»   » ಆರಂಭದ ದಿನವೇ ಟ್ರೆಂಡ್ ಸೆಟ್ ಮಾಡಿದ 'ಪೈಲ್ವಾನ್'

ಆರಂಭದ ದಿನವೇ ಟ್ರೆಂಡ್ ಸೆಟ್ ಮಾಡಿದ 'ಪೈಲ್ವಾನ್'

Posted By:
Subscribe to Filmibeat Kannada
ಶೂಟಿಂಗ್ ಶುರುವಾಗಿದ್ದೇ ಪೈಲ್ವಾನ್ ತಂಡದಿಂದ ಬಂತು ಹೊಸ ಸುದ್ದಿ | Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ ಹಾಗೂ ಆಕಾಂಕ್ಷ ಹಾಗೂ ಕಬೀರ್ ದುಹಾನ್ ಸಿಂಗ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಚುನಾವಣೆಯ ದಿನವೇ ಚಿತ್ರೀಕರಣಕ್ಕಾಗಿ ಚೆನೈ ಪ್ರವಾಸ ಮಾಡಿದ ಸಿನಿಮಾ ತಂಡ ಚಿತ್ರೀಕರಣ ಶುರು ಮಾಡಿದ ದಿನವೇ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. ಹೌದು ಕಿಚ್ಚ ಸಿನಿಮಾಗೆ ಚಿತ್ರೀಕರಣದ ಆರಂಭದ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಹಾಗಾದ್ರೆ ಕಿಚ್ಚನ ಚಿತ್ರದ ಆರಂಭಕ್ಕೆ ಪ್ರೇಕ್ಷಕರ ಕೊಟ್ಟ ಅಭಿಪ್ರಾಯವೇನು? ಕನ್ನಡ ಸಿನಿಮಾದ ಅಭಿನಯದ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು? ಮತ್ತಷ್ಟು ಇಂಟ್ರೆಸ್ಟಿಂಗ್ ವಿಚಾರ ಪೈಲ್ವಾನ್ ಸಿನಿಮಾ ಬಗ್ಗೆ ಇಲ್ಲಿದೆ. ಮುಂದೆ ಓದಿ

ಪೈಲ್ವಾನ್ ಶೂಟಿಂಗ್ ನಲ್ಲಿ ಕಿಚ್ಚ

ಕಿಚ್ಚ ಸುದೀಪ್ ಇಂದಿನಿಂದ ಪೈಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಸಣ್ಣದೊಂದು ದೃಶ್ಯದಲ್ಲಿ ಸುದೀಪ್ ಇಂದು ಭಾಗಿ ಆಗಿರುವುದಾಗಿ ತಿಳಿಸಿದ್ದಾರೆ.

ಜನ್ಮಭೂಮಿಯಲ್ಲಿ ಸುನೀಲ್ ಶೆಟ್ಟಿ

ಪೈಲ್ವಾನ್ ಸಿನಿಮಾದ ಚಿತ್ರೀಕರಣ ಶುರುವಾದ ತಕ್ಷಣವೇ ನಟ ಸುನೀಲ್ ಶೆಟ್ಟಿ ಚಿತ್ರದ ಬಗ್ಗೆ ಟ್ವಿಟ್ ಮಾಡಿದ್ದಾರೆ. "ಅಂತು ನನ್ನ ಜನ್ಮಭೂಮಿಯ ಚಿತ್ರರಂಗದಲ್ಲಿ ನಾನು ಮೊದಲ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದೇನೆ" ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಮೇಘಾಲಯದ ಮೋಡಗಳ ಮಧ್ಯೆ 'ಕಿಚ್ಚನ ಮಡದಿ'

ಸುನೀಲ್ ಶೆಟ್ಟಿಗೆ ಸಹೋದರನಾದ ಸುದೀಪ್

ಸಿನಿಮಾದಲ್ಲಿ ಭಾಗಿ ಆಗುವುದರ ಬಗ್ಗೆ ಟ್ವಿಟ್ ಮಾಡಿರುವ ಸುನೀಲ್ ಶೆಟ್ಟಿ ತಮ್ಮ ಲಿಟಲ್ ಸಹೋದರ ಸುದೀಪ್ ಜೊತೆ ಕೆಲಸ ಮಾಡಲು ಕಾತುರನಾಗಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ.

ಆರಂಭದ ದಿನವೇ ಟ್ರೆಂಡ್ ಸೆಟ್ ಮಾಡಿದ ಪೈಲ್ವಾನ್

ಪೈಲ್ವಾನ್ ಸಿನಿಮಾದ ಬಗ್ಗೆ ಆರಂಭದಿಂದಲೂ ಸಾಕಷ್ಟು ಕುತೂಹಲಗಳಿವೆ. ಅದರಂತೆಯೇ ಇಂದು ಚಿತ್ರೀಕರಣ ಆರಂಭ ಆದಾಗಲೇ ಟ್ವಿಟ್ಟರ್ ನಲ್ಲಿ ಪೈಲ್ವಾನ್ ಟ್ರೆಂಡ್ ಸೆಟ್ ಮಾಡಿರುವುದು ಖುಷಿಯ ವಿಚಾರ.

English summary
The shooting of Kannada film Pailwan has begun today. Sunil Shetty and Sudeep have tweeted about the film Pailwan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X