»   » ಕಾವೇರಿ ನೀರಿಗಾಗಿ ಬೀದಿಗಿಳಿದ ಶಿವಣ್ಣ ಅಭಿಮಾನಿಗಳು

ಕಾವೇರಿ ನೀರಿಗಾಗಿ ಬೀದಿಗಿಳಿದ ಶಿವಣ್ಣ ಅಭಿಮಾನಿಗಳು

Posted By:
Subscribe to Filmibeat Kannada
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯನ್ನು ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿವೆ. ಈ ಪ್ರತಿಭಟನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಕೈಜೋಡಿಸಿದ್ದಾರೆ.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ಅಕ್ಟೋಬರ್ 5ರಂದು ಬೆಳಗ್ಗೆ 11.30ಕ್ಕೆ "ಕಾವೇರಿ ನಮ್ಮದು" ಬೃಹತ್ ಪ್ರತಿಭಟನೆಯನ್ನು ಶಿವಣ್ಣ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಸ್ಥಳ ಮೈಸೂರು ಬ್ಯಾಂಕ್ ವೃತ್ತ.

ಅಕ್ಟೋಬರ್ 6ರ ಕರ್ನಾಟಕ ಬಂದ್ ಗೂ ಶಿವರಾಜ್ ಕುಮಾರ್ ಅವರ ಅಭಿಮಾನಿ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ಶಿವು ಅಡ್ಡ, ಶಿವ ಸೈನ್ಯ, ಡಾನ್ ಶಿವರಾಜ್ ಕುಮಾರ್ ಸೇನಾ ಸಮಿತಿ, ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಸಂಘ, ಕೆಚ್ಚೆದೆಯ ಸಿಂಹ ಶಿವರಾಜ್ ಕುಮಾರ್ ಸೇನಾ ಸಮಿತಿ ನಡೆಸಲಿರುವ ಬೃಹತ್ ಪ್ರತಿಭಟನೆ ನಡೆಸಲಿವೆ.

ಮೈಸೂರು ವೃತ್ತದಿಂದ ಆರಂಭವಾಗುವ ಪ್ರತಿಭಟನಾ ರ್‍ಯಾಲಿ ರಾಜಭವನದವರೆಗೆ ಸಾಗಲಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಂಬಂಧ ಶಿವರಾಜ್ ಕುಮಾರ್ ಅಭಿಮಾನಿಗಳು ಫೇಸ್ ಬುಕ್ ನಲ್ಲೂ ಅಭಿಯಾನ ಆರಂಭಿಸಿದ್ದಾರೆ. ಇದೆಲ್ಲ ಸರಿ, ಶಿವಣ್ಣ ಪ್ರತಿಭಟನೆಗೆ ಬರ್ತಾರಾ? (ಒನ್ಇಂಡಿಯಾ ಕನ್ನಡ)

English summary
Hat Trick Hero Shivarajkumar's different fans associations strongly protested against releasing of Cauvery water to Tamil Nadu on 5th October in Bangalore. The protest rally starts at 11.30 am at Mysore Bank circle, Bangalore.
Please Wait while comments are loading...