For Quick Alerts
  ALLOW NOTIFICATIONS  
  For Daily Alerts

  ಶ್ರಿಯಾ ಪತಿಗೆ ಕೊರೊನಾ ಲಕ್ಷಣ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು

  |

  ಖ್ಯಾತ ನಟಿ ಶ್ರಿಯಾ ಸರಣ್ ವಿದೇಶಿಗನನ್ನು ಮದುವೆಯಾಗಿ ಸ್ಪೇನ್‌ನಲ್ಲಿ ನೆಲೆಸಿರುವ ವಿಷಯ ಬಹುತೇಕರಿಗೆ ತಿಳಿದಿರುವುದೇ. ಹೊಸ ವಿಷಯವೆಂದರೆ ಶ್ರಿಯಾ ಪತಿಗೆ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿವೆಯಂತೆ.

  Shriya Saran kissed to her husband in Public | FILMIBEAT KANNADA

  ಶ್ರಿಯಾ ಸರಣ್ ಅವರು 2018 ರ ಮಾರ್ಚ್ ತಿಂಗಳಲ್ಲಿ ಆಂಡ್ರೆ ಕೋಶಿವ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್‌ನಲ್ಲಿಯೇ ನೆಲಸಿದ್ದರು.

  ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!

  ಶ್ರಿಯಾ ಪತಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಶ್ರಿಯಾ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಕೊರೊನಾ ಲಕ್ಷಗಳಿದ್ದರೂ ಪತಿ ಆಸ್ಪತ್ರೆಗೆ ದಾಖಲಾಗಿಲ್ಲ!

  ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!

  ಶ್ರಿಯಾ ಪತಿಗೆ ಕೊರೊನಾ ಲಕ್ಷಣಗಳಾದ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿವೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿಕೊಳ್ಳಲಾಗಿಲ್ಲ.

  ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು

  ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು

  ಆಂಡ್ರೆ ಅನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು, 'ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಹಾಗಾಗಿ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಿ'' ಎಂದು ಹೇಳಿ ಕಳುಹಿಸಿದ್ದಾರೆ.

  ವೈದ್ಯರ ಸಲಹೆ ಪಾಲಿಸಿದ ಶ್ರಿಯಾ ದಂಪತಿ

  ವೈದ್ಯರ ಸಲಹೆ ಪಾಲಿಸಿದ ಶ್ರಿಯಾ ದಂಪತಿ

  ವೈದ್ಯರ ಸಲಹೆ ಪಾಲಿಸಿದ ಶ್ರಿಯಾ ಮತ್ತು ಆಂಡ್ರೆ ಮನೆಗೆ ತೆರಳಿ ಸೆಲ್ಫ್ ಕ್ವಾರೆಂಟೈನ್‌ನಲ್ಲಿದ್ದಾರೆ. ಇಬ್ಬರೂ ಬೇರೆ-ಬೇರೆ ರೂಂ ಗಳಲ್ಲಿ ಮಲಗುತ್ತಾರಂತೆ. ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿದ್ದಾರಂತೆ. 'ಆಂಡ್ರೆ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ' ಎಂದು ಶ್ರಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

  ವೈರಲ್ ಆಗಿದೆ ನಟಿ ಶ್ರೀಯಾ ಶರಣ್ ಚುಂಬನದ ದೃಶ್ಯವೈರಲ್ ಆಗಿದೆ ನಟಿ ಶ್ರೀಯಾ ಶರಣ್ ಚುಂಬನದ ದೃಶ್ಯ

  ಪರಿಸ್ಥಿತಿಯ ತೀವ್ರತೆ ಅರ್ಥವಾಗಿದ್ದೇ ಆವಾಗ

  ಪರಿಸ್ಥಿತಿಯ ತೀವ್ರತೆ ಅರ್ಥವಾಗಿದ್ದೇ ಆವಾಗ

  ಮಾರ್ಚ್ 13 ರಂದು ಶ್ರಿಯಾ ಮತ್ತು ಆಂಡ್ರೆ ಅವರ ಎರಡನೇ ವಿವಾಹ ವಾರ್ಷಿಕೋತ್ಸವ ಇತ್ತಂತೆ. ಸಂಭ್ರಮದಿಂದ ಆಚರಿಸಲು ಇಬ್ಬರೂ ತಯಾರಾಗಿದ್ದರಂತೆ. ಅದಕ್ಕೆಂದು ಹೋಟೆಲ್ ಸಹ ಬುಕ್ ಮಾಡಿದ್ದರಂತೆ, ಆದರೆ ಅಷ್ಟರಲ್ಲೇ ಕೊರೊನಾ ವ್ಯಾಪಿಸಿದ ಕಾರಣ ಹೋಟೆಲ್‌ಗಳು ಬಂದ್ ಆಗಿವೆ. ಆಗಲೇ ಶ್ರಿಯಾ ಅವರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೆ.

  ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದ ಶ್ರಿಯಾ ಸರಣ್

  ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದ ಶ್ರಿಯಾ ಸರಣ್

  ಶ್ರಿಯಾ ಸರಣ್ ಹಾಗೂ ಆಂಡ್ರೆ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆಯ ನಂತರ ಶ್ರಿಯಾ ಸಿನಿಮಾದಿಂದ ಬಹುತೇಕ ದೂರವೇ ಉಳಿದಿದ್ದಾರೆ. ಕಳೆದ ವರ್ಷ ತೆಲುಗು ಸಿನಿಮಾವೊಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರಷ್ಟೆ. ಪತಿ ಆಂಡ್ರೆ ದೊಡ್ಡ ಬ್ಯುಸಿನೆಸ್‌ ಮನ್ ಜೊತೆಗೆ ಟೆನ್ನಿಸ್ ಆಟಗಾರ ಸಹ ಆಗಿದ್ದಾರೆ.

  English summary
  Spain resident Actress Shriya Saran's husband Andre has COVID 19 symptoms. Doctors said them to be in home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X