»   » ಶಿವಣ್ಣನ ಕಡ್ಡಿಪುಡಿ ಚಿತ್ರ ಭರ್ಜರಿ ಬೆಲೆಗೆ ಟಿವಿಗೆ ಮಾರಾಟ

ಶಿವಣ್ಣನ ಕಡ್ಡಿಪುಡಿ ಚಿತ್ರ ಭರ್ಜರಿ ಬೆಲೆಗೆ ಟಿವಿಗೆ ಮಾರಾಟ

Posted By:
Subscribe to Filmibeat Kannada

ಸ್ಟಾರ್ ನಟರ ಇಲ್ಲವೇ ನಿರ್ದೇಶಕರ ಚಿತ್ರಗಳು ಬಿಡುಗಡೆಗೆ ಅಥವಾ ಮಹೂರ್ತಕ್ಕೆ ಮುನ್ನವೇ ಉತ್ತಮ ಬೆಲೆಗೆ ಟಿವಿ ವಾಹಿನಿಗಳಿಗೆ ಮಾರಾಟವಾಗುತ್ತಿರುವುದು ಕನ್ನಡ ಚಿತ್ರರಂಗದ ಇತ್ತೀಚಿನ ಟ್ರೆಂಡ್.

ಒಂದು ರೀತಿಯಲ್ಲಿ ಟಿವಿಗೆ ಮಾರಾಟ ಮಾಡಿ ನಿರ್ಮಾಪಕ ಸೇಫ್ ಆದರೆ ಚಿತ್ರದ ಭವಿಷ್ಯ ನಿರ್ಧಾರವಾಗುವುದು ಬಿಡುಗಡೆಯಾದ ನಂತರವೇ. ಹಾಗಾಗಿ ಟಿವಿ ವಾಹಿನಿಗಳಿಗೆ ಇದೊಂಥರಾ ಗ್ಯಾಮ್ಬಿಂಗ್.

Shivaraj Kumar Duniya Soori's Kaddipudi movie satellite rights sold

ಪುನೀತ್ ಅಭಿನಯದ 'ಅಣ್ಣಾ ಬಾಂಡ್' ಚಿತ್ರ ಕಮರ್ಷಿಯಲ್ ಹಿಟ್ ಆದ ಬೆನ್ನಲ್ಲೇ ನಿರ್ದೇಶಕ ಸೂರಿ ಕೈಗೆತ್ತಿಗೊಂಡ ತನ್ನ ಆರನೇ ಚಿತ್ರವೇ ಕಡ್ಡಿಪುಡಿ.

ವಿಷಯಕ್ಕೆ ಬರುವುದಾದರೆ ಶಿವರಾಜ್ ಕುಮಾರ್, ರಾಧಿಕಾ ಪಂಡಿತ್ ಪ್ರಮುಖ ಭೂಮಿಕೆಯಲ್ಲಿರುವ ಸೂರಿ ನಿರ್ದೇಶನದ 2013ರ ಬಹು ನಿರೀಕ್ಷಿತ 'ಕಡ್ಡಿಪುಡಿ' ಚಿತ್ರದ ಟಿವಿ ಪ್ರಸಾರದ ಹಕ್ಕು 2.9 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನುವ ಸುದ್ದಿ.

ಯಾವ ವಾಹಿನಿ ಚಿತ್ರದ ರೈಟ್ಸ್ ತನ್ನಾದಾಗಿಸಿಕೊಂಡಿದೆ, ಚಿತ್ರ ಪ್ರಸಾರಕ್ಕೆ ನಿರ್ಮಾಪಕರ ಜೊತೆ ಆದ ಒಡಂಬಡಿಕೆ ಏನು ಎನ್ನುವ ಬಗ್ಗೆ ಸದ್ಯ ಮಾಹಿತಿ ಬಹಿರಂಗವಾಗಿಲ್ಲ.

ತನ್ನ ಜೀವನದಲ್ಲಿ ನಡೆದ ಸಣ್ಣಪುಟ್ಟ ಘಟನೆಗಳನ್ನು ಆದರಿಸಿ ನಿರ್ದೇಶಕ ಸೂರಿ ಸ್ವಮೇಕ್ ಚಿತ್ರದೊಂದನ್ನು ತೆರೆ ಮೇಲೆ ತರಲಿದ್ದಾರೆ.

ಪಕ್ಕಾ ಲೋಕಲ್ ಫ್ಲೇವರ್ ನಲ್ಲಿ ನಿರ್ಮಾಣವಾಗುತ್ತಿರುವ ಕಡ್ಡಿಪುಡಿ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ.

ಚಿತ್ರದಲ್ಲಿ ಶಿವಣ್ಣ ಹೆಸರು ಆನಂದ್ ಅಲಿಯಾಸ್ ಕಡ್ಡಿಪುಡಿ. ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಲಿದ್ದಾರೆ. ಕಡ್ಡಿಪುಡಿ ಹೆಸರಿಗೆ ತಕ್ಕಂತೆ ತಂಬಾಕಿನ ಕಿಚ್ ಚಿತ್ರದಲ್ಲಿ ಇರುತ್ತದೆ ಎನ್ನುತ್ತಾರೆ ನಿರ್ದೇಶಕ ಸೂರಿ.

ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಪಕ್ಕಾ ಸಂಸಾರಸ್ಥ ಮತ್ತು ಸುಕ್ಕಾ 'ರಾ' ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ, ಎಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಅವಿನಾಶ್ ಹಾಗೂ ರೇಣು ಪ್ರಸಾದ್ ಅವರು ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಕಡ್ಡಿಪುಡಿ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ

English summary
Duniya Soori directed Kaddipudi movie satellite rights sold. Shivaraj Kumar, Radhika Pandit in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada