»   » ಶಿವಣ್ಣ ವೃತ್ತಿಜೀವನಕ್ಕೆ ಭರ್ಜರಿ ಸಕ್ಸಸ್ ನೀಡುವ ಚಿತ್ರವಿದುವಾ?

ಶಿವಣ್ಣ ವೃತ್ತಿಜೀವನಕ್ಕೆ ಭರ್ಜರಿ ಸಕ್ಸಸ್ ನೀಡುವ ಚಿತ್ರವಿದುವಾ?

Posted By:
Subscribe to Filmibeat Kannada
Shivaraj Kumar in Shiva
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಶಿವ ಚಿತ್ರದ ಧ್ವನಿಸುರುಳಿ ಬುಧವಾರ (ಮೇ 23) ಗಾಂಧಿನಗರದ ಅಣ್ಣಮ್ಮ ದೇವಾಲಯದ ಮುಂದೆ ಬಿಡುಗಡೆಯಾಗಿದೆ. ಮಾಸ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗಕ್ಕೆ ಮತ್ತು ಶಿವರಾಜ್ ಕುಮಾರ್ ಅವರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

ಸಾಮಾಜಿಕ ಕಳಕಳಿಯ ಚಿತ್ರ ಇದಾಗಿದ್ದು, ಮಕ್ಕಳನ್ನು ಭಿಕ್ಷಾಟನೆಗೆ ದೂಡುವ ಮಾಫಿಯಾದ ವಿರುದ್ದ ನಾಯಕ ಸಮರ ಸಾರುವ ದೃಶ್ಯಗಳು ಚಿತ್ರದಲ್ಲಿವೆ.ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಬರೀ ಮಾತನಾಡುವ ನಮ್ಮ ರಾಜಕಾರಿಣಿಗಳು ಅದರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ. ಇಂತಹ ಮಕ್ಕಳನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ದುಡಿಸಲಾಗುತ್ತೆ. ಬೇರೆ ಬೇರೆ ರಾಜ್ಯಗಳಿಂದ ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆಗೆ ದೂಡಲಾಗುತ್ತದೆ. ನನ್ನ ಈ ಚಿತ್ರದಲ್ಲಿ ಸಮಾಜಕ್ಕೆ ತೊಂದರೆ ನೀಡುವ ಇಂತಹ ಘಟನೆಗಳ ಬಗ್ಗೆ ತೋರಿಸಿದ್ದೇನೆ ಎಂದು ನಿರ್ದೇಶಕ ಓಂ ಪ್ರಕಾಶ್ ಹೇಳಿದ್ದಾರೆ.

ಕ್ಲಾಸ್ ಪ್ರೇಕ್ಷಕರಿಗಾಗಿ ಶಿವ ಎರಡು ಕಣ್ಣು ತೆರೆಯುತ್ತಾನೆ, ಮಾಸ್ ಪ್ರೇಕ್ಷಕರಿಗೆ ಮೂರನೇ ಕಣ್ಣನ್ನು ತೆರೆಯುತ್ತಾನೆ, ಮೂರೂ ಕಣ್ಣು ಒಟ್ಟಿಗೆ ತೆರೆದಾಗ ಸಮಾಜಘಾತುಕರು ಕಲ್ಲಾಸ್ ಎನ್ನುತ್ತಾರೆ ನಿರ್ದೇಶಕರು. ರಾಕ್ ಲೈನ್ ಸ್ಟುಡಿಯೋದಲ್ಲಿ ಭಿಕ್ಷುಕರ ಕಾಲನಿಯ ಸೆಟ್ ಹಾಕಿ ವಿಭಿನ್ನ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಖಂಡಿತ ಗೆಲ್ಲುತ್ತದೆ ಎನ್ನುವ ಭರವಸೆಯ ಮಾತನ್ನು ನಿರ್ದೇಶಕರಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯಲ್ಲಿ ನಿಂತಿರುವ ಯುವಕನನ್ನು ರಕ್ಷಿಸುವ ಮೂಲಕ ಶಿವಣ್ಣ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಶಿವಣ್ಣ ವೃತ್ತಿಪರ ಜಾಕಿ (ಕುದುರೆಸವಾರ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಬುಲೆಟ್ ಪ್ರಕಾಶ್, ಶೋಭರಾಜ್ ಇನ್ನಿತರರಿದ್ದಾರೆ. ಪಳನಿರಾಜ್ ಚಿತ್ರದ ಸಾಹಸ ನಿರ್ದೇಶಕರು

ವಿಶಿಷ್ಟ ರೀತಿಯಲ್ಲಿ ಆಡಿಯೋ ಬಿಡುಗಡೆಗೆ ಮುಂದಾಗಿರುವ ಚಿತ್ರತಂಡ ಇಂದು ( ಮೇ 30) ಬೆಂಗಳೂರು ನಗರದ ಎಳುಕಡೆ (ಗಾಂಧಿನಗರ, ವಿಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಗಿರಿನಗರ, ಹನುಮಂತನಗರ ಮತ್ತು ರಾಜಾಜಿನಗರ) ಬೇರೆ ಬೇರೆ ಸಮಯದಲ್ಲಿ ಅಭಿಮಾನಿಗಳ ಮುಂದೆ ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ ಶಿವಣ್ಣ ಅಭಿಮಾನಿಗಳ ಸಂಘ 16 ಜಿಲ್ಲಾ ಕೇಂದ್ರದಲ್ಲಿ ಕ್ಯಾಸೆಟ್ ಬಿಡುಗಡೆ ಸಮಾರಂಭ ಆಯೋಜಿಸಿದೆ.

ಶಿವ ಚಿತ್ರದ ಟಿವಿ ರೈಟ್ಸ್ ಎರಡೂವರೆ ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಎಕೆ 47 ನಂತರ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟಿಸುವ ಚಿತ್ರ ಇದಾಗಿದೆ.

ಶಿವ, ultimate rider ಚಿತ್ರದ ಧ್ವನಿಸುರುಳಿ ವಿಮರ್ಶೆ ನಿರೀಕ್ಷಿಸಿ...

English summary
Much awaited Shivaraj Kumar starrer Kannada movie Shiva audio released. Audio will be also released in 16 district head quarters. Om Prakash Rao has directing this movie after AK47.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada