For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ ನಿಮ್ಮ ಮುಂದೆ ಬರಲಿದ್ದಾಳೆ 'ಸಪ್ನೋಂಕಿ ರಾಣಿ'

  By Suneetha
  |

  ಬಹುಮುಖ ಪ್ರತಿಭೆಯ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಇತ್ತೀಚೆಗೆ ಎಲ್ಲರ ಮನೆಮಾತಾಗಿದ್ದಾರೆ. ಅವರು ನಡೆಸಿಕೊಡುತ್ತಿರುವ, 'ಮಜಾ ಟಾಕೀಸ್' ಎಲ್ಲರ ಮನ ಗೆದ್ದಿದೆ.

  ಇದೀಗ ಸೃಜನ್ ಲೋಕೇಶ್ ಅಭಿನಯದ 'ಸಪ್ನೋಂಕಿ ರಾಣಿ' ಜುಲೈ 31ರಂದು ರಾಜ್ಯಾಂದ್ಯಂತ ತೆರೆ ಕಾಣುತ್ತಿದೆ. ಎ.ಆರ್.ಬಾಬು ಆಕ್ಷನ್-ಕಟ್ ಹೇಳಿರುವ 'ಸಪ್ನೋಂಕಿ ರಾಣಿ' ಚಿತ್ರದಲ್ಲಿ 'ಜಾಕ್ಸನ್', ಚಿತ್ರದ ನಾಯಕಿ ಐಶ್ವರ್ಯ ಸಿಂಧೋಗಿ ಎಂಬ ಮುದ್ದಾದ ಅರಗಿಣಿ ಸೃಜನ್ ಗೆ ರಾಣಿಯಾಗಿದ್ದಾರೆ.

  ಸನ್ ಶೈನ್ ಮೂವೀಸ್ ಅವರ ಚೊಚ್ಚಲ ಸಿನೆಮಾವಾದ ರೋಮ್ಯಾಂಟಿಕ್ ಚಿತ್ರ 'ಸಪ್ನೋಂಕಿ ರಾಣಿ'ಗೆ, ನಿರ್ದೆಶಕ ಎ.ಆರ್.ಬಾಬು ಅವರ ಮಗ ಶಾನ್ ಕಥೆ-ಚಿತ್ರಕಥೆ ಬರೆದಿದ್ದಾರೆ.

  ಎ.ಆರ್.ಬಾಬು ಹಾಗೂ ಸೃಜನ್ ಲೋಕೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಸಪ್ನೋಂಕಿ ರಾಣಿ' ಜುಲೈ 31 ರಂದು ಮೇನಕ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ. ಚಿತ್ರಕ್ಕೆ ಯೋಗರಾಜ ಭಟ್, ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ರವಿಕಿರಣ್, ಮುಂತಾದವರ ಸಾಹಿತ್ಯವಿದ್ದು ಹಾಡುಗಳು ಈಗಾಗಲೇ ಸಖತ್ ಹಿಟ್ ಆಗಿವೆ.

  Shrujan Lokesh's 'Sapno Ki Rani' releasing on July 31st

  ಚಿತ್ರದಲ್ಲಿ ಕಾಮಿಡಿಯನ್ ಚಿಕ್ಕಣ್ಣ, ಮಿತ್ರಾ ಮುಂತಾದವರಿರುವುದರಿಂದ ಕಾಮಿಡಿ ಪಂಚ್ ಡೈಲಾಗ್ ಗಳು ಜೊತೆಗೆ ಕಾಮಿಡಿ ಪ್ರೀಯರಿಗೆ ಸಖತ್ ಮನೋರಂಜನೆ ಗ್ಯಾರಂಟಿ. ಇನ್ನುಳಿದಂತೆ ಅವಿನಾಶ್, ಗಿರಿಜಾ ಲೋಕೇಶ್, ಶೋಭರಾಜ್, ಟೆನ್ನಿಸ್ ಕೃಷ್ಣ, ದಿಲೀಪ್, ಮುಂತಾದ ತಾರಾ ಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ಧರ್ಮ ವಿಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಒಟ್ನಲ್ಲಿ 'ಆನೆ ಪಟಾಕಿ' ಚಿತ್ರದಲ್ಲಿ ಅಷ್ಟಾಗಿ ಯಶಸ್ಸು ಕಾಣದೆ, 'ಮಜಾ ಟಾಕೀಸ್' ಮೂಲಕ ಎಲ್ಲರ ಮನೆ-ಮನಗಳನ್ನು ಗೆದ್ದಿರುವ ನಮ್ಮ ಸೃಜಾ ಅವರ ಬಹುನಿರೀಕ್ಷಿತ ಚಿತ್ರ 'ಸಪ್ನೋಂಕಿ ರಾಣಿ' ಸಿಲ್ವರ್ ಸ್ಕ್ರೀನ್ ನಲ್ಲಿ ಬ್ರೇಕ್ ಕೊಡಬಹುದೇ ಅಂತ ಚಿತ್ರ ತೆರೆ ಕಂಡ ಮೇಲೆ ನೋಡಬೇಕಿದೆ.

  English summary
  Kannada Movie 'Sapno Ki Rani' is all set to release on July 31st. 'Sapno Ki Rani' Movie features Kannada actor Shrujan Lokesh, Kannada actress Aishwarya. The movie is directed by A.R Babu.
  Thursday, July 30, 2015, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X