India
  For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮದ ಝಲಕ್

  By Suneetha
  |

  ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮ ಇಡೀ ರಾಜ್ ಕುಂಟುಂಬದಲ್ಲಿ ಮನೆಮಾಡಿದ್ದು, ಮದುವೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸ್ಟಾರ್ ನಟ-ನಟಿಯರನ್ನು ಹಾಗೂ ಮಾಧ್ಯಮ ಮಿತ್ರರನ್ನು ಕರೆದು ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ಅಂದಹಾಗೆ ಶಿವಣ್ಣ ಅವರ ದೊಡ್ಡ ಮಗಳು ನಿರುಪಮಾ ಅವರ ಮದುವೆಗೆ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರು ಮದುವೆಗೆ ಆಗಮಿಸಿ ಮದುಮಗಳಿಗೆ ಶುಭ ಹಾರೈಸಲಿದ್ದಾರೆ. [ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು]

  ಇನ್ನೂ ದೊಡ್ಮನೆ ಮೊಮ್ಮಗಳ ಅದ್ಧೂರಿ ವಿವಾಹ ಸಮಾರಂಭವನ್ನು ಇಡೀ ವಿಶ್ವಕ್ಕೆ ತೋರಿಸುವ ಉದ್ದೇಶದಿಂದ ಹಾಗೂ ಮದುವೆ ಸಡಗರದಲ್ಲಿ ಪಾಲ್ಗೊಳ್ಳಲಾಗದವರು ಮನೆಯಲ್ಲಿಯೇ ಕುಳಿತು ಧಾರಾ ಮೂಹೂರ್ತ, ಆರತಕ್ಷತೆ ಜೊತೆಗೆ ಮದುವೆ ಸಂಭ್ರಮ ಸವಿಯಲು ವೆಬ್ ಸೈಟ್ ಒಂದನ್ನು ರೂಪಿಸಲಾಗಿದೆ.

  shivannamagalamaduve.com ಅಥವಾ smmaduve.com ವೆಬ್ ಸೈಟ್ ಭಾನುವಾರ ಮಧ್ಯಾಹ್ನದ ನಂತರ ಚಾಲನೆಗೊಳ್ಳಲಿದ್ದು, ಅರ್ಧ ಗಂಟೆಗೊಮ್ಮೆ ಮದುವೆ ಸಂಭ್ರಮದ ಫೊಟೋ, ವಿಡಿಯೋ ತುಣುಕುಗಳನ್ನು ಅಪ್ ಲೋಡ್ ಮಾಡಲಾಗುವುದು.[ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!]

  ಇನ್ನೂ ರಾಜ್ ಕುಟುಂಬದಲ್ಲಿ ಮೊದಲ ಮಗಳ ಮದುವೆ ನಡೆಯುತ್ತಿರುವುದರಿಂದ ತಮ್ಮ ತಂದೆಯ ಮನೆಯಲ್ಲಿ ಮಗಳಿಗೆ ಶಾಸ್ತ್ರ ಮಾಡಲು ಶಿವಣ್ಣ ಅವರು ಕುಟುಂಬ ಸಮೇತರಾಗಿ ಚಾಮರಾಜನಗರದ ಗಾಜನೂರಿಗೆ ಆಗಮಿಸಿ ರಾಜ್ ನಿವಾಸದಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ಮಾಡಿದ್ದಾರೆ.

  Shivanna daughter Nirupama Pre-wedding Functions and Rituals

  ಅಂತೂ ದೊಡ್ಮನೆ ಮೊಮ್ಮಗಳು ಡಾ.ನಿರುಪಮಾ ಅವರ ಮದುವೆಯ ಸಂಭ್ರಮ ಇಡೀ ರಾಜ್ ಕುಟುಂಬದಲ್ಲಿ ಮನೆ ಮಾಡಿದ್ದು, ಎಲ್ಲರೂ ಮದುವೆಯ ತಯಾರಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.[ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

  ಡಾ.ಅನುಪಮಾ ಹಾಗೂ ಡಾ. ದಿಲೀಪ್ ಮದುವೆ ಆಗಸ್ಟ್ 31 ಸೋಮವಾರದಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಅಭಿಮಾನಿಗಳಿಗೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲದ ಕಾರಣ ನೇರವಾಗಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.[ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್]

  31 ರಂದು ನಡೆಯುವ ಅದ್ದೂರಿ ಮದುವೆಯ ಸಮಾರಂಭದಲ್ಲಿ ಯಾವುದೇ ರೀತಿಯ ಅಚಾತುರ್ಯ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸುಮಾರು 300ಕ್ಕೂ ಅಧಿಕ ಪೋಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.

  English summary
  Kannada Actor Shivarajkumar launched a website on his Daughter Nirupama's wedding. Nirupama will tie the knot with Dileep at Palace Grounds on August 31st.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X