Just In
Don't Miss!
- News
ವಿಧಾನಮಂಡಲ ಅಧಿವೇಶನ ಆರಂಭ: ಸರ್ಕಾರದ ಮೇಲೆ ಮುಗಿಬೀಳಲಿರುವ ವಿಪಕ್ಷ
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Automobiles
ರಾಂಗ್ ಸೈಡ್'ನಲ್ಲಿ ಬಂದ ನಟನ ಕಾರನ್ನು ಹಿಂದಕ್ಕೆ ಕಳುಹಿಸಿದ ಟ್ರಾಫಿಕ್ ಪೊಲೀಸ್
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
35 ವರ್ಷದ ಸಂಭ್ರಮದಲ್ಲಿ ಶಿವಣ್ಣ: 'ಬಾಕ್ಸ್ ಆಫೀಸ್ ಬ್ರಹ್ಮ'ನ ಕಾಮನ್ ಡಿಪಿ ರಿಲೀಸ್
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಯಲ್ಲಿ 35 ವರ್ಷ ಪೂರೈಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಮೂರುವರೆ ದಶಕದ ಪೂರೈಸಿದ ಹಿನ್ನೆಲೆ ಟ್ವಿಟ್ಟರ್‌ನಲ್ಲಿ ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ.
ಶಿವರಾಜ್ ಕುಮಾರ್ ಅವರ ಆಪ್ತ ಹಾಗೂ ಚಲನಚಿತ್ರ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಶಿವಣ್ಣನ ಕಾಮನ್ ಡಿಪಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಸೇರಿದಂತೆ ಅಭಿಮಾನಿಗಳು ಸಹ ಡಿಪಿ ಶೇರ್ ಮಾಡಿದ್ದಾರೆ.
ಶಿವಣ್ಣ 35ನೇ ವರ್ಷದ ಸಂಭ್ರಮ: ಫೆಬ್ರವರಿ 21ಕ್ಕೆ 'ಎಸ್ಪಿಎಲ್' ಕ್ರಿಕೆಟ್ ಹಬ್ಬ
ಇದಕ್ಕೂ ಮುಂಚೆ ನಿರ್ದೇಶಕ ಸಿಂಪಲ್ ಸುನಿ ಮತ್ತು Rapper ಅಲೋಕ್ ಶಿವಣ್ಣನ ಕಾಮನ್ ಡಿಪಿಯೊಂದನ್ನು ಈ ಹಿಂದೆಯೇ ಹಂಚಿಕೊಂಡಿದ್ದರು. ಈಗ ಕೆಪಿ ಶ್ರೀಕಾಂತ್ ಹಾಗೂ ಅಭಿಮಾನಿಗಳು ಇನ್ನೊಂದು ಕಾಮನ್ ಡಿಪಿ ಅನಾವರಣಗೊಳಿಸಿದ್ದಾರೆ.
ಅಂದ್ಹಾಗೆ, ಶಿವರಾಜ್ ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1986ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶಿಸಿದ್ದರು.
ಅಲ್ಲಿಂದ ಇಲ್ಲಿಯವರೆಗೂ ಸುಮಾರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ. ಸೋಲು, ಗೆಲುವು, ಬಾಕ್ಸ್ ಆಫೀಸ್ ಎಲ್ಲವೂ ಕಂಡಿದ್ದಾರೆ. ಹಾಗಾಗಿ, ಶಿವಣ್ಣ ಅವರನ್ನು ಬಾಕ್ಸ್ ಆಫೀಸ್ ಬ್ರಹ್ಮ ಅಂತಾರೆ.
58ರ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ಬಹಳ ಬ್ಯುಸಿ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಭಜರಂಗಿ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶಿವಪ್ಪ ಸಿನಿಮಾನೂ ರಿಲೀಸ್‌ಗೆ ಸಿದ್ದವಾಗಿದೆ.