For Quick Alerts
  ALLOW NOTIFICATIONS  
  For Daily Alerts

  ಓಂ ಸಿನಿಮಾಕ್ಕೆ 25 ವರ್ಷ: ಸಂಭ್ರಮಕ್ಕೆ ಅಡ್ಡಿಯಾದ ಟೆಕ್ನಿಕಲ್ ಪ್ರಾಬ್ಲಮ್!

  |

  ಕನ್ನಡ ಸಿನಿ ಪ್ರೇಕ್ಷಕರು ಎಂದೂ ಮರೆಯದ ಸಿನಿಮಾ 'ಓಂ' ಸಿನಿಮಾ ಬಿಡುಗಡೆ ಆಗಿ ಇಂದಿಗೆ 25 ವರ್ಷ. ಈ ಸಂಭ್ರಮವನ್ನು ಒಟ್ಟಿಗೆ ಆಚರಿಸಲು ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ತಯಾರಿದ್ದರು, ಆದರೆ ಅದು ಸಾಧ್ಯವಾಗಿಲ್ಲ.

  'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

  ಹೌದು, ಓಂ ಸಿನಿಮಾಕ್ಕೆ 25 ವರ್ಷವಾದ ಕಾರಣ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರು ಒಟ್ಟಿಗೆ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಲು ಯೋಜನೆ ಹಾಕಿಕೊಂಡಿದ್ದರು.

  ಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕತೆ

  ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರು ಒಟ್ಟಿಗೆ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ನಿರೀಕ್ಷೆಯಿಂದ ಸಾವಿರಾರು ಅಭಿಮಾನಿಗಳು ಕಾದಿದ್ದರು. ಆದರೆ ಅವರೆಲ್ಲರಿಗೂ ನಿರಾಸೆಯಾಯಿತು. ಅದಕ್ಕೆ ಕಾರಣ ತಾಂತ್ರಿಕ ಸಮಸ್ಯೆ!

  ಮೊದಲಿಗೆ ಲೈವ್ ಆರಂಭಿಸಿದ ಶಿವರಾಜ್‌ಕುಮಾರ್

  ಮೊದಲಿಗೆ ಲೈವ್ ಆರಂಭಿಸಿದ ಶಿವರಾಜ್‌ಕುಮಾರ್

  ಹೌದು, ಶಿವರಾಜ್ ಕುಮಾರ್ ಅವರು ಮೊದಲಿಗೆ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲೈವ್‌ ಗೆ ಆಗಮಿಸಿದರು. ಕೂಡಲೇ ಅಭಿಮಾನಿಗಳು ಫೇಸ್‌ಬುಕ್‌ ಲೈವ್ ನೋಡಲು ಪ್ರಾರಂಭಿಸಿದರು. ಉಪೇಂದ್ರ ಅವರನ್ನು ಸೇರಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು.

  ಶಿವರಾಜ್ ಕುಮಾರ್ ಪುತ್ರಿ ಏನೇನೋ ಪ್ರಯತ್ನ ಪಟ್ಟರು

  ಶಿವರಾಜ್ ಕುಮಾರ್ ಪುತ್ರಿ ಏನೇನೋ ಪ್ರಯತ್ನ ಪಟ್ಟರು

  ಶಿವರಾಜ್ ಕುಮಾರ್ ಪುತ್ರಿ ಫೇಸ್‌ಬುಕ್ ಲೈವ್‌ ನಲ್ಲಿ ಉಪೇಂದ್ರ ಅವರನ್ನು ಸೇರಿಸಲು (ಆಡ್) ಮಾಡಲು ಸಾಕಷ್ಟು ಹರಸಾಹಸ ಪಟ್ಟರು ಆದರೆ ಸಾಧ್ಯವಾಗಲಿಲ್ಲ. ಉಪೇಂದ್ರ ಗೆ ಕರೆ ಮಾಡಿ ಸಲಹೆಗಳನ್ನು ನೀಡಿದರು, ಅವರು ನೀಡಿದ ಸಲಹೆಗಳನ್ನು ಪಾಲಿಸಿದರು ಆದರೂ ಇಬ್ಬರೂ ಒಟ್ಟಿಗೆ ಲೈವ್ ಬರಲು ಆಗಲೇ ಇಲ್ಲ.

  'ಓಂ' ಚಿತ್ರ ಸೃಷ್ಟಿಸಿದ ಅಪರೂಪದ ದಾಖಲೆಗಳು ಹಾಗೂ ಆಸಕ್ತಿಕರ ಸಂಗತಿಗಳು

  'ತಾಂತ್ರಿಕ ತೊಂದರೆಯಿಂದ ಉಪೇಂದ್ರ ನಮ್ಮೊಂದಿಗೆ ಸೇರಿಲ್ಲ'

  'ತಾಂತ್ರಿಕ ತೊಂದರೆಯಿಂದ ಉಪೇಂದ್ರ ನಮ್ಮೊಂದಿಗೆ ಸೇರಿಲ್ಲ'

  ಕಾದು-ಕಾದು ಸಾಕಾದ ಶಿವಣ್ಣ, ಒಬ್ಬರೇ ಲೈವ್ ಮಾಡಿದರು. 'ಉಪೇಂದ್ರ ಅವರು ನಮ್ಮೊಂದಿಗೆ ಸೇರಬೇಕಾಗಿತ್ತು, ಆದರೆ ತಾಂತ್ರಿಕ ತೊಂದರೆಯ ಕಾರಣ ಅವರು ನಮ್ಮೊಂದಿಗೆ ಸೇರಲಾಗುತ್ತಿಲ್ಲ. ಲಾಕ್‌ಡೌನ್ ಮುಗಿದ ಮೇಲೆ ಇಬ್ಬರೂ ಒಟ್ಟಿಗೆ ನಿಮ್ಮ ಮುಂದೆ ಬರುತ್ತೇವೆ' ಎಂದರು.

  ಓಂ ಸಿನಿಮಾದ ಹಾಡು ಹಾಡಿದ ಶಿವಣ್ಣ

  ಓಂ ಸಿನಿಮಾದ ಹಾಡು ಹಾಡಿದ ಶಿವಣ್ಣ

  ಸಾವಿರಾರು ಮಂದಿ ಶಿವರಾಜ್ ಕುಮಾರ್ ಅವರ ಲೈವ್ ನೋಡಿದರು. ಮೆಚ್ಚಿನ ನಾಯಕನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅಭಿಮಾನಿಯೊಬ್ಬನ ಒತ್ತಾಯದ ಮೇರೆಗೆ ಓಂ ಸಿನಿಮಾದ ಹಾಡೊಂದನ್ನು ಹಾಡಿದರು ಶಿವರಾಜ್‌ಕುಮಾರ್.

  English summary
  Actor Shivraj Kumar did Facebook live on the occasion on 25 years of Om. Upendra expected to join bu could not happen because of technical problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X