»   » ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್

ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನ ಸಿನಿಮಾಗೆ ಏನು ಟೈಟಲ್ ಅನ್ನೋದೇ ಒಂಥರಾ ಥ್ರಿಲ್. ಯಾಕಂದ್ರೆ ಶಿವಣ್ಣನಿಗೆ ಟೈಟಲ್ ಇಟ್ರೂ ಅದ್ರಲ್ಲಿ ಒಂದು ಪವರ್ ಇರುತ್ತೆ. ಈಗ ಅಂತಹ ಒಂದು ಟೈಟಲ್ ಮತ್ತೆ ಡಾ. ಶಿವರಾಜ್ ಕುಮಾರ್ ಪಾಲಾಗಿದೆ. ಆ ಮಾಸ್ ಟೈಟಲ್ಲೇ 'ದಿ ಲೀಡರ್'.

ಇತ್ತೀಚೆಗೆ ರೋಜ್ ಸಿನಿಮಾ ಮೂಲಕ ಯಶಸ್ವಿಯಾದ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ಇದಾಗಿದ್ದು, ಶಿವಣ್ಣ ಆಪ್ತರೂ ಆಗಿರೋ ತರುಣ್ ಶಿವಪ್ಪ ಹಲವು ವರ್ಷಗಳಿಂದ ಕಾದು ಶಿವರಾಜ್ ಕುಮಾರ್ ಡೇಟ್ಸ್ ಪಡೆದುಕೊಂಡಿದ್ದಾರೆ. 'ದಿ ಲೀಡರ್' ಸಿನಿಮಾ ನಿರ್ದೇಶನ ಮಾಡ್ತಿರೋದು ಕೂಡ ರೋಜ್ ನಿರ್ದೇಶನ ಮಾಡಿದ್ದ ಸಹನಾ ಹೆಚ್ ಎಸ್. [ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ]

Shivrajkumar new movie Leader

ಔಟ್ ಅಂಡ್ ಔಟ್ ಮಾಸ್ ಜೊತೆಗೆ ಸ್ವಲ್ಪ ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನೂ ಹೆಣೆದಿರೋ ನಿರ್ದೇಶಕರು ಶಿವಣ್ಣನನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹೇಳಿ ಕೇಳಿ ಸ್ಯಾಂಡಲ್ ವುಡ್ ನ ಮುಂದಿನ 'ಲೀಡರ್' ಶಿವಣ್ಣ ಅನ್ನೋದು ಬಿಂಬಿತವಾಗಿದೆ. [ರಾಘಣ್ಣನ ಮಾತು ಕೇಳಿ ಗದ್ಗಿತರಾದ ಶಿವಣ್ಣ]

ಹಾಗಾಗಿ ಲೀಡರ್ ಅನ್ನೋ ಟೈಟಲ್ ಸೂಪರ್ ಆಗೇ ಹೊಂದಿಕೆಯಾಗುತ್ತೆ. ಆದ್ರೆ ಕನ್ನಡ ಪ್ರೀತಿ ಇರೋ ಶಿವಣ್ಣ ಇಂಗ್ಲೀಷ್ ಟೈಟಲ್ ಗಳನ್ನ ಹೆಚ್ಚು ಒಪ್ತಿರೋದು ನೋಡಿದ್ರೆ ಶಿವರಾಜ್ ಕುಮಾರ್ ಗೆ ಕನ್ನಡದ ಬಗ್ಗೆ ಸ್ವಲ್ಪ ಜವಾಬ್ದಾರಿ ಬೇಕು ಅನ್ನಿಸುತ್ತೆ.

English summary
Hat trick Hero Dr. Shivrajkumar new movie titled as 'Leader'. The movie is being produced by Tarun Shivappa and Hardhik Gowda under Shri Bhairaveshwara Film Planet and directed by Sahana Murthy.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada