For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಮತ್ತೊಮ್ಮೆ ಸ್ವಾಮಿಯೇ ಶರಣಂ ಅಯ್ಯಪ್ಪ

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾಲೆ ಧರಿಸಿದ್ದಾರೆ. ಅವರು ಇಂದು (ಜ.21) ಸದಾಶಿವನಗರದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿ ಮಾಲೆಯನ್ನು ಧರಿಸಿದರು.

  ಅವರ ಜೊತೆಗೆ ಶಿವಣ್ಣ ಅವರ ಸಹೋದರ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ, ನಟ ರಘುರಾಂ ಅವರು ಮಾಲೆ ಧರಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಮಾತನಾಡುತ್ತಾ, "ನಾನು ಅಪ್ಪಾಜಿ ಅವರ ದಾರಿಯನ್ನು ಅನುಸರಿಸುತ್ತಿದ್ದೇನೆ. ಆತ್ಮತೃಪ್ತಿಗಾಗಿ ಹಾಗೂ ರಾಜ್ಯದ ಜನರ ಸಂತೋಷಕ್ಕಾಗಿ ಅಯ್ಯಪ್ಪಸ್ವಾಮಿ ದರ್ಶನ ಮಾಡುತ್ತಿದ್ದೇನೆ " ಎಂದರು.

  ಈ ಸಂದರ್ಭದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಲಕ್ಷ್ಮಿ ಚಿತ್ರದ ಬಗ್ಗೆಯೂ ಮಾತನಾಡಿದರು. ರಾಘವ ಲೋಕಿ ಅವರು ಉತ್ತಮ ಚಿತ್ರ ಕೊಟ್ಟಿದ್ದಾರೆ. ಈ ಚಿತ್ರದ ಭರ್ಜರಿ ಓಪನಿಂಗ್ ಪ್ರೇಕ್ಷಕರ ಅಭಿಮಾನವೇ ಕಾರಣ ಎಂದರು.

  ಒಟ್ಟು 24 ದಿನಗಳ ಕಾಲ ಶಿವಣ್ಣ ಹಾಗೂ ಅವರ ಗೆಳೆಯರು ಅಯ್ಯಪ್ಪಸ್ವಾಮಿ ವ್ರತಾಚರಣೆ ಮಾಡಲಿದ್ದಾರೆ. ಫೆಬ್ರವರಿ 14ರಂದು ಶಿವಣ್ಣ ಮತ್ತವರ ತಂಡ ಶಬರಿಮಲೆ ಯಾತ್ರೆಗೆ ಹೊರಡಲಿದೆ. ಕಳೆದ ಮೂರು, ನಾಲ್ಕು ವರ್ಷಗಳಿಂದ ಶಿವಣ್ಣ ತಪ್ಪದಂತೆ ಅಯ್ಯಪ್ಪ ಮಾಲೆ ಧರಿಸುತ್ತಾ ಬಂದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Sandalwood King Shivarajkumar has taken 'Maalai' for Sabarimala and it is well known the actor is going to visit the Lord Ayyappan temple to offer his prayers on 14th of February, 2013. In the past Shivarajakumar was going with his father Dr Rajakumar to Shabarimale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X