾಗಿ 'ಶ್ರೀಕಂಠ' ಚಿತ್ರಕ್ಕೆ ಚಾಲನೆ ಸಿಗಲಿದ್ದು, ಚಿಂಗಾರಿ ಚಿತ್ರವನ್ನ ನಿರ್ಮಿಸಿದ್ದ ಮಹದೇವ್ ಬಂಡವಾಳ ಹಾಕ್ತಿದ್ದಾರೆ. 'ಏನೇ ಆದ್ರೂ ಶಿವಣ್ಣ ಇಮೇಜ್ ಬದಲಾಗಲ್ಲ' ಅನ್ನುತ್ತಿದ್ದವರ ಬಾಯಿಗೆ 'ಶ್ರೀಕಂಠ' ಬೀಗ ಹಾಕುತ್ತಾ ಅಂತ ನೋಡ್ಬೇಕು. (ಫಿಲ್ಮಿಬೀಟ್ ಕನ್ನಡ)

English summary
Hat-trik Hero Shivarajkumar, who is currently busy shooting for Vajrakaya has given a nod to Manju Swaraj directorial movie 'Srikanta'. Shivarajkumar will be seen in a common man avatar. Director Manju Swaraj revealed this to Filmibeat Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada