For Quick Alerts
  ALLOW NOTIFICATIONS  
  For Daily Alerts

  ಮೆಗಾ ಸ್ಟಾರ್ ಚಿರಂಜೀವಿಗೆ ನಾಯಕಿಯಾದ ನಟಿ ಶ್ರದ್ಧಾ ಶ್ರೀನಾಥ್?

  |
  ಶ್ರದ್ದಾ ಮುಟ್ಟಿದ್ದೆಲ್ಲವೂ ಚಿನ್ನಾ..? ಬರುತ್ತಿದೆ ಬಂಪರ್ ಆಫರ್..!

  ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಟಾಲಿವುಡ್ ಚಿತ್ರರಂಗದ ಬ್ಯುಸಿಯಸ್ಟ್ ನಟಿ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿರುವ ಶ್ರದ್ಧಾಗೆ ಈಗ ಮತ್ತೊಂದು ಬಂಪರ್ ಆಫರ್ ಬಂದಿದೆಯಂತೆ.

  ಇತ್ತೀಚಿಗಷ್ಟೆ ರಿಲೀಸ್ ಆದ 'ಜರ್ಸಿ' ಸಿನಿಮಾ ಮೂಲಕ ಟಾಲಿವುಡ್ ಚಿತ್ರಪ್ರಿಯರ ಮನಗೆದ್ದಿದ್ದರು ಶ್ರದ್ಧಾ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಶ್ರದ್ಧಾಗೆ ಈಗ ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದಿದೆಯಂತೆ.

  'ಪೊಲೀಸ್ ಬೇಬಿ' ಹಾಡಿನ ವಿರುದ್ಧ ಸಿಡಿದೆದ್ದ ಶಿವಣ್ಣ ಫ್ಯಾನ್ಸ್

  ಚಿರಂಜೀವಿ ಸದ್ಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಚಿರು, ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ನಟಿ ಶ್ರದ್ಧಾ ಆಯ್ಕೆಯಾಗಿದ್ದಾರೆ. ಮುಂದೆ ಓದಿ..

  ಚಿರು ಜೊತೆ ಶ್ರದ್ಧಾ ರೋಮ್ಯಾನ್ಸ್

  ಚಿರು ಜೊತೆ ಶ್ರದ್ಧಾ ರೋಮ್ಯಾನ್ಸ್

  ಟಾಲಿವುಡ್ ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಗೆ ಅಭಿನಯಿಸುವ ಅವಕಾಶ ಸಿಕ್ಕಿದೆಯಂತೆ. ಈಗಾಗಲೆ ಶ್ರದ್ಧಾ ಅವರ ಜೊತೆ ಮಾತುಕತೆ ನಡೆಸುತ್ತಿದೆಯಂತೆ ಚಿತ್ರತಂಡ. ಚಿರಂಜೀವಿ ಸದ್ಯ 'ಸೈರಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಕೊರಟಾಲ ಶಿವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ 'ಯು ಟರ್ನ್' ಬೆಡಗಿ ಚಿತ್ರಕ್ಕೆ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲವಂತೆ.

  ತಮಿಳು ನಟ ವಿಶಾಲ್ ಗೆ ಜೋಡಿಯಾದ ನಟಿ ಶ್ರದ್ಧಾ ಶ್ರೀನಾಥ್

  ಚಿರು ಸಿನಿಮಾದಲ್ಲಿ ಶ್ರದ್ಧಾ ಎರಡನೆ ನಾಯಕಿ

  ಚಿರು ಸಿನಿಮಾದಲ್ಲಿ ಶ್ರದ್ಧಾ ಎರಡನೆ ನಾಯಕಿ

  ಚಿರಂಜೀವಿ ಸಿನಿಮಾದಲ್ಲಿ ಬಣ್ಣ ಹಚ್ಚಲು ಆಫರ್ ಪಡೆದಿರುವ ಶ್ರದ್ಧಾ, ಚಿತ್ರದಲ್ಲಿ ಎರಡನೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ನಾಯಕಿಯಾಗಿ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರ ಕಾಣಿಸಿಕೊಳ್ಳುತ್ತಿದ್ದಾರೆ. 'ಸೈರಾ' ಚಿತ್ರದಲ್ಲೂ ನಯನತಾರ ಚಿರಂಜೀವಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತದೆ ಜೋಡಿ ಹೊಸ ಸಿನಿಮಾದಲ್ಲೂ ಒಂದಾಗುತ್ತಿದೆ. ಎರಡನೆ ನಾಯಕಿ ಸ್ಥಾನಕ್ಕೆ ಶ್ರದ್ಧಾ ಅವರಿಗೆ ಆಫರ್ ಮಾಡಲಾಗಿದೆಯಂತೆ.

  'ಜರ್ಸಿ' ಸಕ್ಸಸ್ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಶ್ರೀನಾಥ್

  ತಮನ್ನಾ ಜಾಗಕ್ಕೆ ಶ್ರದ್ಧಾ

  ತಮನ್ನಾ ಜಾಗಕ್ಕೆ ಶ್ರದ್ಧಾ

  ಸದ್ಯ ಶ್ರದ್ಧಾ ಅವರಿಗೆ ಬಂದಿರುವ ಆಫರ್ ಟಾಲಿವುಟ್ ಖ್ಯಾತ ನಟಿ ತಮನ್ನಾ ಅವರು ಮಾಡಬೇಕಾಗಿತ್ತಂತೆ. ಆದ್ರೆ ತಮನ್ನಾ ಕಾರಣಾಂತರಗಳಿಂದ ಚಿತ್ರದಿಂದ ದೂರಸರಿದಿದ್ದಾರಂತೆ. ಆ ಜಾಗಕ್ಕೆ ನಟಿ ಶ್ರದ್ಧಾ ಅವರಿಗೆ ಮಣೆಹಾಕಿದ್ಯಂತೆ ಚಿತ್ರತಂಡ. ಆದ್ರೆ ಎರಡನೆ ನಾಯಕಿಯಾಗಿ ಬಣ್ಣ ಹಚ್ಚಬೇಕು ಎನ್ನುವ ಉದ್ದೇಶದಿಂದ ಶ್ರದ್ಧಾ ಒಪ್ಪಿಕೊಳ್ಳುತ್ತಾರೊ ಇಲ್ಲವೋ ಎನ್ನುವ ಅನುಮಾನ ಕೂಡ ಇದೆ.

  ಶ್ರದ್ಧಾ ಬಳಿ ಇರುವ ಸಿನಿಮಾಗಳು

  ಶ್ರದ್ಧಾ ಬಳಿ ಇರುವ ಸಿನಿಮಾಗಳು

  ಶ್ರದ್ಧಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಲ್ಲಿ 'ಜರ್ಸಿ' ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಶ್ರದ್ಧಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ತೆಲುಗಿನಲ್ಲಿ ಸದ್ಯ ಸಾಯಿ ಕುಮಾರ್ ಪುತ್ರ ನಾಯಕನಾಗಿ ಅಭಿನಯಿಸುತ್ತಿರುವ 'ಜೋಡಿ' ಚಿತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ತಮಿಳು ಸಿನಿಮಾಗಳಲ್ಲು ಬ್ಯುಸಿಯಾಗಿದ್ದಾರೆ. ಅಲ್ಲದೆ ಕನ್ನಡದ 'ರುಸ್ತುಂ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಎಲ್ಲಾ ಸಿನಿಮಾಗಳ ಜೊತೆ ಚಿರಂಜೀವಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಕಾದು ನೋಡಬೇಕು.

  English summary
  Kannada actress Shraddha Srinath will be heroine to the Mega Star Chiranjeevi. she is currently busy in tamil and telugu films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X