»   » ಶ್ರದ್ಧಾ ಶ್ರೀನಾಥ್ ಪ್ರೀತಿಯ ಗುಟ್ಟು ಈಗ ರಟ್ಟು

ಶ್ರದ್ಧಾ ಶ್ರೀನಾಥ್ ಪ್ರೀತಿಯ ಗುಟ್ಟು ಈಗ ರಟ್ಟು

Posted By:
Subscribe to Filmibeat Kannada
ಶ್ರದ್ಧಾ ಶ್ರೀನಾಥ್ ಪ್ರೀತಿಯ ಗುಟ್ಟು ಈಗ ರಟ್ಟು | Filmibeat Kannada

'ಯು ಟರ್ನ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರದ್ಧಾ ಶ್ರೀನಾಥ್, ಮೂಗುತಿ ಸುಂದರಿಯ ಮೊದಲ ನೋಟಕ್ಕೆ ಕನ್ನಡ ಸಿನಿಮಾರಂಗದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಶಾರ್ಟ್ ಹೇರ್ ಸ್ಟೈಲ್ ಹಾಗೂ ಶ್ರದ್ಧಾ ಧ್ವನಿ ಕನ್ನಡ ಸಿನಿಪ್ರಿಯರನ್ನ ಮೋಡಿ ಮಾಡುವುದಕ್ಕೆ ಹೆಚ್ಚೆನೂ ಸಮಯ ತೊಗೆದುಕೊಳ್ಳಲಿಲ್ಲ.

ನಂತರ ಶ್ರದ್ಧಾ ಶ್ರೀನಾಥ್ ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದರು, ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಹೆಸರು ಮಾಡಲು ಶುರು ಮಾಡಿದರು. ನಟಿಯರು ಸಿನಿಮಾಗಳಲ್ಲಿ ಬ್ಯುಸಿ ಆದ ನಂತರ ಪ್ರೇಕ್ಷಕರಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಬಾಯ್ ಫ್ರೆಂಡ್ ಯಾರು? ಹಾಗೂ ಮದುವೆ ಯಾವಾಗ ಆಗುತ್ತೆ ಅನ್ನುವುದು.

ಕನ್ನಡ ಸಿನಿಮಾರಂಗಕ್ಕೆ ಸಿಕ್ಕಾಯ್ತು ಹೊಸ ಲೀಡರ್ !

ಈಗಾಗಲೇ ಶ್ರದ್ಧಾ ಅವರಿಗೆ ಸಾಕಷ್ಟು ಬಾರಿ ಈ ಪ್ರಶ್ನೆಯನ್ನ ಕೇಳಲಾಗಿತ್ತು, ಮದುವೆ ಯಾವಾಗ ಯಾರು ನಿಮ್ಮ ಬಾಯ್ ಫ್ರೆಂಡ್ ಎಂದು. ಎಲ್ಲಿಯೂ ಕೂಡ ಈ ಬಗ್ಗೆ ಮಾತನಾಡದ ಶ್ರದ್ಧಾ ಇತ್ತೀಚಿಗಷ್ಟೆ ತನ್ನ ಜೀವನದ ಗೆಳೆಯನ ಬಗ್ಗೆ ತುಟಿ ಬಿಚ್ಚಿ ಮಾತನಾಡಿದ್ದಾರೆ. ಹಾಗಾದರೆ ಮೂಗುತಿ ಸುಂದರಿಯ ಮನಸ್ಸು ಗೆದ್ದ ಚೋರ ಯಾರು? ತಾನು ಮದುವೆ ಆಗುವ ಹುಡುಗನ ಬಗ್ಗೆ ಶ್ರದ್ಧಾ ಮಾತನಾಡಿದ್ದು ಎಲ್ಲಿ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಪ್ರೀತಿಯಲ್ಲಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಪ್ರೀತಿ ಮಾಡುತ್ತಿದ್ದಾರಾ? ಅಥವಾ ಇನ್ನೂ ಸಿಂಗಲ್ ಆಗಿಯೇ ಇದ್ದಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಅದಕ್ಕೆ ಶ್ರದ್ಧಾ ಉತ್ತರ ನೀಡಿದ್ದು. ನನಗೂ ಒಬ್ಬ ಗೆಳೆಯ ಇದ್ದಾನೆ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.

ರೋಹಿತ್ ಲವ್ಸ್ ಶ್ರದ್ಧಾ

ಶ್ರದ್ಧಾ ಶ್ರೀನಾಥ್ ಪ್ರೀತಿಸುತ್ತಿರುವ ಹುಡುಗನ ಹೆಸರು ರೋಹಿತ್ ಕೃಷ್ಣನ್ ಸಾಬು, ರೋಹಿತ್ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದು ಚೆನೈ ನಲ್ಲಿ ನೆಲಸಿದ್ದಾರೆ. ನನ್ನ ಬಾಯ್ ಫ್ರೆಂಡ್ ಹೆಸರು ರೋಹಿತ್ ಎಂದು ಶ್ರದ್ಧಾ ತಿಳಿಸಿದ್ದಾರೆ.

ಗುಟ್ಟು ಬಿಟ್ಟುಕೊಟ್ಟ ಶ್ರದ್ಧಾ

ನಟಿ ಶ್ರದ್ಧಾ ನಂಬರ್ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಬಾಗಿ ಆಗಿದ್ದರು. ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಹೇಳಿ ಎಂದು ಶಿವರಾಜ್ ಕುಮಾರ್ ಕೇಳಿದಾಗ, ಶ್ರದ್ಧಾ ತಮ್ಮ ಪ್ರೇಮಿಯ ಬಗ್ಗೆ ತಿಳಿಸಿದ್ದಾರೆ.

ಶ್ರದ್ಧಾ ಮದುವೆ ಬಗ್ಗೆ ಗಾಸಿಪ್

ನಟಿ ಶ್ರದ್ಧಾ ಶ್ರೀನಾಥ್ ಈಗಾಗಲೇ ಮದುವೆ ಆಗಿದ್ದಾರೆ. ಅಷ್ಟೇ ಅಲ್ಲದೆ ಒಂದು ಮಗು ಕೂಡ ಇದೆ ಎನ್ನುವ ಮಾತು ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಆದರೆ ಶ್ರದ್ಧಾ ಮಾತ್ರ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

ಬಾಲಿವುಡ್ ನಲ್ಲಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಟಿಗ್ಮಾಂಶು ದುಲಿಯಾ ನಿರ್ದೇಶನದ ಮಿಲನ್ ಟಾಕೀಸ್ ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ಗೆ ನಾಯಕಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಉತ್ತರ ಪ್ರದೇಶದಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ.

English summary
Kannada actress Shraddha Srinath said she had boy friend, his name is Rohit working as a photographer in Chennai. Shraddha Srinath spoke about on this no 1 yaari with shivanna program

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X