For Quick Alerts
  ALLOW NOTIFICATIONS  
  For Daily Alerts

  ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರುತಿ ಹರಿಹರನ್

  By Pavithra
  |

  ಕನ್ನಡ ಪ್ರತಿಭಾನ್ವಿತ ನಟಿಯರ ಸಾಲಿನಲ್ಲಿ ನಿಲ್ಲುವಂತಹ ನಟಿ ಶ್ರುತಿ ಹರಿಹರನ್. ಯಾವುದೇ ಪಾತ್ರಕ್ಕೂ ಜೀವ ತುಂಬುವ ಸಾಮರ್ಥ್ಯವನ್ನ ಕನ್ನಡ ಪ್ರತಿಭಾನ್ವಿತ ನಟಿಯರ ಸಾಲಿನಲ್ಲಿ ನಿಲ್ಲುವಂತಹ ನಟಿ ಶ್ರುತಿ ಹರಿಹರನ್. ಯಾವುದೇ ಪಾತ್ರಕ್ಕೂ ಜೀವ ತುಂಬುವ ಸಾಮರ್ಥ್ಯವನ್ನ ಹೊಂದಿದ್ದಾರೆ ಶ್ರುತಿ. ಇವರು ಕೆಲವು ದಿನಗಳಿಂದ ಎರಡು ವಿಚಾರಗಳಿಗೆ ಬಾರಿ ಸುದ್ದಿ ಮಾಡಿತ್ತಿದ್ದಾರೆ. ಒಂದು ಅದ್ಬುತ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಮತ್ತೊಂದು ವಿಚಾರ ಎಂದರೆ ಸಿನಿಮಾರಂಗದಲ್ಲಿ ಆಗುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ.

  ಶ್ರುತಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು ಎಷ್ಟರ ಮಟ್ಟಿಗೆ ಸುದ್ದಿ ಆಯಿತು ಅಂದರೆ ಯಾರೂ ಕೂಡ ಅಷ್ಟರ ಮಟ್ಟಿಗೆ ಇದು ಸುದ್ದಿ ಆಗುತ್ತೆ ಎನ್ನುವ ಆಲೋಚನೆ ಕೂಡ ಮಾಡಿರಲಿಲ್ಲ. ಆ ಮಟ್ಟದಲ್ಲಿ ಶ್ರುತಿಸುದ್ದಿ ಆಗಿಬಿಟ್ಟರು. ಒಂದಿಷ್ಟು ಜನ ಈಗ್ಯಾಕೆ ಈ ವಿಚಾರ ಬೇಕಿತ್ತು ಅಂದರೆ, ಮತ್ತೆ ಕೆಲವರು ಒಳ್ಳೆ ಕೆಲಸ ಮಾಡಿದರು ಅಂತ ಬೆನ್ನು ತಟ್ಟಿದ್ದರು. ಆ ಸುದ್ದಿಯ ಹಿಂದೆಯೇ ಶ್ರುತಿ ಅವರ ಮದುವೆ ಆಗಿ ಹೋಗಿದೆ ಎನ್ನುವ ಸುದ್ದಿ ಹೇಳಿ ಬಂತು.

  ಆದರೆ ಶ್ರುತಿ ಮಾತ್ರ ನಾನು ಮದುವೆ ಆಗಿಲ್ಲ. ಗುಟ್ಟಾಗಿ ಮದುವೆ ಆಗುವ ಅವಶ್ಯಕತೆ ನನಗಿಲ್ಲ. ಎಲ್ಲರಿಗೂ ಹೇಳಿಯೇ ಮದುವೆ ಆಗುತ್ತೇನೆ ಎಂದು ಮಾಧ್ಯಮಗಳಿಗೂ ಉತ್ತರಿಸಿದ್ದರು. ಆದರೆ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಶ್ರುತಿ ಮದುವೆ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಹಾಗಾದರೆ ಶ್ರುತಿ ಮದುವೆ ಬಗ್ಗೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ಮದುವೆ ಬಗ್ಗೆ ಶ್ರುತಿ ಹರಿಹರನ್ ಮಾತು

  ಮದುವೆ ಬಗ್ಗೆ ಶ್ರುತಿ ಹರಿಹರನ್ ಮಾತು

  ನಟಿ ಶ್ರುತಿ ಹರಿಹರನ್ ಇದೇ ಮೊದಲ ಬಾರಿ ಮಾಧ್ಯಮದ ಮುಂದೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಶ್ರುತಿ ಮದುವೆ ಬಗ್ಗೆ ಮಾತನಾಡಿದ್ದು ನಾನು ಈಗಾಗಲೇ ಮನಸ್ಸಿನಲ್ಲೇ ಮದುವೆ ಆಗಿದ್ದೇನೆ ಎಂದಿದ್ದಾರೆ.

  ನಾನು ಸಿಂಗಲ್ ಅಲ್ಲ

  ನಾನು ಸಿಂಗಲ್ ಅಲ್ಲ

  ಮದುವೆ ಬಗ್ಗೆ ಮಾತನಾಡುತ್ತಾ ನಾನು ಎಂದಿಗೂ ಸಿಂಗಲ್ ಅಂತ ಹೇಳಿಲ್ಲ. ನಾನು ಮನಸ್ಸಿನಲ್ಲೇ ಮದುವೆ ಆಗಿದ್ದೇನೆ. ಅಪ್ಪ ಅಮ್ಮನಿಗಾಗಿ ಈಗ ಮದುವೆ ಆಗಬೇಕು ಅಷ್ಟೇ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ ಶ್ರುತಿ ಹರಿಹರನ್.

  ರಾಮ್ ಕುಮಾರ್ ಶ್ರುತಿ ಮನಸ್ಸು ಕದ್ದಿರುವ ಹುಡುಗ

  ರಾಮ್ ಕುಮಾರ್ ಶ್ರುತಿ ಮನಸ್ಸು ಕದ್ದಿರುವ ಹುಡುಗ

  ಶ್ರುತಿ ಹರಿಹರನ್ ಅವರಿಗೆ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿರುವ ರಾಮ್ ಕುಮಾರ್ ಅವರೇ ಶ್ರುತಿ ಮನಸ್ಸು ಕದ್ದಿರುವ ಹುಡುಗ. ಸುಮಾರು ಏಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದು ಡ್ಯಾನ್ಸ್ ಕ್ಲಾಸ್ ಹೋಗುವಾಗಲೇ ಶ್ರುತಿ ಪ್ರೀತಿ ಮಾಡುತ್ತಿದ್ದರಂತೆ.

  ರಾಮ್ ಕುಮಾರ್ ಕಲರಿಪೈಟು ಆರ್ಟಿಸ್ಟ್

  ರಾಮ್ ಕುಮಾರ್ ಕಲರಿಪೈಟು ಆರ್ಟಿಸ್ಟ್

  ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವವರು. ಇಂದು ಶ್ರುತಿ ಈ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ರಾಮ್ ಕುಮಾರ್ ಅವರೇ ಕಾರಣವಂತೆ.

  ಅಧಿಕೃತ ಮದುವೆ ಯಾವಾಗ

  ಅಧಿಕೃತ ಮದುವೆ ಯಾವಾಗ

  ಮನಸ್ಸಿನಲ್ಲೇ ನಾನು ಮದುವೆ ಆಗಿರುವ ಹಾಗೆ ನಿರ್ಧಾರ ಮಾಡಿರುವೆ ಎಂದು ತಿಳಿಸಿರುವ ನಟಿ ಶ್ರುತಿ ಅಧಿಕೃತವಾಗಿ ಮದುವೆ ಆಗುವುದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು. ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶ್ರುತಿ ಹರಿಹರನ್ ಆ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳುವಂತೆ ಕಾಣುತ್ತಿಲ್ಲ.

  ಪ್ರಿಯಾ ಮಾತ್ರವಲ್ಲ.. ಮಲೆಯಾಳಂ ಹುಡುಗಿಯರು ಲಕ್ಕಿನೋ ಲಕ್ಕಿ!

  English summary
  Kannada actress Shruti Hariharan spoke in front of media about her marriage and love. Shruti Hariharan said I have been in love with RamKumar for seven years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X