»   » 'ಸಪೂರ ಕಟಿ' ಸುಂದರಿಯಾದ 'ಅನನ್ಯ ಟೀಚರ್'

'ಸಪೂರ ಕಟಿ' ಸುಂದರಿಯಾದ 'ಅನನ್ಯ ಟೀಚರ್'

Posted By:
Subscribe to Filmibeat Kannada

ಟೀಸರ್ ಹಾಗೂ ಹಾಡುಗಳ ಮೂಲಕ ಹೊಸ ಭರವಸೆ ಮೂಡಿಸಿರುವ 'ಆಪರೇಷನ್ ಅಲುಮೇಲಮ್ಮ' ಈಗ ಮತ್ತೊಂದು ಗಿಫ್ಟ್ ನೀಡುತ್ತಿದೆ. ಇಷ್ಟು ದಿನ ಕ್ಲಾಸ್ ಲುಕ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಶ್ರದ್ಧಾ ಶ್ರೀನಾಥ್ ಈಗ ಹಾಟ್ ಸುಂದರಿಯಾಗಿ ಪ್ರೇಕ್ಷಕರೆದುರು ಮಿಂಚಲಿದ್ದಾರೆ.

ಹೌದು, 'ಆಪರೇಷನ್ ಅಲಮೇಲಮ್ಮ ಚಿತ್ರದ ಪ್ರಮೋಷನಲ್ ಹಾಡೊಂದು ಸಿದ್ಧವಾಗುತ್ತಿದ್ದು, ಈ ಹಾಡಿನಲ್ಲಿ ನಟಿ ಶ್ರದ್ಧಾ ಗ್ಲಾಮರಸ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಹೊಸ ಹೇರ್ ಸ್ಟೈಲ್, ಕಲರ್ ಫುಲ್ ಕಾಸ್ಟ್ಯೂಮ್ಸ್ ನಲ್ಲಿ ಅನನ್ಯ ಟೀಚರ್ ಕುಣಿದು ಕುಪ್ಪಳಿಸಿದ್ದಾರೆ. ನಿರ್ದೇಶಕ ಸುನಿ ಗೀತರಚನೆ ಮಾಡಿರುವ ಈ ಹಾಡು, ಐಪಿಎಲ್ ಕ್ರಿಕೆಟ್ ಟೂರ್ನಿ ಮುಗಿದ ನಂತರ ಈ ಹಾಡು ಬಿಡುಗಡೆಯಾಗುತ್ತಿದೆ.

Shraddha Srinath New Look For Promotional song

ಅಂದ್ಹಾಗೆ, 'ಆಪರೇಷನ್ ಅಲುಮೇಲಮ್ಮ' ಚಿತ್ರದಲ್ಲಿ ಶ್ರದ್ಧಾ ಅನನ್ಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾಗೆ ಜೋಡಿಯಾಗಿ ಆರ್ ಜೆ ನೇತ್ರಾ ಅವರ ಸಹೋದರ 'ರಿಷಿ' ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕಂಪ್ಲೀಟ್ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಚಿತ್ರತಂಡ, ಮುಂದಿನ ತಿಂಗಳು ತೆರೆಮೇಲೆ ಅಪ್ಪಳಿಸಲಿದೆ.

English summary
Shraddha Srinath Movie goers can see her glamourous avatar in the promotional song, shot for Operational Alamelamma, to be released after the IPL mania dies down.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada