For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳಲ್ಲಿ ಶಿವಣ್ಣ 'ಕಡ್ಡಿಪುಡಿ' ಹವಾ ಶುರು

  By Rajendra
  |

  ಸಾಕಷ್ಟು ನಿರೀಕ್ಷೆ, ಕುತೂಹಲವನ್ನು ಹುಟ್ಟುಹಾಕಿರುವ ಚಿತ್ರ 'ಕಡ್ಡಿಪುಡಿ'. ವಿಚಿತ್ರ ಶೀರ್ಷಿಕೆಯಿಂದಲೇ ಗಮನಸೆಳೆಯುತ್ತಿರುವ ಈ ಚಿತ್ರ ಶುಕ್ರವಾರ (ಸೆ.7) ತೆರೆಗೆ ಅಪ್ಪಳಿಸುತ್ತಿದೆ. ದುನಿಯಾ ಸೂರಿ ಅವರ ನಿರ್ದೇಶನ, ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಚಿತ್ರದ ಬಗ್ಗೆ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. (ದುನಿಯಾ ಸೂರಿ ಸಂದರ್ಶನ ಓದಿ)

  ಈಗಾಗಲೆ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ವೀರೇಶ್, ನವರಂಗ್, ಮುಕುಂದ, ಸಿದ್ಧಲಿಂಗೇಶ್ವರ ಹಾಗೂ ಪಿವಿಆರ್, ಐನಾಕ್ಸ್, ಗೋಪಾಲನ್ ಸಿನಿಮಾಸ್ ನಂತಹ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿದೆ.

  ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕಡ್ಡಿಪುಡಿ' ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ಸರಿಸುಮಾರು ರು.6.5 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಸ್ಯಾಟಲೈಟ್ಸ್ ರೈಟ್ಸ್ ನಿಂದಲೇ ರು.3 ಕೋಟಿ ಬಂದಿದೆ.

  ಈಗಾಗಲೆ ಅರ್ಧ ಬಂಡವಾಳ ವಾಪಸ್ ಆಗಿದ್ದು ಒಂದೇ ವಾರದಲ್ಲಿ ಚಿತ್ರ ಲಾಭ ಮಾಡವ ಸೂಚನೆಗಳನ್ನು ನೀಡಿದೆ. ವಿ.ಹರಿಕೃಷ್ಣ ಸಂಗೀತದ ಹಾಡುಗಳು ಕೇಳುಗರಲ್ಲಿ ಹೊಸ ಭಾವಗಳನ್ನು ಹುಟ್ಟಿಸಿವೆ. ಇವೆಲ್ಲವೂ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

  ಎಂ.ಚಂದ್ರು ನಿರ್ಮಿಸಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮುಂಗಾರುಮಳೆ' ಖ್ಯಾತಿಯ ಎಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಅವಿನಾಶ್ ಹಾಗೂ ರೇಣು ಪ್ರಸಾದ್ ಅವರು ಪಾತ್ರವರ್ಗದಲ್ಲಿದ್ದಾರೆ. ಐಂದ್ರಿತಾ ರೇ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಹಾಡೊಂದಕ್ಕೂ ಹೆಜ್ಜೆ ಹಾಕಿದ್ದಾರೆ. ಚಿತ್ರದ ವಿಮರ್ಶೆಗಾಗಿ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Century Star Shivarajkumar and Radhika Pandit lead Kannada film Kaddipudi releasing on 7th June all over Karnataka more than 150 theatres. Duniya Soori and Sandalwood King Shivrajkumar coming together for the first time in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X