For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆಗೆ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್

  |
  Odeya Kannada Movie: ದರ್ಶನ್ ಜೊತೆಗೆ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್ | FILMIBEAT KANNADA

  ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಕನ್ನಡಕ್ಕಿಂತ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಈಕೆ ಈಗ ಡಿ ಬಾಸ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

  ದರ್ಶನ್ ಅಭಿನಯದ 'ಒಡೆಯ' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದ್ದು, ಅದರ ಸೆಟ್ ನಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ದರ್ಶನ್, ಶ್ರದ್ಧಾ ಶ್ರೀನಾಥ್ ಹಾಗೂ ಚಿತ್ರ ನಿರ್ಮಾಪಕ ಸಂದೇಶ ನಾಗರಾಜ್ ಫೋಟೋಗೆ ಪೋಸ್ ನೀಡಿದ್ದಾರೆ.

  ಒಡೆಯನಿಗೆ ಸಿಕ್ಕ ಒಡತಿ : ಡಿ ಬಾಸ್ ಜೊತೆ ಕೊಡಗಿನ ಯುವತಿ

  'ಒಡೆಯ' ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈ ವೇಳೆ ಚಿತ್ರತಂಡದ ಜೊತೆಗೆ ಶ್ರದ್ಧಾ ಕಾಣಿಸಿಕೊಂಡಿರುವುದು ಕುತೂಹಲ ಉಂಟು ಮಾಡಿದೆ. ಸಿನಿಮಾದ ವಿಶೇಷ ಹಾಡಿನಲ್ಲಿ ಅಥವಾ ಚಿತ್ರದ ವಿಶೇಷ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಾರ ಎನ್ನುವ ಕುತೂಹಲ ಮೂಡಿದೆ.

  ಯಾಕೆಂದರೆ, 'ಒಡೆಯ' ಸಿನಿಮಾಗೆ ಈಗಾಗಲೇ ನಾಯಕಿಯ ಆಯ್ಕೆಯಾಗಿದೆ. ಚಿತ್ರದಲ್ಲಿ ರಾಘವಿ ತಿಮ್ಮಯ್ಯ ಹೀರೋಯಿನ್ ಆಗಿದ್ದಾರೆ. ಶ್ರದ್ಧಾ ಹಾಗೆನಾದರೂ ಚಿತ್ರದ ವಿಶೇಷ ಹಾಡಿನಲ್ಲಿ ಅಥವಾ ಪಾತ್ರದಲ್ಲಿ ಕಾಣಿಸಿಕೊಂಡರೆ ಇದೇ ಮೊದಲ ಬಾರಿಗೆ ದರ್ಶನ್ ಜೊತೆಗೆ ತೆರೆ ಹಂಚಿಕೊಂಡ ಹಾಗೆ ಆಗುತ್ತದೆ.

  'ಒಡೆಯ' ಸಿನಿಮಾವನ್ನು ಎಂ ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಮಿಳಿನ 'ವೀರಂ' ಸಿನಿಮಾದ ರಿಮೇಕ್ ಆಗಿದೆ.

  English summary
  Actress Shraddha Srinath visits Challenging Star Darshan's 'Odeya' kannada movie shooting set. The movie is directed by MD Sridhar and producing by Sandesh Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X