»   » ಭರ್ಜರಿ ಬೆಲೆಗೆ ಶಿವಣ್ಣ 'ಶಿವ' ಡಿಸ್ಟ್ರಿಬ್ಯೂಷನ್ ರೈಟ್ಸ್

ಭರ್ಜರಿ ಬೆಲೆಗೆ ಶಿವಣ್ಣ 'ಶಿವ' ಡಿಸ್ಟ್ರಿಬ್ಯೂಷನ್ ರೈಟ್ಸ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಾರಿ ನಿರೀಕ್ಷೆಯ ಚಿತ್ರ 'ಶಿವ'. ಶಿವಣ್ಣ ಅಭಿನಯದ 101ನೇ ಚಿತ್ರ ಎಂಬುದು 'ಶಿವ' ಚಿತ್ರ ಒಂದು ಹೆಗ್ಗಳಿಕೆ. ಕಳೆದೊಂದು ವರ್ಷದಿಂದ ಶಿವಣ್ಣನ ಯಾವುದೇ ಚಿತ್ರವಿಲ್ಲದೆ ಅಭಿಮಾನಿಗಳು ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ...ಎಂದು ಚಡಪಡಿಸಿದ್ದರು. ಈಗ ಅವರ ಮುಂದೆ 'ಶಿವ' ಆಗಸ್ಟ್ 24ರಂದು ಪ್ರತ್ಯಕ್ಷವಾಗುತ್ತಿದ್ದಾನೆ.

'ಜೋಗಯ್ಯ' ಚಿತ್ರದ ಬಳಿಕ ಶಿವಣ್ಣ ಈ ಬಾರಿ ಸ್ಟೈಲಿಷ್ ಆಗಿ 'ಶಿವ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ. ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ನಿರ್ಮಾಪಕರು ಕೆಪಿ ಶ್ರೀಕಾಂತ್. ಈ ಚಿತ್ರದ ಬಿಕೆಟಿಸಿ (ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ) ವಿತರಣೆ ಹಕ್ಕುಗಳು ಭರ್ಜರಿ ಬೆಲೆಗೆ ಮಾರಾಟವಾಗಿವೆ.

ಗಾಂಧಿನಗರ ಮೂಲಗಳ ಪ್ರಕಾರ ಬಿಕೆಟಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಸರಿಸುಮಾರು ರು.2.75 ಕೋಟಿಗೆ ಮಾರಾಟವಾಗಿದೆ. ಈ ಪ್ರದೇಶದ ವಿತರಣೆ ಹಕ್ಕುಗಳು ಪಿವಿಎಲ್ ಎಂಟರ್ ಪ್ರೈಸಸ್ ಪಾಲಾಗಿವೆ. ಇನ್ನು ಉತ್ತರ ಕರ್ನಾಟಕದ ವಿತರಣೆ ಹಕ್ಕುಗಳು ಶಿವಣ್ಣನ 99ನೇ ಚಿತ್ರ 'ಮೈಲಾರಿ' ಚಿತ್ರದ ಹಕ್ಕುಗಳನ್ನು ಪಡೆದಿದ್ದ ಕಂಠಿ ಅವರ ಪಾಲಾಗಿವೆ.

ಹುಬ್ಬಳ್ಳಿ, ಗದಗ, ರಾಣಿಬೆನ್ನೂರು, ಬಿಜಾಪುರದ ಹಕ್ಕುಗಳು ರು.80 ರಿಂದ 90 ಲಕ್ಷಕ್ಕೆ ಮಾರಾಟವಾಗಿವೆ. ಇನ್ನು ಉಳಿದಂತೆ ಧಾರವಾಡ ಹಾಗೂ ಬೆಳಗಾವಿ ಪ್ರಾಂತ್ಯದ ವಿತರಣೆ ಹಕ್ಕುಗಳಿಗೂ ಭರ್ಜರಿ ಬೆಲೆ ನಿರೀಕ್ಷಿಸಲಾಗಿದೆ. ಇನ್ನು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

'ಎಕೆ 47' ಹಾಗೂ 'ಸಿಂಹದ ಮರಿ' ಚಿತ್ರಗಳ ಬಳಿಕ ಓಂ ಪ್ರಕಾಶ್ ರಾವ್ ಹಾಗೂ ಶಿವಣ್ಣ ಕೈಜೋಡಿಸಿರುವ ಚಿತ್ರವಿದು. ಹತ್ತು ವರ್ಷಗಳ ಗ್ಯಾಪ್ ಬಳಿಕ ಓಂ ಡೈರೆಕ್ಷನ್ ನಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಚಿತ್ರದ ನಾಯಕಿ ರಾಗಿಣಿ ದ್ವಿವೇದಿ.

ಸತ್ಯ ಹೆಗಡೆ ಅವರ ಛಾಯಾಗ್ರಹಣ, ಗುರುಕಿರಣ್ ಸಂಗೀತ, ಎಂಎಸ್ ರಮೇಶ್ ಅವರ ಸಂಭಾಷಣೆ, ಪಳನಿ ರಾಜ್, ರವಿ ವರ್ಮ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು, ಶೋಭರಾಜ್, ಬುಲೆಟ್ ಪ್ರಕಾಶ್, ಸರಿಗಮ ವಿಜಿ, ಸಾಯ್ ರವಿ, ಚಿತ್ರಾ ಶೆಣೈ, ಮನದೀಪ್ ರಾಯ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
If sources are to be believed Century Star Shivarajkumar starer Shiva distribution rights sold for fancy price Rs. 2.75 crores for the Bengaluru Kolar Tumkur Chikkaballapur region. The movie is all set to release on 24th August.
Please Wait while comments are loading...