»   » ಮೊದಲ ನಾಲ್ಕು ದಿನದಲ್ಲಿ ಕೋಟಿ ಕೋಟಿ ಬಾಚಿದ ವಜ್ರಕಾಯ!

ಮೊದಲ ನಾಲ್ಕು ದಿನದಲ್ಲಿ ಕೋಟಿ ಕೋಟಿ ಬಾಚಿದ ವಜ್ರಕಾಯ!

Posted By:
Subscribe to Filmibeat Kannada

ಕಳೆದ ಶುಕ್ರವಾರ (ಜೂ 12) ಬಿಡುಗಡೆಯಾದ ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಸುದೀಪ್ ಅಭಿನಯದ ರನ್ನ ಚಿತ್ರ ಬಿಡುಗಡೆಯಾದ ಒಂದು ವಾರದ ಅಂತರದಲ್ಲಿ ವಜ್ರಕಾಯ ಚಿತ್ರ ಬಿಡುಗಡೆಯಾದರೂ ಎರಡು ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಹೆಚ್ಚಾಗಿ ಕಾಡಲಿಲ್ಲ. (ವಜ್ರಕಾಯ ಚಿತ್ರವಿಮರ್ಶೆ)

ಹೆಚ್ಚುಕಮ್ಮಿ ಇನ್ನೂರು ಚಿತ್ರಮಂದಿರಕ್ಕೆ ತೃಪ್ತಿ ಪಟ್ಟಿದ್ದ ವಜ್ರಕಾಯ ಚಿತ್ರದ ನಿರ್ದೇಶಕ ಹರ್ಷ, ರಣವಿಕ್ರಮ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳಲ್ಲಿ ವಜ್ರಕಾಯ ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಥಿಯೇಟರ್ ಸಮಸ್ಯೆ ಕಾಡಲಿಲ್ಲ.

ಇನ್ನು ವಜ್ರಕಾಯ ಚಿತ್ರದ ಬಾಕ್ಸಾಫೀಸ್ ವರದಿಯ ವಿಚಾರಕ್ಕೆ ಬರುವುದಾದರೆ, ಚಿತ್ರ ಎಷ್ಟು ಗಳಿಕೆ ಕಂಡಿತು ಎನ್ನುವುದರ ಬಗ್ಗೆ ಕರಾರುವಕ್ಕಾದ ಲೆಕ್ಕಾಚಾರ ಸಿಗುವುದು ಕಷ್ಟ. ಇದಕ್ಕೆ ಕಾರಣ ಹಲವಾರು.

ಗಾಂಧಿನಗರದ ಪ್ರಕಾರ ವಜ್ರಕಾಯ ಮೊದಲ ನಾಲ್ಕು ದಿನಗಳಲ್ಲಿ ಭರ್ಜರಿ ಗಳಿಕೆ ಕಂಡಿದೆ. ಗಾಂಧಿನಗರದ ಸಿನಿಮಾ ಆರ್ಥಿಕ ತಜ್ಞರ ಪ್ರಕಾರ ವಜ್ರಕಾಯ ಚಿತ್ರ ವಾರಾಂತ್ಯದ ಲಾಭವನ್ನು ಭರ್ಜರಿಯಾಗಿ ಪಡೆದುಕೊಂಡಿದೆ ಎನ್ನುವುದು.

ಶುಕ್ರವಾರದಿಂದ ಸೋಮವಾರದವರೆಗಿನ ಚಿತ್ರದ ಅಂದಾಜು ಕಲೆಕ್ಷನ್ ಎಷ್ಟು? ಸ್ಲೈಡಿನಲ್ಲಿ ನೋಡಿ..

ಎರಡು ಪರಭಾಷಾ ಚಿತ್ರಗಳ ನಡುವೆ

ಜ್ಯುರಾಸಿಕ್ ವರ್ಲ್ಡ್ ಮತ್ತು ಹಮಾರಿ ಅಧೂರಿ ಕಹಾನಿ ಚಿತ್ರ ಹೋದ ವಾರದಲ್ಲಿ ಬಿಡುಗಡೆಯಾಗಿದ್ದರೂ, ವಜ್ರಕಾಯ ಚಿತ್ರಕ್ಕೆ ಇದರಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ ಎನ್ನುವುದು ಗಾಂಧಿನಗರದ ಮಾತು.

ವಜ್ರಕಾಯ ಮೊದಲ ದಿನದ ಗಳಿಕೆ

ಈಗಾಗಲೇ ಹೇಳಿದಂತೆ ಇದು ಕರಾರುವಕ್ಕಾದ ಕಲೆಕ್ಷನ್ ರಿಪೋರ್ಟ್ ಅಲ್ಲದಿದ್ದರೂ, ಒಟ್ಟಾರೆ ಶೋಗಳ ಆಧಾರದ ಮೇಲೆ ಗಾಂಧಿನಗರದ ಪ್ರಕಾರ ಚಿತ್ರ ಮೊದಲ ದಿನದಲ್ಲಿ 3.36 ಕೋಟಿ ಗಳಿಕೆ ಕಂಡಿದೆ.

ಎರಡನೇ ದಿನದ ಗಳಿಕೆ

ಚಿತ್ರಕ್ಕೆ ಶನಿವಾರವೂ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಾಂಧಿನಗರದ ಪ್ರಕಾರ ಎರಡನೇ ದಿನ ಚಿತ್ರಕ್ಕೆ 3.15 ಕೋಟಿ ಕಲೆಕ್ಷನ್ ಆಗಿದೆ.

ಮೂರನೇ ದಿನವೂ ನಿರಾಂತಕ

ಭಾನುವಾರ ಎರಡು ದಿನಕ್ಕಿಂತ ಇನ್ನೂ ಹೆಚ್ಚಿನ ಗಳಿಕೆ ಕಾಣುವಲ್ಲಿ ವಜ್ರಕಾಯ ಚಿತ್ರ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ ಮೂರನೇ ದಿನ ಚಿತ್ರ ಅಂದಾಜು 3.60 ಕೋಟಿ ಗಳಿಕೆ ಕಂಡಿದೆ.

ನಾಲ್ಕನೇ ದಿನ

ಚಿತ್ರಕ್ಕೆ ಸೋಮವಾರದಂದು 2.63 ಕೋಟಿ ಕಲೆಕ್ಷನ್ ಆಗಿದೆ.

ಒಟ್ಟಾರೆ ಹನ್ನೆರಡು ಕೋಟಿ ಕ್ಲಬ್ಬಿಗೆ ವಜ್ರಕಾಯ

ಶುಕ್ರವಾರ (3.36), ಶನಿವಾರ (3.15), ಭಾನುವಾರ (3.60), ಸೋಮವಾರ (2.63) ಕೋಟಿ ಗಳಿಕೆಯ ಪ್ರಕಾರ ನಾಲ್ಕು ದಿನದಲ್ಲಿ ಚಿತ್ರ ಒಟ್ಟು 12.74 ಕೋಟಿ ಗಳಿಕೆ ಕಂಡಿದೆ.

ದೊಡ್ಡ ಸಿನಿಮಾ ಇಲ್ಲ

ಪರಭಾಷೆಯ ಅಥವಾ ಕನ್ನಡದ ದೊಡ್ಡ ಸಿನಿಮಾ ಈ ವಾರವೂ ಬಿಡುಗಡೆಯಾಗದೇ ಇರುವುದರಿಂದ ವಜ್ರಕಾಯ ಮತ್ತು ರನ್ನ ಚಿತ್ರದ ಗಳಿಕೆಗೆ ಅಷ್ಟೇನೂ ತೊಂದರೆಯಾಗುವುದಿಲ್ಲ ಎನ್ನುವುದು ಗಾಂಧಿನಗರದ ಲೆಕ್ಕಾಚಾರ.

English summary
Shivaraj Kumar's recently released Vajrakaya is making good profit at the box office. The movie which released on June 12, has collected Rs 12.74 crores in four days, as per Gandhinagara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada