Don't Miss!
- News
ಮಾಳಾಪುರ: ಸೇವಾ ನ್ಯೂನ್ಯತೆ ಎಸಗಿದ ಸ್ಪೈಸ್ಜೆಟ್ ಕಂಪೆನಿಗೆ 63,457 ರೂಪಾಯಿ ದಂಡ
- Lifestyle
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
- Sports
IND Vs AUS Test : ಅಶ್ವಿನ್ ರೀತಿಯಲ್ಲೇ ಬೌಲಿಂಗ್: ಮಹೇಶ್ ಪಿಥಿಯಾ ಬೌಲಿಂಗ್ಗೆ ದಂಗಾದ ಆಸ್ಟ್ರೇಲಿಯಾ ಆಟಗಾರರು!
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಕ್ಷಿತಾ ಪ್ರೇಮ್ ಸಲಹೆ ಮೇರೆಗೆ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಶಿವಣ್ಣ: ಎಲ್ಲ ದೈವ ಇಚ್ಛೆ ಎಂದ ಸೆಂಚುರಿಸ್ಟಾರ್!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತಮ್ಮ 125ನೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು (ಡಿಸೆಂಬರ್ 10) ಮಂಗಳೂರಿನಲ್ಲಿ 'ವೇದ' ಸಿನಿಮಾ ಇವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಮಂಗಳೂರಿನ ಪ್ರಮುಖ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದಾರೆ.
ಒಂದು ದಿನ ಮುನ್ನವೇ ಮಂಗಳೂರಿಗೆ ಆಗಮಿಸಿರುವ ಶಿವರಾಜ್‌ಕುಮಾರ್ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಬಂದಿದ್ದಾರೆ. ಇಂದು (ಡಿಸೆಂಬರ್ 10) ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ.
Exclusive:"ನಾನು
ಹೋಗುವಾಗಲೂ
ಯಾರಾದ್ರೂ
ಕಲ್ಲಲ್ಲಿ
ಹೊಡೆಯಬಹುದು":
ಬೆಳಗಾವಿ
ವಿವಾದದ
ಬಗ್ಗೆ
ಶಿವಣ್ಣ
ಪ್ರತಿಕ್ರಿಯೆ!
ಕೊರಗಜ್ಜ ದೈವ ಆದಿಕ್ಷೇತ್ರಕ್ಕೆ ನಟಿ ರಕ್ಷಿತಾ ಪ್ರೇಮ್ ಕೂಡ ಭೇಟಿ ನೀಡಿದ್ದರು. ಮನಸ್ಸಿನಲ್ಲಿ ಅಂದ್ಕೊಂಡಿದ್ದು ಈಡೇರಿದರೆ ನಿನ್ನ ಸನ್ನಿಧಿಗೆ ಬಂದು ಕೊರಗಜ್ಜನಿಗೆ ಬೆಳ್ಳಿ ದೀಪ ಹಾಗೂ ಗಂಟೆಯನ್ನು ಹರಕೆ ನೀಡುತ್ತೇನೆ ಎಂದು ಕೇಳಿಕೊಂಡಿದ್ದರಂತೆ. ಈಗ ನಟಿ ರಕ್ಷಿತಾ ಪ್ರೇಮ್ ಅವರೇ ಶಿವಣ್ಣನಿಗೂ ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡುವಂತೆ ಹೇಳಿದ್ದರಂತೆ. ಅವರ ಸಲಹೆ ಮೇರೆಗೆ ಶಿವರಾಜ್‌ಕುಮಾರ್ ಇಂದು ಕೊರಗಜ್ಜನ ಸನ್ನಿದಾನಕ್ಕೆ ಭೇಟಿ ನೀಡಿ ಹರಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಮಾಧ್ಯಮಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಉದ್ದೇಶವನ್ನು ತಿಳಿಸಿದ್ದಾರೆ.

'ವೇದ' ಪ್ರಮೋಷನ್‌ನಲ್ಲಿ ಭಾಗಿ
"ವೇದ ಟೀಮ್ ಜೊತೆ ಬಂದಿದ್ದೆ. ವೇದ ನನ್ನ 125ನೇ ಸಿನಿಮಾ. ಗೀತಾ ಪಿಕ್ಚರ್ಸ್‌ನಿಂದ. ನನ್ನ ಹೆಂಡ್ತಿ ಮೊದಲ ಬಾರಿ ಪ್ರಡ್ಯೂಸ್ ಮಾಡಿದ್ದಾರೆ. ಇವತ್ತು ಒಂದು ಇವೆಂಟ್ ಇತ್ತು. ಆ ಇವೆಂಟ್‌ನಲ್ಲಿ ವೇದ ಸಿನಿಮಾದ್ದೂ ಒಂದು ಪೋಷನ್ ಇತ್ತು. ಅದಕ್ಕೋಸ್ಕರನೇ ಒಂದು ದಿನ ಮುಂಚೆ ಬಂದಿದ್ದೆವು. ಬರಬೇಕಾದರೆ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಇವತ್ತು ಕೊರಜ್ಜನ ಸ್ಥಳಕ್ಕೆ ಬಂದಿದ್ದೇವೆ. ಇದು ಗೊತ್ತಾಗಿದ್ದು ರಕ್ಷಿತಾ ಪ್ರೇಮ್ ಅವರಿಂದ. ಅಲ್ಲಿ ಹೋಗಿ ಅಣ್ಣ ಒಳ್ಳೆಯದಾಗುತ್ತೆ ಅಂದ ಹೇಳಿದ್ದರು. ಸರಿ ನಮಗೂ ಹೋಗಿ ಬರೋಣ ಅಂತ ಅನಿಸ್ತು." ಎಂದು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದರ ಬಗ್ಗೆ ಶಿವಣ್ಣ ಹೇಳಿದ್ದಾರೆ.
ತಮಿಳಿನ
'ಕ್ಯಾಪ್ಟನ್
ಮಿಲ್ಲರ್'
ಸಿನಿಮಾದಲ್ಲಿ
ಧನುಷ್‌ಗೆ
ಅಣ್ಣ
ನಮ್ಮ
ಶಿವಣ್ಣ

'ಕೊರಗಜ್ಜನ ಬಳಿ ಬೇಡಿಕೊಳ್ಳುವುದು ತುಂಬಾ ಸಿಂಪಲ್'
"ಮನುಷ್ಯ ಸಮಸ್ಯೆಯನ್ನು ತುಂಬಾನೇ ಸಿಂಪಲ್ ಆಗಿ ಹೇಳಿಕೊಳ್ಳುವ ರೀತಿ ಅಂತ ಅನಿಸಿತು. ಏನೂ ಆಡಂಬರವಿಲ್ಲ. ಆರಾಮಾಗಿ ಬಂದು ಚಕ್ಕಳಿ ಹಾಗೂ ಎಲೆ ಮೇಲೆ ಇಟ್ಟು ಸಾರಾಯಿ ಹಾಕುತ್ತಾರೆ. ಅದನ್ನು ಹಾಕಿ, ನಮ್ಮ ಮನಸ್ಸಿನಲ್ಲಿ ಇರೋ ಬೇಡಿಕೆ ಅಂದ್ಕೊಂಡು, ಮತ್ತೆ ಪ್ರಸಾದ ಕೊಡುತ್ತಾರೆ. ನಮಗೆ ಇದು ತುಂಬಾನೇ ಸಿಂಪಲ್ ಅಂತ ಅನಿಸಿತು. ಯಾವಾಗಲೂ ಸಿಂಪಲ್ ಆಗಿರೋ ಬದುಕಲ್ಲಿ ಬೆಲೆ ತಂದುಕೊಡುತ್ತೆ.

'ರಕ್ಷಿತಾ ಪ್ರೇಮ್ ಸಲಹೆ ಮೇರೆಗೆ ಇಲ್ಲಿಗೆ ಬಂದೆ'
ನಾವು ಡಿಕೆಡಿ ಮಾಡುವಾಗ ರಕ್ಷಿತಾ ಅವರು ಹೇಳಿದ್ರು. ನೀವು ಹೋಗಿ ಅಣ್ಣ ದೇವಸ್ಥಾನ ಅಂತ ಹೇಳಿದ್ರು. ಮತ್ತೆ ಅವರು ನನಗೋಸ್ಕರ ಬೇಡಿಕೊಂಡಿದ್ದರು. ಅವರು ಹೇಳಿದ್ರಲ್ಲ ಅಂತ ನನಗೂ ಮನಸ್ಸಿಗೆ ಸಮಾಧಾನ ಆಯ್ತು, ನೋಡಿ ನಮ್ಮನ್ನು ಹೇಗೆ ಕರೆದುಕೊಂಡು ಬರುತ್ತೆ ಅಂತ. ನಮ್ಮ ತಾಯಿ ಇರುವಾಗಲೂ ಉಡುಪಿ ದೇವಸ್ಥಾನ, ಮುಕಾಂಬಿಕೆ ದೇವಸ್ಥಾನಕ್ಕೆ ಬರುತ್ತಿದ್ದೆವು. ನಮಗೆ ಮಂಗಳೂರು ಹೊಸದೇನು ಅಲ್ಲ. ತಂದೆಯವರು ಆದ್ಮೇಲೆ ಹೆಚ್ಚು ಸಿನಿಮಾ ಇಲ್ಲಿ ಶೂಟಿಂಗ್ ನಡೆದಿರೋದು ನಂದೇ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಮಂಗಳೂರು, ಉಡುಪಿ, ಕುಂದಾಪುರ ಕಡೆಗಳಲ್ಲಿ ಸುಮಾರು ಸಿನಿಮಾವನ್ನು ನಾವು ಶೂಟಿಂಗ್ ಮಾಡಿದ್ದೇವೆ."

'ಆಗೋದು ಬಿಡೋದು ದೈವದ ಇಚ್ಚೆ'
" ಇಲ್ಲೊಂದು ನಂಬಿಕೆಯಿದೆ. ನಂಬಿಕೆಯಲ್ಲೊಂದು ಪವರ್ ಇದೆ. ಆಗಲೇಬೇಕು. ಆಗುತ್ತಾ ಅನ್ನೋದು ಸೆಕೆಂಡರಿ. ನಾವು ಇಲ್ಲಿಗೆ ಬರಬೇಕು ಅನ್ನೋದು ಇದೆಯಲ್ಲ ಅದು ಮುಖ್ಯ. ಆಗೋದು ಬಿಡೋದು ಸೆಕೆಂಡರಿ. ಆಗೋದು ಬಿಡೋದು ನಮ್ಮ ಕೈಯಲ್ಲಿ ಇಲ್ಲ. ಅದು ಆ ದೈವ ಕೈಯಲ್ಲಿ ಇದೆ. ಅದರ ಮೇಲೆ ಬಿಟ್ಟು ನಂಬಿಕೆಯಿಂದ ಬರಬೇಕು ಅಷ್ಟೆ. ಆಗಲೇಬೇಕು ಅಂತ ಬಂದ್ರೆ ತಪ್ಪು. ಶಾಂತಿ ನೆಮ್ಮದಿಯಿಂದ ಬರಬೇಕು ಅಷ್ಟೇ. ಅದೆಲ್ಲ ದೈವ ಇಚ್ಚೆ. ಆದರೆ, ಸಂತೋಷ. ಆಗಿಲ್ಲ ಅಂದರೆ ದು:ಖ ಪಡಬೇಕಿಲ್ಲ." ಎಂದು ಶಿವಣ್ಣ ಹೇಳಿದ್ದಾರೆ.