»   » ಪ್ರೇಮ 'ಚಂದ್ರ'ಮ ಕೈಗೆ ಸಿಗುವಳೇ?

ಪ್ರೇಮ 'ಚಂದ್ರ'ಮ ಕೈಗೆ ಸಿಗುವಳೇ?

Posted By:
Subscribe to Filmibeat Kannada

ಬಹುಭಾಷಾ ನಟಿ ಶ್ರಿಯಾ ಸರನ್ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ನಟಿಸುತ್ತಿರುವ ಚಿತ್ರ 'ಚಂದ್ರ'. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರವನ್ನು ರೂಪಾ ಅಯ್ಯರ್ ನಿರ್ದೇಶಿಸುತ್ತಿರುವುದು ನಿಮಗೆ ತಿಳಿದಿರುವ ವಿಚಾರ.

ಈ ಹಿಂದೆ ಶ್ರಿಯಾ ಸರನ್ , ಪುನೀತ್ ರಾಜಕುಮಾರ್ ಅಭಿನಯದ ಯಶಸ್ವಿ ಅರಸು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೀಗೆ ಬಂದು ಹಾಗೆ ಹೋಗಿದ್ದರು. ದೇಶದ ಕೆಲ ರಾಜ ಮನೆತನ ಮತ್ತು ಅವರ ಲೈಫ್ ಸ್ಟೈಲ್ ಬಗ್ಗೆ ಅಧ್ಯಯನ ನಡೆಸಿ ನಿರ್ದೇಶಕಿ ರೂಪಾ ಈ ಅಪರೂಪದ ಕಥಾ ಹಂದರವನ್ನು ಕೈಗೆತ್ತಿಗೊಂಡಿದ್ದಾರೆ.

ರಾಜ ಮನೆತನದ ವಂಶಸ್ಥರ ಕೊನೆ ಕುಡಿ ಜನಸಾಮಾನ್ಯರ ಜೊತೆ ಸಾಮಾನ್ಯ ಜೀವನ ನಡೆಸಲು ಒದ್ದಾಡುತ್ತಿರುತ್ತಾಳೆ. ಪೂರ್ವಿಕರಿಂದ ಸರಿಯಾಗಿ ಹೊಂದಾಣಿಕೆಯಾಗದ ಜೋಡಿ ಸಿಗದ ಸಂದರ್ಭದಲ್ಲಿ ರಾಜಕುಮಾರಿ ಸ್ಪುರಧ್ರೂಪಿ ಯುವಕನ ಜೊತೆ ಪ್ರೀತಿಗೆ ಬೀಳುತ್ತಾಳೆ. ಇದೇ ಸಂದರ್ಭದಲ್ಲಿ ರಾಜಮನೆತನವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ.

ಹೀಗೆ ಸಾಗುವ ಅಪರೂಪವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ರೂಪಾ ಅಯ್ಯರ್ ಬೆಂಗಳೂರು, ಮೈಸೂರು, ಕೊಡಗು, ರಾಜಸ್ಥಾನದ ಕಣ್ಮನ ಸೆಳೆಯುವ ಲೋಕೇಶನ್ ನಲ್ಲಿ ಫುಲ್ ಜೋಸ್ ನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಅಮೆರಿಕಾದಲ್ಲಿ ಕೂಡಾ ಶೂಟಿಂಗ್ ನಡೆಯಲಿದೆ.

ಬಹು ಕೋಟಿ ವೆಚ್ಚದ ಈ ಚಿತ್ರವನ್ನು ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಮತ್ತು ನರಸಿಂಹ ಆರ್ಟ್ಸ್ ಜಂಟಿಯಾಗಿ ಕೈಗೆತ್ತಿಕೊಂಡಿದೆ. ಗಣೇಶ್ ವೆಂಕಟರಾಮನ್, ವಿಜಯ್ ಕುಮಾರ್, ಶ್ರೀನಾಥ್, ಸುಕನ್ಯಾ, ಗಿರೀಶ್ ಕಾರ್ನಾಡ್, ಸುಮಿತ್ರಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ಹಾಟ್ ಹಾಟ್ ದೃಶ್ಯಗಳು ಪಡ್ಡೆಗಳಿಗೆ ಉತ್ತಮ ಆಹಾರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಶ್ರಿಯಾ ಸರನ್, ಪ್ರೇಮ್

ಬ್ಲ್ಯಾಕ್ ಅಂಡ್ ಬ್ಲ್ಯಾಕ್ ನಲ್ಲಿ ಮಿಂಚುತ್ತಿರುವ ನಾಯಕ ಪ್ರೇಮ್ ಮತ್ತು ನಾಯಕಿ ಶ್ರಿಯಾ ಸರನ್ ಅವರ ಸರಸ ಸನ್ನಿವೇಶದ ದೃಶ್ಯ ಚಿತ್ರದ ಪ್ರಮುಖ ಆಕರ್ಷಣೆ.

ರಮ್ಯಾ ಕೈಬಿಟ್ಟು ಶ್ರಿಯಾ ಸರನ್ ಆಯ್ಕೆ ಮಾಡಿದ ನಿರ್ದೇಶಕಿ

ಮೊದಲು ಶ್ರಿಯಾ ಸರನ್ ಪಾತ್ರಕ್ಕೆ ರಮ್ಯಾ ಆಯ್ಕೆ ಮಾಡಿಕೊಂಡಿದ್ದ ನಿರ್ದೇಶಕಿ ರೂಪಾ ಅಯ್ಯರ್ ನಂತರ ಆಕೆ ಸರಿಯಾಗಿ ಹೊಂದಾಣಿಕೆಯಾಗದ ಕಾರಣ ರಮ್ಯಾರನ್ನು ಕೈಬಿಟ್ಟರು.

ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಿದ ರೂಪಾ ಅಯ್ಯರ್

ದಿಯಾ ಮಿರ್ಜಾ, ಅಮಲಾ ಪಾಲ್, ಐಂದ್ರಿತಾ, ಅಮೃತಾ ರಾವ್ ಹೀಗೆ ನಾಯಕಿ ಸ್ಥಾನಕ್ಕಾಗಿ ಹುಡುಕಾಟ ನಡೆಸಿ ಕೊನೆಗೆ ಶ್ರಿಯಾ ಸರನ್ ಅವರನ್ನು ಆಯ್ಕೆ ಮಾಡಿಕೊಂಡರು. ಪಿ ಕೆ ಎಚ್ ದಾಸ್ ಚಿತ್ರದ ಛಾಯಾಗ್ರಾಹಕರು, ಗೌತಮ್ ಶ್ರೀವಾಸ್ತವ್ ಸಂಗೀತ ನೀಡಿದ್ದಾರೆ.

ಕನ್ನಡದಲ್ಲಿ ನಟಿಸಬೇಕೆನ್ನುವುದು ನನ್ನ ಬಹುದಿನದ ಕನಸು

ಈ ಹಿಂದೆಯೂ ಬಹಳಷ್ಟು ಬಾರಿ ಕನ್ನಡ ಚಿತ್ರದಲ್ಲಿ ನಟಿಸ ಬೇಕೆನ್ನುವ ಆಸೆಯಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಇಷ್ಟು ದಿನ ನಟಿಸಲು ಆಗಲಿಲ್ಲ. ಕನ್ನಡದಲ್ಲಿ ನಟಿಸ ಬೇಕೆನ್ನುವುದು ನನ್ನ ಬಹುದಿನದ ಕನಸು ಎಂದಿದ್ದಾರೆ ನಾಯಕಿ ಶ್ರಿಯಾ ಸರನ್ .

ಈ ಚಿತ್ರದಿಂದಾದರೂ ನಾಯಕನಿಗೆ ಯಶಸ್ಸು ಸಿಗುವುದೇ?

ಯಶಸ್ಸು ಮರೀಚಿಕೆಯಂತಾಗಿರುವ ನಾಯಕ ನೆನಪಿರಲಿ ಪ್ರೇಮ್ ಕುಮಾರ್ ಗೆ ಈ ಚಿತ್ರ ನೆನಪಿನಲ್ಲಿ ಉಳಿಯುವಂತ ಬಾಕ್ಸಾಫೀಸ್ ಸಕ್ಸಸ್ ನೀಡುತ್ತೋ ಕಾದು ನೋಡಬೇಕು.

English summary
Upcoming period - fantasy Kannada and Tamil bilingual film Chandra is directed by Roopa Iyer. Featuring Shriya Saran, Prem Kumar and Girish Karnad in lead role. The film deals with last generation princes and her love story. Chandra is a joint production of India Classic Arts and Narasimha Arts.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada