For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದ ಕಾರಣದಿಂದ ಈ ವರ್ಷ ಶಿವಣ್ಣ ಹುಟ್ಟುಹಬ್ಬ ಆಚರಿಸುತ್ತಿಲ್ಲ

  |
  ಲಂಡನ್‍ಗೆ ಹಾರಲಿದ್ದಾರೆ ಶಿವರಾಜ್ ಕುಮಾರ್ | FILMIBET KANNADA

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳಿಗೆ ಬೇಸರ ಆಗಬಹುದು. ಯಾಕೆಂದರೆ, ಶಿವಣ್ಣ ಈ ವರ್ಷ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸದೆ ಇರಲು ನಿರ್ಧಾರ ಮಾಡಿದ್ದಾರೆ.

  ಶಿವರಾಜ್ ಕುಮಾರ್ ಭುಜದ ನೋವಿನಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಅದರ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಬೇಕಾಗಿದೆ. ಜುಲೈ 12 ಕ್ಕೆ ಶಿವಣ್ಣ ಹುಟ್ಟುಹಬ್ಬ ಇದ್ದು, ಜುಲೈ 6 ರಂದೇ ಅವರು ವಿಮಾನ ಏರಲಿದ್ದಾರೆ.

  1 ತಿಂಗಳಿನಲ್ಲಿ ಟಿವಿಯಲ್ಲಿ ಬರಲಿದೆ 'ಕವಚ' ಸಿನಿಮಾ

  ಜುಲೈ 6 ರಂದು ಲಂಡನ್ ಗೆ ಪ್ರಯಾಣ ಬೆಳೆಸಲಿರೋ ಶಿವರಾಜ್ ಕುಮಾರ್ ಸುಮಾರು 20 ದಿನಗಳ ಕಾಲ ಲಂಡನ್ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಚಿಕಿತ್ಸೆ ಮುಗಿಸಿಕೊಂಡು ಬರಲು ಜುಲೈ 26ರ ಮೇಲೆ ಆಗಲಿದೆ. ಹೀಗಾಗಿ, ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಶಿವಣ್ಣ ಸಿಗುತ್ತಿಲ್ಲ.

  ಕಳೆದ ವರ್ಷದ ಶಿವರಾಜ್ ಕುಮಾರ್ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿದ್ದರು. 56 ಕೆಜಿಯ ಕೇಕ್ ಅನ್ನು ಅಭಿಮಾನಿಗಳು ಶಿವಣ್ಣನಿಂದ ಕಟ್ ಮಾಡಿಸಿದ್ದರು. ಆದರೆ, ಅದರ ಹಿಂದಿನ ವರ್ಷ ಅಂದರೆ, 2017 ರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿಧನರಾದ ಕಾರಣ ಶಿವಣ್ಣ ಹುಟ್ಟುಹಬ್ಬ ಆಚರಿಸಲಿಲ್ಲ.

  ಶಿವರಾಜ್ ಕುಮಾರ್ 'ಕಚವ' ಸಿನಿಮಾದ ನಂತರ ಸದ್ಯ 'ರುಸ್ತುಂ', 'ಆನಂದ್', 'ದ್ರೋಣ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Kannada actor Shivarajkumar will not celebrating his birthday this year as he have to london for medical treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X