Don't Miss!
- News
ಸರ್ಕಾರದಿಂದ 84 ಸಾವಿರ ರೆಮಿಡಿಸ್ವಿರ್ ಖರೀದಿ: ಸುಧಾಕರ್
- Sports
ಐಪಿಎಲ್ 2021: ಪಂಜಾಬ್ vs ಚೆನ್ನೈ, ಪ್ಲೇಯಿಂಗ್ XI, ಅಪ್ಡೇಟ್ಸ್
- Automobiles
ಇ ಕಾಮರ್ಸ್ ಸೇವಾ ಕಂಪನಿಗೆ ಎಲೆಕ್ಟ್ರಿಕ್ ಸ್ಕೂಟರ್ ಒದಗಿಸಲಿದೆ ಒಕಿನಾವ
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಾಲಿಯ ಜೊತೆ ಟಗರು ಶಿವನ ವಿಜಯಯಾತ್ರೆ

ಟಗರು ಸಿನಿಮಾ ಈ ವರ್ಷದ ಹಿಟ್ ಲಿಸ್ಟ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರೇಕ್ಷಕರು ಸಿನಿಮಾವನ್ನ ಮತ್ತೆ ಮತ್ತೆ ನೋಡುವುದಕ್ಕೆ ಶುರು ಮಾಡಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಶಿವಣ್ಣ ಅಭಿನಯದ ಟಗರು ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ.
ಸಿನಿಮಾವನ್ನ ನೋಡಿ ಮೆಚ್ಚುಗೆ ಸೂಚಿಸಿ ಪ್ರೀತಿಯಿಂದ ಅಪ್ಪಿಕೊಂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಚಿತ್ರತಂಡ ರಾಜ್ಯಾದಂತ್ಯ ಪ್ರವಾಸವನ್ನು ಶುರು ಮಾಡಿದೆ. ಇತ್ತೀಚಿಗಷ್ಟೆ ಶಿವಮೊಗ್ಗದ ಚಿತ್ರಮಂದಿರಗಳಿಗೆ ಟಗರು ಶಿವ ಹಾಗೂ ಡಾಲಿ ಭೇಟಿ ಕೊಟ್ಟಿದ್ದು ಸಾಗರದ ಅಳಿಯನನ್ನ ಜನತೆ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
'ಡ್ರಾಮಾ' ಸಿನಿಮಾದಲ್ಲಿ ಯೋಗಿ ಅಭಿನಯಿಸಬೇಕಿತ್ತು! ಆದ್ರೆ, ಅದಾಗಲಿಲ್ಲ!
ಚಿತ್ರತಂಡಕ್ಕೂ ಹೆಚ್ಚಾಗಿ ಪ್ರತಿ ಜಿಲ್ಲೆಯ ಅಭಿಮಾನಿಗಳು ಸಿನಿಮಾತಂಡವನ್ನ ಸ್ವಾಗತ ಮಾಡಿ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಶಿವಣ್ಣನ ಜೊತೆ ಇದೇ ಮೊದಲ ಬಾರಿಗೆ ಧನಂಜಯ ಸ್ಕ್ರೀನ್ ಶೇರ್ ಮಾಡಿದ್ದು ಡಾಲಿಯ ಖಡಕ್ ಅಭಿನಯಕ್ಕೆ ಫಿದಾ ಆಗಿದ್ದಾರೆ.
ಇತ್ತ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಟಗರು ಸಿನಿಮಾ 'ಯು ಎಸ್ ಎ' ನಲ್ಲಿ ಅಮೋಘವಾಗಿ ಎರಡನೇ ವಾರ ಪ್ರದರ್ಶನವಾಗುತ್ತಿದೆ. ಹೊರ ದೇಶದ ಕನ್ನಡಿಗರು ಸಿನಿಮಾ ನೋಡಿ ಬಂದು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಏರ್ಪಿಲ್ ಮೊದಲ ವಾರದಲ್ಲಿ ಚಿತ್ರತಂಡ ವಿದೇಶ ಪ್ರವಾಸ ಆರಂಭ ಮಾಡಲಿದ್ದು ಹೊರ ದೇಶದ ಕನ್ನಡಿಗರಿಗೆ ಮತ್ತು ಅಲ್ಲಿಯ ಸಿನಿಮಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದೆ.
ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!