»   » ಒಂದು ವರ್ಷದಿಂದ ಕಾದ ಶಿವ ಫ್ಯಾನ್ಸ್ ಗೆ ತೀವ್ರ ನಿರಾಸೆ

ಒಂದು ವರ್ಷದಿಂದ ಕಾದ ಶಿವ ಫ್ಯಾನ್ಸ್ ಗೆ ತೀವ್ರ ನಿರಾಸೆ

Posted By:
Subscribe to Filmibeat Kannada

ವಿಭಿನ್ನ ಪೋಸ್ಟರ್ ಹಾಗೂ ಗೆಟಪ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 'ಶಿವ' ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಜುಲೈ 27ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಬೇಕಿತ್ತು.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ಕಾತುರದಿಂದ ಎದುರು ನೋಡುತ್ತಿದ್ದರು. ಆದರೆ ಚಿತ್ರ ಥಿಯೇಟರ್ ಗಳಿಗೆ ಬರುವುದು ಎರಡರಿಂದ ನಾಲ್ಕು ವಾರ ತಡವಾಗುತ್ತದೆ ಎನ್ನುತ್ತವೆ ಗಾಂಧಿನಗರ ಮೂಲಗಳು. 'ಶಿವ' ಚಿತ್ರ ಶಿವಣ್ಣ ಅಭಿನಯದ 101 ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಕೆ ಪಿ ಶ್ರೀಕಾಂತ್ ನಿರ್ಮಾಣದ 'ಶಿವ' ಚಿತ್ರ ಬಹುಶಃ ಆಗಸ್ಟ್ 10ಕ್ಕೆ ತೆರೆ ಅಲಂಕರಿಸಬಹುದು. ಶಿವಣ್ಣ ಪಾಲಿಗೆ ವರಮಹಾಲಕ್ಷ್ಮಿ ಹಬ್ಬ ಲಕ್ಕಿ ಎಂದೇ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಣ್ಣ ಅಭಿಮಾನಿಗಳು ಚಿತ್ರವನ್ನು ಬಹಳ ಕಾತುರದಿಂದ ಎದುರು ನೋಡುತ್ತಿದ್ದರು. ಈಗ ಚಿತ್ರ ಬಿಡುಗಡೆಯನ್ನು ಮುಂದೂಡಿರುವ ಕಾರಣ ಅವರಿಗೆಲ್ಲಾ ನಿರಾಸೆ ತಪ್ಪಿದ್ದಲ್ಲ.

ಶಿವಣ್ಣನ 100ನೇ ಚಿತ್ರ 'ಜೋಗಯ್ಯ' ಚಿತ್ರಕ್ಕೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರ ಒಂದು ವಾರ ತಡವಾಗಿ ತೆರೆಗೆ ಬಂತು. ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ.

'ಶಿವ' ಚಿತ್ರದ ಎರಡು ಟ್ರೇಲರ್ ಗಳು ಈಗಾಗಲೆ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಮೂಡಿಸಿವೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೂ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದಿತ್ತು.

ಈ ಎಲ್ಲಾ ಕಾರಣಗಳಿಗಾಗಿ 'ಶಿವ' ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಆದರೆ ಚಿತ್ರ ಬಿಡುಗಡೆ ಮುಂದೂಡಲು ಕಾರಣ ಏನು ಎಂಬುದು ಇನ್ನೂ ಗೊತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಸಭೆ ಕರೆದು ಶಿವಣ್ಣ ಅಭಿಮಾನಿಗಳಿಗೆ ವಸ್ತುಸ್ಥಿತಿಯನ್ನು ವಿವರವಾಗಿ ತಿಳಿಸಲಿದ್ದಾರಂತೆ.

'ಜೋಗಯ್ಯ' ಚಿತ್ರದ ಬಳಿಕ ಶಿವಣ್ಣ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಿದ್ದಾರೆ. 'ಶಿವ' ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದವರಿಗೆ ಈ ಬಾರಿ ಸಖತ್ ನಿರಾಸೆಯಾಗಿದೆ. (ಒನ್ ಇಂಡಿಯಾ ಕನ್ನಡ)

English summary
Hat Trick Hero Shivrajkumar's much expected Kannada film Shiva release postponed. Om Prakash Rao directed movie suppose to release on 27th July, Vara Mahalakshmi festival.
Please Wait while comments are loading...