»   » ’ ವಜ್ರಕಾಯ ’ ನಾದ ಕರುನಾಡ ಚಕ್ರವರ್ತಿ ಶಿವಣ್ಣ

’ ವಜ್ರಕಾಯ ’ ನಾದ ಕರುನಾಡ ಚಕ್ರವರ್ತಿ ಶಿವಣ್ಣ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿರಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹರ್ಷ ನಿರ್ದೇಶನದ ಮತ್ತೊಂದು ಚಿತ್ರ ಸೆಟ್ಟೇರಿದೆ. ಸೂಪರ್ ಹಿಟ್ ಭಜರಂಗಿ ಚಿತ್ರದ ನಂತರ ಈ ಜೋಡಿ ಮತ್ತೆ ಒಂದಾಗಿದೆ.

ಮೊನ್ನೆ ಶುಭ ಶುಕ್ರವಾರ (ಜೂ 6) 'ವಜ್ರಕಾಯ' ಚಿತ್ರದ ಮಹೂರ್ತ ಅದ್ದೂರಿಯಾಗಿ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. (ಶಿವಣ್ಣನ ಜೊತೆ ಜಯಸುಧಾ)

ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ 24ರಂದು ಈ ಚಿತ್ರ ಸೆಟ್ಟೇರಬೇಕಿತ್ತು. ಚಿತ್ರಕ್ಕೆ 'ಮುತ್ತುರಾಜ್' ಎಂದು ಹೆಸರು ಇಡಲು ಚಿತ್ರತಂಡ ಈ ಹಿಂದೆ ನಿರ್ಧರಿಸಿತ್ತು. ಆದರೆ ಟೈಟಲ್ ಬೇರೆಯವರ ಹೆಸರಿನಲ್ಲಿ ನೊಂದಣಿಯಾಗಿರುವುದರಿಂದ ಚಿತ್ರಕ್ಕೀಗ 'ವಜ್ರಕಾಯ' ಎಂದು ಹೆಸರಿಡಲಾಗಿದೆ.

ಚಿತ್ರದ ಮಹೂರ್ತ ಬೆಂಗಳೂರು ಯಡಿಯೂರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ನಡೆಯಿತು. ಪುನೀತ್ ರಾಜಕುಮಾರ್, ಧ್ರುವ್ ಸರ್ಜಾ, ಗೀತಾ ಶಿವರಾಜ್ ಕುಮಾರ್, ಪ್ರೇಮ್ ಮುಂತಾದವರು ಮಹೂರ್ತದಲ್ಲಿ ಪಾಲ್ಗೊಂಡಿದ್ದರು.

ಇದಾದ ನಂತರ ಹೆಬ್ಬಾಳದ ಬಳಿಯಿರುವ ಕಿರ್ಲೋಸ್ಕರ್ ಮೈದಾನದಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ನಿರ್ದೇಶಕ ಹರ್ಷ ಚಿತ್ರದ ಬಗ್ಗೆ ನೀಡಿದ ವಿವರ, ಸ್ಲೈಡಿನಲ್ಲಿ..

ಚಿತ್ರಕ್ಕೆ ಯು ಸರ್ಟಿಫಿಕೇಟ್

ಭಜರಂಗಿ ಚಿತ್ರವನ್ನು ಬಹಳ ಪ್ರೀತಿಯಿಂದ ಮಾಡಿದ್ದೆ. ಜನರೂ ಕೂಡಾ ಅದಕ್ಕೆ ಉತ್ತಮ ಬೆಂಬಲ ನೀಡಿ, ಸ್ವೀಕರಿಸಿದರು. ಆದರೆ ಭಜರಂಗಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು ಎನ್ನುವ ನೋವು ನನ್ನನ್ನು ಕಾಡುತ್ತಿತ್ತು. ವಜ್ರಕಾಯ ಚಿತ್ರಕ್ಕೆ ಖಂಡಿತ ಯು ಸರ್ಟಿಫಿಕೇಟ್ ಸಿಗುವ ಭರವಸೆ ಇದೆ.

ಸಿಕ್ಸ್ ಪ್ಯಾಕ್ ಇಲ್ಲ

ಭಜರಂಗಿ ಚಿತ್ರದಲ್ಲಿ ಶಿವಣ್ಣ ಅವರನ್ನು ಸಿಕ್ಸ್ ಪ್ಯಾಕಿನಲ್ಲಿ ತೋರಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಇರುವುದಿಲ್ಲ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನತೆ ಇರಬೇಕೆಂದು ಬಯಸುವವನು ನಾನು.

ಸಾಹಸ, ಮನೋರಂಜನಾತ್ಮಕ ಚಿತ್ರ

ಇದೊಂದು ಸಾಹಸ ಪ್ರಧಾನವಾದ ಚಿತ್ರ. ಚಿತ್ರದಲ್ಲಿ ಮನೋರಂಜನೆಗೆ ಅಷ್ಟೇ ಒತ್ತು ನೀಡಲಾಗುತ್ತದೆ. ಯಾವುದೇ ಸಮಸ್ಯೆ ಬಂದರೂ ನಾಯಕನಿಗೆ ಅದನ್ನು ಎದುರಿಸುವ ಶಕ್ತಿ ಇರುತ್ತದೆ. ಹಾಗಾಗಿ ಚಿತ್ರಕ್ಕೆ ವಜ್ರಕಾಯ ಎಂದು ಹೆಸರಿಡಲಾಗಿದೆ.

ತಾರಾಗಣದಲ್ಲಿ ಯಾರು?

ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಬೇಕಾಗಿದೆ. ಉಳಿದಂತೆ ಸಾಧುಕೋಕಿಲಾ, ಚಿಕ್ಕಣ್ಣ, ಪ್ರತಾಪ್, ಜಯಸುಧಾ, ಅತುಲ್ ಕುಲ್ಕರ್ಣಿ, ರವಿಕಾಳೆ ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತ ಅರ್ಜುನ್ ಜನ್ಯಾ ಅವರದ್ದು, ಚಿತ್ರದ ನಿರ್ಮಾಪಕರು ಸಿ ಆರ್ ಮನೋಹರ್.

ಮೂರು ಶೇಡ್

ಭಜರಂಗಿ ಚಿತ್ರದಲ್ಲಿ ನಾಯಕನನ್ನು ಎರಡು ಶೇಡ್ ನಲ್ಲಿ ತೋರಿಸಲಾಗಿತ್ತು. ವಜ್ರಕಾಯದಲ್ಲಿ ಶಿವಣ್ಣನನ್ನು ಮೂರು ಶೇಡ್ ನಲ್ಲಿ ತೋರಿಸಲಾಗುತ್ತದೆ. ಹಾಸ್ಯ ಮತ್ತು ಸೆಂಟಿಮೆಂಟ್ ಎರಡೂ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆಂದು ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.

ಚಿತ್ರದ ಬಗ್ಗೆ ನಿರ್ಮಾಪಕರು

ಭಜರಂಗಿ ಚಿತ್ರ ಮಾಡಿದಾಗಲೇ, ಶಿವಣ್ಣ ಹೊತೆ ಇನ್ನೊಂದು ಚಿತ್ರ ನಿರ್ಮಿಸ ಬೇಕೆನ್ನುವ ಆಸೆಯಿತ್ತು. ಈಗ ಶಿವಣ್ಣ ಮತ್ತು ಹರ್ಷ ಕಾಂಬಿನೇಶನಿನಲ್ಲಿ ಮತ್ತೊಂದು ಚಿತ್ರಕ್ಕೆ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ - ನಿರ್ಮಾಪಕ ಸಿ ಆರ್ ಮನೋಹರ್.

English summary
Shivaraj Kumar new movie Vajrakaya, Puneet Rajkumar graced the muhurtha of Vajrakaya and blessed the team by tapping the clap board for the first scene of the movie.
Please Wait while comments are loading...