15 ಸೆಟ್‌ಗಳಲ್ಲಿ 28 ದಿನ 'ಘೋಸ್ಟ್' ಆಗಿದ್ದ ಶಿವಣ್ಣ, ಮಲಯಾಳಂ ಸ್ಟಾರ್ ನಟ ಜಯರಾಮ್!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬ (ಜುಲೈ 12)ದಂದು 'ಘೋಸ್ಟ್' ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಶ್ರೀನಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ಘೋಸ್ಟ್' ತಂಡ ಶಿವಣ್ಣನ ಅಭಿಮಾನಿಗಳಿಗೆ ಸರ್ಪ್ರೈಸ್ ಅನ್ನು ಹೊತ್ತು ತಂದಿದೆ.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿರುವ ದುಬಾರಿ ಸಿನಿಮಾವಿದು. ಅದ್ದೂರಿ ಸೆಟ್‌ಗಳನ್ನು ಹಾಕಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಅಂದ್ರೆ, ಈ ಸಿನಿಮಾ ಮಲಯಾಳಂ ಸ್ಟಾರ್ ನಟ ಜಯರಾಂ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂದೇಶ್ ಪ್ರೊಡಕ್ಷನ್ಸ್ 'ಘೋಸ್ಟ್'ಗೆ ಹಣ ಹಾಕಿದೆ. ಶಿವಣ್ಣ ಬರ್ತ್‌ಡೇ ಸರ್ಪ್ರೈಸ್ ಕೊಟ್ಟಿದ್ದ ಈ ಸಿನಿಮಾ ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈ ಖುಷಿ ವಿಷಯವನ್ನು ಅಭಿಮಾನಿಗಳಿಗೆ ಅಪ್‌ಡೇಟ್ ಚಿತ್ರತಂಡ ಮಾಡಿದ್ದು, ಜೊತೆಗೆ ಕೆಲವು ಮೇಕಿಂಗ್ ಸ್ಟಿಲ್‌ಗಳನ್ನು ರಿಲೀಸ್ ಮಾಡಿದೆ.
ಅಂದ್ಹಾಗೆ 'ಘೋಸ್ಟ್' ಸಿನಿಮಾವನ್ನು ಸುಮಾರು 15 ಸೆಟ್‌ಗಳಲ್ಲಿ 28 ದಿನಗಳಿಗೂ ಹೆಚ್ಚು ಕಾಲ ಶೂಟಿಂಗ್ ಮಾಡಲಾಗಿದೆ. ಶಿವರಾಜಕುಮಾರ್, ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೋಹನ್ ಬಿ ಕೆರೆ ಅದ್ದೂರಿ ಸೆಟ್‌ಗಳನ್ನು ಹಾಕಿದ್ದು, ದ್ವಿತೀಯ ಹಂತದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಮೈಸೂರಿನಲ್ಲಿ ಶುರುವಾಗುತ್ತಿದೆ.

'ಬೀರ್‌ಬಲ್', 'ಶ್ರೀನಿವಾಸ ಕಲ್ಯಾಣ' ಅಂತಹ ಸಿನಿಮಾವನ್ನು ನಿರ್ದೇಶಿಸಿ ನಟಿಸಿರುವ ಶ್ರೀನಿ ಘೋಸ್ಟ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ಮಾಸ್ತಿ ಡೈಲಾಗ್ ಬರೆದಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮಹೇಂದ್ರ ಸಿಂಹ ಅವರ ಕ್ಯಾಮರಾವರ್ಕ್ ನೋಡಬಹುದು. ವಿಶೇಷ 5 ಆಕ್ಷನ್ ಸೀನ್‌ಗಳಲ್ಲಿ ಶಿವಣ್ಣ ಅಭಿಮಾನಿಗಳಿಗೆ ಕಿಕ್ ಕೊಡಲಿದ್ದಾರೆ.


Click it and Unblock the Notifications











