»   » ರವಿಚಂದ್ರನ್ ಮಗನ 'ಸಾಹೇಬ' ಸಿನಿಮಾ ನೋಡಿದ ಶಿವಣ್ಣ ಎಷ್ಟು ಸ್ಟಾರ್ ಕೊಟ್ಟರು.?

ರವಿಚಂದ್ರನ್ ಮಗನ 'ಸಾಹೇಬ' ಸಿನಿಮಾ ನೋಡಿದ ಶಿವಣ್ಣ ಎಷ್ಟು ಸ್ಟಾರ್ ಕೊಟ್ಟರು.?

Posted By:
Subscribe to Filmibeat Kannada
Shivrajkumar Spoke About Ravichandran's Son Manoranjan's 'Saheba' Movie | Filmibeat Kannada

ಕನಸುಗಾರ ರವಿಚಂದ್ರನ್ ಪುತ್ರ ಮನೋರಂಜನ್ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಬಂದಿದ್ದಾರೆ. ಮನೋರಂಜನ್ ನಟನೆಯ 'ಸಾಹೇಬ' ಈಗಾಗಲೇ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈಗ ನಟ ಶಿವರಾಜ್ ಕುಮಾರ್ ಕೂಡ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಒಳ್ಳೆಯ ಗೆಳೆಯರು. ಹೀಗಿರುವಾಗ ಇತ್ತೀಚಿಗಷ್ಟೆ 'ಸಾಹೇಬ' ಸಿನಿಮಾವನ್ನು ಶಿವಣ್ಣ ನೋಡಿದ್ದರು. ರವಿಚಂದ್ರನ್ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಅವರ ಜೊತೆ ಸಿನಿಮಾವನ್ನು ಶಿವಣ್ಣ ವೀಕ್ಷಿಸಿದರು. ಸಿನಿಮಾ ನೋಡಿದ ಶಿವಣ್ಣ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಮುಂದೆ ಓದಿ... 

ವಿಭಿನ್ನ ಸಿನಿಮಾ

''ಒಬ್ಬ ಹೊಸ ಹೀರೋಗೆ ವಿಭಿನ್ನ ಸಿನಿಮಾ ಬೇಕಾಗುತ್ತದೆ. ನಾನು, ಅಪ್ಪು, ರವಿ ಸರ್ ಎಲ್ಲ ಕಾಲೇಜು ಸ್ಟೋರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದೆವು. ಆದರೆ ಒಂದು ವಿಭಿನ್ನ ಸಿನಿಮಾದ ಮೂಲಕ ಮನು ಚಿತ್ರರಂಗಕ್ಕೆ ಬಂದಿರುವುದನ್ನು ಮೆಚ್ಚಲೇಬೇಕು'' ಅಂತ ಶಿವರಾಜ್ ಕುಮಾರ್ ಹೇಳಿದ್ದಾರೆ.

ಒಳ್ಳೆಯ ಪ್ರಯತ್ನ

''ಇಂದಿನ ಜನರೇಶನ್ ಗೆ ತಕ್ಕಂತೆ ಸಿನಿಮಾ ಇದೆ. ಚಿತ್ರದ ಕಥೆ ಚೆನ್ನಾಗಿದೆ. ಒಳ್ಳೆಯ ಸಿನಿಮಾ... ನಿರ್ದೇಶಕ ಭರತ್ ಅವರದ್ದು ಒಳ್ಳೆಯ ಪ್ರಯತ್ನ. ಅದರ ಜೊತೆಗೆ ಇದು ತುಂಬ ರಿಸ್ಕಿ ಪ್ರಾಜೆಕ್ಟ್ ಆಗಿದೆ. ಈ ರೀತಿ ಯುವಕರು ಚಿತ್ರರಂಗಕ್ಕೆ ಬರಬೇಕು.'' - ಶಿವರಾಜ್ ಕುಮಾರ್, ನಟ

ಚಿತ್ರದಿಂದ ಕಲಿಯುವುದು ಇದೆ

''ಚಿತ್ರದ ಸೆಕೆಂಡ್ ಆಫ್ ನನಗೆ ಬಹಳ ಇಷ್ಟ ಆಯ್ತು. ಸಿನಿಮಾದಲ್ಲಿ ಒಂದು ಕಾವ್ಯದ ರೀತಿಯ ಒಳ್ಳೆಯ ಪ್ರೇಮ ಕಥೆ ಇದೆ. ಚಿತ್ರದಿಂದ ನೋಡಿ ಕಲಿಯುವುದು ಇದೆ. ಸಿನಿಮಾದ ಸಂಗೀತ ಮತ್ತು ಲಕ್ಷ್ಮಿ ಅವರ ನಟನೆ ಇಷ್ಟ ಆಯ್ತು'' - ಶಿವರಾಜ್ ಕುಮಾರ್, ನಟ

ಒಳ್ಳೆಯ ಭವಿ‍ಷ್ಯ ಇದೆ

''ಮನೋರಂಜನ್ ಒಬ್ಬ ನಟನ ಮಗ ಎನ್ನುವುದನ್ನು ಮರೆತು ಚಿತ್ರದ ಬಗ್ಗೆ ಫೋಕಸ್ ಮಾಡಿದ್ದಾರೆ. ಅವರ ಡ್ಯಾನ್ಸ್ ಚೆನ್ನಾಗಿದೆ. ಚಿತ್ರ ನೋಡುವಾಗ ರವಿಚಂದ್ರನ್ ಅವರನ್ನು ನೋಡಿದ ಹಾಗೆ ಆಗುತ್ತದೆ. ನೋಡುವುದಕ್ಕು ಚೆನ್ನಾಗಿದ್ದಾರೆ. ಅವರಿಗೆ ಒಳ್ಳೆಯ ಭವಿ‍ಷ್ಯ ಇದೆ.'' - ಶಿವರಾಜ್ ಕುಮಾರ್, ನಟ

ಮಗನ 'ಸಾಹೇಬ' ಸಿನಿಮಾ ನೋಡಿ ರವಿಚಂದ್ರನ್ ಕೊಟ್ಟ ರಿವ್ಯೂ ಹೀಗಿದೆ

ಸ್ಟಾರ್ ಎಷ್ಟು

ಶಿವಣ್ಣ 'ಸಾಹೇಬ' ಸಿನಿಮಾಗೆ ಎಷ್ಟು ಸ್ಟಾರ್ ಅಂತ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ಅವರ ಈ ಮಾತುಗಳಲ್ಲಿಯೇ ಚಿತ್ರ ಅವರಿಗೆ ಎಷ್ಟೊಂದು ಇಷ್ಟ ಆಗಿದೆ ಎಂಬುದು ತಿಳಿಯುತ್ತದೆ.

ಅಣ್ಣನ 'ಸಾಹೇಬ' ಸಿನಿಮಾ ನೋಡಿ ಕ್ರೇಜಿ ಸ್ಟಾರ್ ಪುತ್ರಿ ಹೀಗೆ ಹೇಳಿದ್ರು!

ರವಿಚಂದ್ರನ್ ರಿವ್ಯೂ

ನಟ ರವಿಚಂದ್ರನ್ ಮಗನ ಸಿನಿಮಾ ನೋಡಿ ''ಮನೋರಂಜನ್ ಒಂದು ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾನೆ. ಅವನ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಚಿತ್ರದಿಂದ ನನ್ನ ಮಗ ಈಶ್ವರಿ ಸಂಸ್ಥೆಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗುತ್ತಾನೆ ಎನ್ನುವ ನಂಬಿಕೆ ನನಗೆ ಬಂದಿದೆ'' ಅಂತ ಹೇಳಿದ್ದರು.

English summary
Actor Shivrajkumar spoke about Ravichandran's son Manoranjan's 'Saheba' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada