»   » 'ಕರಿಯ ಆದರೂ ಮದುವೆ ಆಗ್ತೀನಿ' ಎಂದ ಶುಭಾ ಪೂಂಜಾ

'ಕರಿಯ ಆದರೂ ಮದುವೆ ಆಗ್ತೀನಿ' ಎಂದ ಶುಭಾ ಪೂಂಜಾ

Posted By:
Subscribe to Filmibeat Kannada
ಶುಭಾ ಪೂಂಜಾಗೆ ಕರಿಯ ಆದ್ರೂ ಒಳ್ಳೆ ಹುಡುಗನನ್ನ ಮದುವೆಯಾಗಬೇಕಂತೆ | Filmibeat Kannada

''ನಾನು ಈಗ ಪ್ರೀತಿಯಲ್ಲಿ ಬೀಳಬೇಕು... ನನಗೂ ಒಬ್ಬ ಗೆಳೆಯ ಬೇಕು..'' ಎಂದು ಬೆಳ್ಳಿತೆರೆ ಮೇಲೆ ಹಾಡಿ ಕುಣಿದಿದ್ದ ನಟಿ ಶುಭಾ ಪೂಂಜಾ ನಿಜ ಜೀವನದಲ್ಲಿ ಇದೀಗ ನನಗೂ ಒಬ್ಬ ಗೆಳೆಯ ಬೇಕು ಎನ್ನುತ್ತಿದ್ದಾರೆ.

ಸಿನಿಮಾ ನಾಯಕಿಯರು ಸಾಮಾನ್ಯವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಾಗೂ ಉದ್ಯಮದಲ್ಲಿರುವ ಗಣ್ಯರನ್ನ ಮದುವೆ ಆಗುವುದು ಕಾಮನ್. ಆದರೆ ಶುಭಾ ಎಲ್ಲರಿಗಿಂತಲೂ ಭಿನ್ನ ಎನ್ನುವುದು ಅವರ ಅಭಿರುಚಿಯಲ್ಲಿ ತಿಳಿದು ಬರುತ್ತಿದೆ.

ಶುಭಾ ಅಭಿನಯದ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಹಾಡಿರುವಂತೆ ಒಂದಿಷ್ಟು ಕ್ವಾಲಿಟಿ ಇರುವ ಹುಡುಗನನ್ನೇ ಮದುವೆ ಆಗುವುದು ಅಂತ ಹೇಳಿದ್ದಾರೆ. ಹಾಗಾದರೆ ಅವರಿಗೆ ಎಂತಹ ಹುಡುಗ ಬೇಕು..? ಆತನಲ್ಲಿ ಏನೆಲ್ಲಾ ಕ್ವಾಲಿಟಿ ಇರಬೇಕು? ಎನ್ನುವುದರ ಬಗ್ಗೆ ವಿವರ ಮುಂದಿದೆ ಓದಿ..

ಹಸಮಣೆ ಏರಲಿದ್ದಾರೆ ಶುಭಾಪೂಂಜಾ

'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಮುದ್ದಾದ ನಾಯಕಿ ಅಂತಾನೇ ಗುರುತಿಸಿಕೊಂಡಿರುವ ನಟಿ ಶುಭಾ ಪೂಂಜಾ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಮುದ್ದಾದ ನಾಯಕಿಗೆ ಮನಸ್ಸಿನಲ್ಲಿರುವ ಆ ರಾಜಕುಮಾರನ ಬಗ್ಗೆ ಹೇಳಿಕೊಂಡಿದ್ದಾರೆ.

ಒಳ್ಳೆ ಮನಸ್ಸಿನ ಹುಡುಗ ಬೇಕು

ಶುಭಾ ತನ್ನ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದು ಹುಡುಗ ಕಪ್ಪಗಿದ್ದರು ಓಕೆ, ಆದರೆ ಒಳ್ಳೆ ಮನಸ್ಸಿರ ಬೇಕು ಎಂದು ತಿಳಿಸಿದ್ದಾರೆ.

ಹಳ್ಳಿ ಹೈದನನ್ನು ಮದುವೆ ಆಗಲು ರೆಡಿ

ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವ ಶುಭಾ ಪೂಂಜಾ ಹಳ್ಳಿ ಹುಡುಗನ್ನ ಮದುವೆ ಆಗಲು ಸಿದ್ಧವಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಹಳ್ಳಿಯಲ್ಲಿ ಜೀವನ ಮಾಡಲು ಸಿದ್ಧ ಇರಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಹುಡುಗನಿಗೆ ಮಹಾತ್ವಾಕಾಂಕ್ಷೆಗಳು ಇರಬಾರದಂತೆ.

ಪ್ರಾಣಿಗಳನ್ನ ಪ್ರೀತಿ ಮಾಡಬೇಕು

ಈಗಾಗಲೇ ಸಾಕಷ್ಟು ಶ್ವಾನಗಳನ್ನು ಸಾಕಿರುವ ಅವರು ತಾವು ಕೈ ಹಿಡಿಯುವ ಹುಡುಗ ಕೂಡ ಪ್ರಾಣಿಗಳನ್ನು ಪ್ರೀತಿ ಮಾಡಬೇಕು ಎಂದು ಬಯಸಿದ್ದಾರೆ.

ಸಾಮಾನ್ಯ ಹುಡುಗ ಬೇಕು

ಸಿನಿಮಾಗಳಲ್ಲಿ ಮಾತ್ರವಲ್ಲದೆ ಶುಭಾ ನಿಜ ಜೀವನದಲ್ಲೂ ಎಲ್ಲರಿಗಿಂತಲೂ ವಿಭಿನ್ನ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಚಿತ್ರರಂಗದಲ್ಲಿರುವ ಹುಡುಗ ಬೇಡ, ಸಿಂಪಲ್ ಆಗಿ ಜೀವನ ಸಾಗಿಸುವ ಹುಡುಗ ಸಿಕ್ಕರೆ ಅದೇ ಖುಷಿ ಅನ್ನುವುದನ್ನ ಈ ಮೂಲಕ ತಿಳಿಸಿದ್ದಾರೆ.

English summary
Kannada Actress Shubha punja wants to marry, Shubha has said about which qualities she want in her boy friend. shubha poonja entered the cinema industry from Moggina Mannasu movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X