For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 125ನೇ ಸಿನಿಮಾ 'ವೇದ'ಗೆ ಭರ್ಜರಿ ಪ್ಲ್ಯಾನ್: ಇಲ್ಲಿದೆ ರಾಯಚೂರು To ಚಿತ್ರದುರ್ಗ ಇವೆಂಟ್ ಲಿಸ್ಟ್!

  |

  ಶಿವಣ್ಣನ 125ನೇ ಸಿನಿಮಾ ಅಂದರೆ ಸುಮ್ಮನೆನಾ? ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತೆ. ರಿಲೀಸ್‌ಗೆ ಒಂದು ತಿಂಗಳು ಇದೆ ಅನ್ನುವಾಗಲೇ ಫ್ಯಾನ್ಸ್ ಸೆಲೆಬ್ರೆಷನ್ ಶುರುವಾಗುತ್ತೆ. ಇನ್ನು ಸಿನಿಮಾ ತಂಡ ಸುಮ್ಮನೆ ಕೂರುತ್ತಾ? ಅದಕ್ಕೆ ದೊಡ್ಡದೊಂದು ವೇದಿಕೆ ಸಜ್ಜಾಗಿದೆ.

  'ವೇದ' ಹಾಡಿ ಹಾಗೂ ಟೀಸರ್ ಝಲಕ್ ಈಗಾಗಲೇ ಸಿನಿಪ್ರೇಮಿಗಳ ನಿದ್ದೆ ಕೆಡಿಸಿದೆ. ಸಿನಿಮಾ ಯಾವಾಗ ನೋಡುತ್ತೇವೋ ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿಯೇ ಅವರ ಕುತೂಹಲವನ್ನು ತಣಿಸಲು 'ವೇದ' ತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.

  Vedha Teaser: ಕಲ್ಲು, ಮಚ್ಚು, ಪಂಜು, 'ವೇದ'ನ ಅಸ್ತ್ರ: ಶಿವಣ್ಣ 125ನೇ ಚಿತ್ರದ ಟೀಸರ್ ಚಿಂದಿ!Vedha Teaser: ಕಲ್ಲು, ಮಚ್ಚು, ಪಂಜು, 'ವೇದ'ನ ಅಸ್ತ್ರ: ಶಿವಣ್ಣ 125ನೇ ಚಿತ್ರದ ಟೀಸರ್ ಚಿಂದಿ!

  ಹೌದು, ಕರ್ನಾಟಕದ ಬಹುತೇಕ ಭಾಗಗಳಲ್ಲಿ 'ವೇದ' ಸಿನಿಮಾದ ಪ್ರಮೋಷನ್ ಮಾಡುವುದಕ್ಕೆ ವೇದಿಕೆ ಸಜ್ಜಾಗಿದೆ. ರಾಜ್ಯದ ಹಲವೆಡೆ ಸಿನಿಮಾದ ಪ್ರಿ-ರಿಲೀಸ್ ಇವೆಂಟ್‌ ಮಾಡುವುದಕ್ಕೆ ಈಗಾಗಲೇ ಪ್ಲ್ಯಾನ್ ಮಾಡಲಾಗಿದ್ದು, ಫಿಲ್ಮಿಬೀಟ್‌ಗೆ ಡಿಟೈಲ್ಸ್ ಸಿಕ್ಕಿದೆ.

  125ನೇ ಸಿನಿಮಾ ಸಿಕ್ಕಾಪಟ್ಟೆ ಡಿಮ್ಯಾಂಡ್

  125ನೇ ಸಿನಿಮಾ ಸಿಕ್ಕಾಪಟ್ಟೆ ಡಿಮ್ಯಾಂಡ್

  ಸೋಶಿಯಲ್ ಮೀಡಿಯಾಗಳಲ್ಲಿ ಶಿವಣ್ಣನ 125ನೇ ಸಿನಿಮಾದ ಹವಾ ಜೋರಾಗಿದೆ. 'ವೇದ'ದಲ್ಲಿ ಶಿವಣ್ಣನ ಲುಕ್, ಗೆಟಪ್ ಎಲ್ಲವೂ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಗೀತಾ ಶಿವರಾಜ್‌ಕುಮಾರ್ ಹಾಗೂ ಜೀ ಸ್ಟುಡಿಯೋಸ್ ಜಂಟಿಯಾಗಿ 'ವೇದ' ಚಿತ್ರವನ್ನು ನಿರ್ಮಾಣ ಮಾಡಿದೆ. ಅಲ್ಲದೆ ಜೀ ಸ್ಟುಡಿಯೋಸ್ ಸಂಸ್ಥೆನೇ ವಿತರಣೆಯನ್ನೂ ಮಾಡುತ್ತಿದೆ. ಈ ಮಧ್ಯೆ ಚಿತ್ರತಂಡ 125ನೇ ಸಿನಿಮಾದ ಪ್ರಿ-ರಿಲೀಸ್ ಇವೆಂಟ್‌ ಅನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವುದಕ್ಕೆ ಮುಂದಾಗಿದೆ.

  ಮಂಗಳೂರಿನಲ್ಲಿ ಸಾಂಗ್ ರಿಲೀಸ್

  ಮಂಗಳೂರಿನಲ್ಲಿ ಸಾಂಗ್ ರಿಲೀಸ್

  ನಾಳೆ ( ಡಿಸೆಂಬರ್ 03) ರಿಂದ 'ವೇದ' ಸಿನಿಮಾದ ಇವೆಂಟ್‌ಗಳು ಆರಂಭ ಆಗುತ್ತಿವೆ. ಶಿವಣ್ಣ ಹಾಗೂ ಅವರ ತಂಡ ರಾಯಚೂರಿನಲ್ಲಿ ದೊಡ್ಡ ಇವೆಂಟ್ ಅನ್ನು ಹಮ್ಮಿಕೊಂಡಿದೆ. ಅಲ್ಲಿ 'ವೇದ' ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಇವೆಂಟ್ ಮುಗಿಯುತ್ತಿದ್ದಂತೆ ಮಂಗಳೂರಿಗೆ ಪಯಣ ಬೆಳೆಸಲಿದೆ. ಡಿಸೆಂಬರ್ 10ರಂದು ಮಂಗಳೂರಿನಲ್ಲಿ 'ವೇದ' ಸಿನಿಮಾದ ಸಾಂಗ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಈ ಎರಡೂ ಇವೆಂಟ್‌ಗಳನ್ನು ದೊಡ್ಡ ಮಟ್ಟದಲ್ಲಿ ನಡೆಯುತ್ತೆ ಎನ್ನಲಾಗಿದೆ.

  ಚಿತ್ರಗುರ್ಗ, ಹುಬ್ಬಳ್ಳಿಯಲ್ಲೂ ಇವೆಂಟ್

  ಚಿತ್ರಗುರ್ಗ, ಹುಬ್ಬಳ್ಳಿಯಲ್ಲೂ ಇವೆಂಟ್

  'ವೇದ' ಕಾರ್ಯಕ್ರಮಗಳ ಪಟ್ಟಿ ಇಲ್ಲಿಗೆ ಮುಗಿಯೋದಿಲ್ಲ. ಡಿಸೆಂಬರ್ 11ರಂದು ಗೆಲು ಕನ್ನಡ ಗೆಳೆಯ ಸಮಿತಿ ವತಿಯಿಂದ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಶಿವಣ್ಣ ಅಂಡ್ ಟೀಂ ಭಾಗಿಯಾಗುತ್ತಿದೆ. ಇಲ್ಲಿ 'ವೇದ' ಚಿತ್ರದ ಟೀಸರ್ ಹಾಗೂ ಸಾಂಗ್‌ಗಳನ್ನು ಪ್ರದರ್ಶನ ಮಾಡಲಿದೆ. ಡಿಸೆಂಬರ್ 14ರಂದು ಚಿತ್ರತಂಡ ಹುಬ್ಬಳ್ಳಿಗೆ ತೆರಳಲಿದೆ. ಹಾಗೇ ಡಿಸೆಂಬರ್ 15ರಂದು ಚಿತ್ರದುರ್ಗ ತಲುಪಲಿದ್ದು, ಅಲ್ಲೂ ಒಂದು ಇವೆಂಟ್ ಪ್ಲ್ಯಾನ್ ಮಾಡಲಾಗಿದೆ.

  3 ಭಾಷೆಯಲ್ಲಿ ರಿಲೀಸ್

  3 ಭಾಷೆಯಲ್ಲಿ ರಿಲೀಸ್

  ಶಿವರಾಜ್‌ಕುಮಾರ್ ಸಿನಿಮಾ 'ವೇದ' ಇದೇ ಡಿಸೆಂಬರ್ 23ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ 'ವೇದ' ಬಿಡುಗಡೆಯಾಗಲಿದೆ. 'ಮಗಳು ಜಾನಕಿ' ಧಾರಾವಾಹಿ ಹಾಗೂ 'ಹೀರೊ' ಸಿನಿಮಾದಲ್ಲಿ ನಟಿಸಿರುವ ಗಾನವಿ ಲಕ್ಷ್ಮಣ್ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 1960ರ ದಶಕದ ಕಥೆಯನ್ನು ಎ ಹರ್ಷ ತೆರೆಮೇಲೆ ತರುತ್ತಿದ್ದಾರೆ.

  English summary
  Shivarajkumar Starrer 125th Movie Veda Movie Pre-Release Events Plan Exclusive Details, Know More.
  Friday, December 2, 2022, 23:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X