»   » ಶಿವರಾಜ್ ಕುಮಾರ್ ಹೊಸ ಚಿತ್ರ 'ಬಂಗಾರದ ವಂಶ'

ಶಿವರಾಜ್ ಕುಮಾರ್ ಹೊಸ ಚಿತ್ರ 'ಬಂಗಾರದ ವಂಶ'

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' (1972) ಚಿತ್ರ ಹಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಆ ಚಿತ್ರವನ್ನು ನೋಡಿದ ಅದೆಷ್ಟೋ ಅಭಿಮಾನಿಗಳು ನೇಗಿಲು ಹಿಡಿದರು. ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸಂಪ್ರದಾಯದ ಚಿತ್ರಗಳಿಗೆ ನಾಂದಿ ಹಾಡಿದ ಖ್ಯಾತಿ ಆ ಚಿತ್ರಕ್ಕೆ ಸಲ್ಲುತ್ತದೆ.

ಇದೀಗ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಂದು ಸಾರಿ ಕೇಳಿದ ಕೂಡಲೇ ಬಂಗಾರದ ಮನುಷ್ಯ ನೆನಪಾಗೋ ಸಿನಿಮಾ ಟೈಟಲ್ ಕೈಗೆತ್ತಿಕೊಂಡಿದ್ದಾರೆ. ಇದು ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ ತಂಗಿಯಾಗಿ ಜೋಡಿಯಾಗ್ತಿರೋ ಸಿನಿಮಾ. ಚಿತ್ರದ ಟೈಟಲ್ 'ಬಂಗಾರದ ವಂಶ'. [ಶಿವಣ್ಣನಿಗೆ ತಂಗಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಗಿಫ್ಟ್]

Shivanna, Radhika Kumaraswamy

ಆ ಟೈಟಲ್ ಕೇಳೀನೇ ಎಂಥವರೂ ಒಂದು ಕ್ಷಣ ಥ್ರಿಲ್ಲಾಗ್ತಾರೆ. ಒಂದು ಅದ್ಭುತ ಟೈಟಲ್ಲನ್ನ ಓಂ ಸಾಯಿ ಪ್ರಕಾಶ್ ಇಟ್ಟಿದ್ದಾರೆ. ಶಿವಣ್ಣ-ರಾಧಿಕಾ ಅಣ್ಣ ತಂಗಿಯಾಗಿದ್ದ. ಅಣ್ಣ ತಂಗಿ, ತವರಿಗೆ ಬಾ ತಂಗಿ ಸಿನಿಮಾ ನೋಡಿದವರಿಗೆ ಈ ಟೈಟಲ್ ನ ಮೂಲಕ ಇನ್ನು ಹೇಗೆ ಅದ್ಭುತ ಅನ್ನಿಸೋ ಸಿನಿಮಾ ಕೊಡ್ತಾರೆ ಅನ್ನೋ ನಿರೀಕ್ಷೆ ಮೂಡಿದೆ.

ಅಣ್ಣ ತಂಗಿ ಸೆಂಟಿಮೆಂಟ್ ಸಿನಿಮಾಗಳ ಸರದಾರ ಸಾಯಿಪ್ರಕಾಶ್ ಒಂದು ಅದ್ಭುತ ಕಥೆ ಹೆಣೆದಿದ್ದಾರೆ. ಹಿಂದಿನ ಕಥೆಗಳಿಗಿಂತ ಇದು ಸ್ವಲ್ಪ ಮಾಡರ್ನ್ ಕಥೆಯಾಗಿದ್ದು ಇಲ್ಲಿ ಶಿವಣ್ಣನನ್ನೂ ಒಬ್ಬ ಶ್ರೀಮಂತ ವ್ಯಕ್ತಿಯನ್ನಾಗಿ ತೋರಿಸ್ತಾರಂತೆ ಅನ್ನೋ ಗುಸು ಗುಸು ಗಾಂಧಿನಗರದಲ್ಲಿದೆ.

ಇನ್ನು ಶಿವಣ್ಣ-ರಾಧಿಕಾ ಜೋಡಿಯ ಅಣ್ಣ ತಂಗಿ ಸಿನಿಮಾ ಆಗಿರೋದ್ರಿಂದ ಅದನ್ನ ನೋಡೋದಕ್ಕೇನೇ ದೊಡ್ಡ ಫ್ಯಾಮಿಲಿ ಪ್ರೇಕ್ಷಕ ವರ್ಗವಿದೆ. ಆದರೆ ಸದ್ಯದ ಸುದ್ದಿ ಅಂದ್ರೆ ಫೆಬ್ರವರಿಯಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಚುನಾವಣೆಯ ಕಾರಣದಿಂದ ಮೂರು ತಿಂಗಳು ಮುಂದೆ ಹೋಗಿದೆ. (ಒನ್ಇಂಡಿಯಾ ಕನ್ನಡ)

English summary
Hat Trick Hero, Century Star Shivrajkumar and Radhika Kumaraswamy lead new film with Om Sai Prakash tilted as Bangarada Vamsha. The shooting of the movie starts after the 16th Lok Sabha election in India.
Please Wait while comments are loading...