For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ಭಜರಂಗಿ' ಫಸ್ಟ್ ಲುಕ್ ನೋಡಿ

  By Mahesh
  |

  ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಎಂದರೆ ಹಾಗೆ ಸದಾ ಹೊಸತನ ಇರುವ ಪಾತ್ರಗಳನ್ನೇ ಆರಿಸಿಕೊಳ್ಳುತ್ತಾರೆ. ಶಿವಣ್ಣನ ಚಿತ್ರ ಎಂದರೆ ನಿರ್ಮಾಪಕರೂ ಸೇಫ್ ಎಂಬ ಮಾತು ಗಾಂಧಿನಗರದಲ್ಲಿದೆ..

  ದುನಿಯಾ ಸೂರಿ ಅವರ 'ಕಡ್ಡಿಪುಡಿ' ಚಿತ್ರದಲ್ಲಿ ವಿಭಿನ್ನವಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ ನಂತರ ಅಭಿಮಾನಿಗಳಿಗೆ ಕಿಚ್ಚು ಹಚ್ಚಲು 'ಭಜರಂಗಿ' ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಈ ಚಿತ್ರದಲ್ಲಿ ಶಿವಣ್ಣ ದೇಹವನ್ನು ಸಿಕ್ಸ್ ಪ್ಯಾಕ್ ಗೆ ಹೊಂದಿಸುತ್ತಿದ್ದಾರೆ.

  ಶಿವಣ್ಣ ತಮ್ಮ ವೃತ್ತಿಜೀವನದಲ್ಲಿ ಸಿಕ್ಸ್ ಪ್ಯಾಕ್ ದೇಹಕ್ಕಾಗಿ ಎಂದೂ ಕಸರತ್ತು ಮಾಡಿರಲಿಲ್ಲ. ಅವರ ದೇಹ ನೈಜವಾಗಿ ಹದಿಹರೆಯದ ಯುವಕರಂತೆ ಕಾಣುತ್ತಿತ್ತು. ಈಗ ಅವರಿಗೆ 50ರ ಪ್ರಾಯ. ಆದರೂ ಅವರಲ್ಲಿ ಇನ್ನೂ ಚಿಗುರು ಮೀಸೆ ಹುಡುಗನ ಉತ್ಸಾಹ ತಾಂಡವವಾಡುತ್ತಿದೆ. ಪಾತ್ರಕ್ಕೆ ಅಗತ್ಯವಿರುವುದರಿಂದ ಸಿಕ್ಸ್ ಪ್ಯಾಕ್ ಗಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ ಎಂದು ಶಿವಣ್ಣ ಹೇಳಿದ್ದಾರೆ.

  ಸಿಕ್ಸ್ ಪ್ಯಾಕ್ ಗಾಗಿ ಶಿವಣ್ಣ ತಯಾರಿ ಜೋರಾಗಿಯೇ ಇದೆ. "ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿದೆ" ಎಂದು ಚಿತ್ರತಂಡ ಹೇಳಿದೆ. ಭಜರಂಗಿ ಚಿತ್ರದ ಫಸ್ಟ್ ಲುಕ್ ಹಾಗೂ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

  ಶಿವಣ್ಣ 'ರುದ್ರ ತಾಂಡವ'

  ಶಿವಣ್ಣ 'ರುದ್ರ ತಾಂಡವ'

  ಚಿತ್ರದಲ್ಲಿ 'ರುದ್ರ ತಾಂಡವ' ನೃತ್ಯವೂ ಇರುತ್ತದೆ. ಮೊಳಕಾಲಿನಲ್ಲೇ ಶಿವಣ್ಣ ನೃತ್ಯ ಮಾಡಲಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ ಎನ್ನುತ್ತಾರೆ ಹರ್ಷಾ.

  ಚಿತ್ರ ರಿಲೀಸ್?

  ಚಿತ್ರ ರಿಲೀಸ್?

  ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ 'ಭಜರಂಗಿ' ಚಿತ್ರ ಬೆಂಗಳೂರು ಸುತ್ತಮುತ್ತ ಮೂವತ್ತು ದಿನಗಳ ಕಾಲ ಮೂರನೇ ಹಂತದ ಚಿತ್ರೀಕರಣ ಮುಗಿಸಿ. ಹೈದರಾಬಾದಿನಲ್ಲಿ ಚಿತ್ರೀಕರಣ ನಡೆಸಿತ್ತು. ಈಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

  ಬಹುಶಃ ಶಿವಣ್ಣನ ಹುಟ್ಟುಹಬ್ಬದ ದಿನ(ಜು.12) ಚಿತ್ರವನ್ನು ರಿಲೀಸ್ ಮಾಡಲು ಪ್ರಯತ್ನ ನಡೆದಿದೆ.. ಕಾದು ನೋಡೋಣ

  ಚಿತ್ರದ ಮುಹೂರ್ತ ಅದ್ದೂರಿ

  ಚಿತ್ರದ ಮುಹೂರ್ತ ಅದ್ದೂರಿ

  ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಸಲಾಗಿತ್ತು. ಭರ್ಜರಿ ಪೋಸ್ಟರ್ ಗಳು ಅಭಿಮಾನಿಗಳನ್ನು ಆಕರ್ಷಿಸಿತ್ತು. ಸ್ಥಿರಚಿತ್ರಗಳಲ್ಲಿ ಶಿವಣ್ಣನ ವಿಭಿನ್ನ ಗೆಟೆಪ್ ನೋಡಿ ಚಿತ್ರ ಐತಿಹಾಸಿಕ ಕಥೆ ಹೊಂದಿರುವ ಬಗ್ಗೆ ಕುತೂಹಲ ಹೆಚ್ಚಿತ್ತು.

  ಭರ್ಜರಿ ಸೆಟ್

  ಭರ್ಜರಿ ಸೆಟ್

  ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಾದ ಮೇಲೆ ಮತ್ತೊಮ್ಮೆ ಭರ್ಜರಿ ಸೆಟ್ ನಿರ್ಮಾಣದಿಂದ ಗಮನ ಸೆಳೆದಿತ್ತು. ಸುಮಾರು 50 ಲಕ್ಷ ರು ವೆಚ್ಚದ ಸೆಟ್ ಹೆಸರಘಟ್ಟದ ಬಳಿ ಹಾಕಲಾಗಿತ್ತು.

  ಆದರೆ, ಮೇ ತಿಂಗಳಿನಲ್ಲಿ ಸುರಿದ ಮಳೆಗೆ ಸೆಟ್ ಪೂರ್ತಿ ಹಾಳಾಗಿಬಿಟ್ಟಿತು. ಆದರೂ ಮತ್ತೊಮ್ಮೆ ಅದ್ದೂರಿ ಸೆಟ್ ನಿರ್ಮಿಸಿ ಚಿತ್ರೀಕರಣ ಮುಂದುವರೆಸಲಾಗಿದೆ.

  ಐಂದ್ರಿತಾ ರೇ ನಾಯಕಿ

  ಐಂದ್ರಿತಾ ರೇ ನಾಯಕಿ

  ಕಡ್ಡಿ ಪುಡಿಯಲ್ಲಿ ಶಿವರಾಜ್ ಕುಮಾರ್ ಜೊತೆ ಸಣ್ಣ ಪಾತ್ರ ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ರೇ ಮತ್ತೊಮ್ಮೆ ಶಿವಣ್ಣನ ಜೊತೆ ನಟಿಸುತ್ತಿರುವುದಕ್ಕ್ ಥ್ರಿಲ್ ಆಗಿದ್ದಾರೆ. ನೆರೆ ಮನೆ ಹುಡುಗಿ ರೀತಿ ಪಾತ್ರ ಸಿಕ್ಕಿದೆ.

  ಪೂರ್ಣ ಪ್ರಮಾಣದ ನಾಯಕಿಯಾಗಿ ಶಿವಣ್ಣನ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಅವರಿಂದ ನಟನೆ ಕಲಿಯುವುದು ಬಹಳಷ್ಟಿದೆ ಎಂದು ಐಂದ್ರಿತಾ ಕಣ್ಣು ಮಿಟುಕಿಸುತ್ತಾರೆ.

  ಶೂಟಿಂಗ್ ಚಿತ್ರಗಳು

  ಶೂಟಿಂಗ್ ಚಿತ್ರಗಳು

  ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶ್ರುತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.

  ಚಿತ್ರತಂಡದೊಂದಿಗೆ ಶಿವಣ್ಣ

  ಚಿತ್ರತಂಡದೊಂದಿಗೆ ಶಿವಣ್ಣ

  ಚಿತ್ರೀಕರಣ ನಂತರ ಚಿತ್ರತಂಡ, ಸಹ ನಟ ನಟಿಯರೊಂದಿಗೆ ಶಿವರಾಜ್ ಕುಮಾರ್ ಗ್ರೂಪ್ ಫೋಟೊ

  English summary
  When you look at the posters and photos of Shivaraj Kumar's Bhajarangi, expectation raises and it generates curiosity in the minds of his fans about the movie. His chiselled body with a warrior avatar instantly pushes audience mood into a different zone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X