For Quick Alerts
  ALLOW NOTIFICATIONS  
  For Daily Alerts

  ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ?

  By Harshitha
  |

  ಇದನ್ನ ಶಾಕಿಂಗ್ ನ್ಯೂಸ್ ಅಂತ ಕಣ್ಣು ಬಾಯಿ ಬಿಡುತ್ತೀರೋ ಅಥವಾ ಸರ್ ಪ್ರೈಸ್ ಅಂತ ಬಾಯಿ ಮೇಲೆ ಬೆರಳಿಡುತ್ತೀರೋ ನಿಮಗೆ ಬಿಟ್ಟಿದ್ದು. ಒಟ್ನಲ್ಲಿ, ಇಂದು ಗಾಂಧಿನಗರದ ಅಂಗಳದಿಂದ ಬಂದಿರುವ ಬಿಸಿ ಬಿಸಿ ಸುದ್ದಿ ಅಂದ್ರೆ ಇದೇ ನೋಡಿ...

  ''ನಟಿ ಶುಭ ಪುಂಜ ಮತ್ತು ಗೀತ ಸಾಹಿತಿ ಕಮ್ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಮದುವೆ ಆಗಿದ್ದಾರೆ'' ಎಂಬ ಸುದ್ದಿ 'ಫೋಟೋ' ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  ಇದೇ ನೋಡಿ 'ಆ' ಫೋಟೋ

  ಇದೇ ನೋಡಿ 'ಆ' ಫೋಟೋ

  ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ 'ಬಿಸಿ ಬಿಸಿ ಬೆಣ್ಣೆ ದೋಸೆ'ಯಂತೆ ಸೇಲ್ ಆಗುತ್ತಿರುವ ವಿ.ನಾಗೇಂದ್ರ ಪ್ರಸಾದ್ ಮತ್ತು ನಟಿ ಶುಭ ಪುಂಜ ಮದುವೆ ಆಗಿದ್ದಾರೆ ಎನ್ನಲಾಗಿರುವ ಫೋಟೋ ಇದೇ ನೋಡಿ....

  ಇದು ಸತ್ಯವೋ, ಸುಳ್ಳೋ?

  ಇದು ಸತ್ಯವೋ, ಸುಳ್ಳೋ?

  ಗೀತಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹಾಗೂ ನಟಿ ಶುಭ ಪುಂಜ ಮದುವೆ ಆಗಿರುವುದು ನಿಜ. ಆದ್ರೆ, ಅದು ರೀಲ್ ನಲ್ಲಿ ಮಾತ್ರ. 100% ನಿಜ ಜೀವನದಲ್ಲಿ ಅಲ್ಲ.! [ವಿಜಯ್, ಶುಭಾ ಪೂಂಜಾ ಗೃಹಪ್ರವೇಶ]

  ಇದು 'ರೀಲ್' ಸುದ್ದಿ ಅಷ್ಟೆ.!

  ಇದು 'ರೀಲ್' ಸುದ್ದಿ ಅಷ್ಟೆ.!

  'ವಿ.ನಾಗೇಂದ್ರ ಪ್ರಸಾದ್-ಶುಭ ಪುಂಜ ಮದುವೆ ಆಗಿದ್ದಾರೆ' ಎಂಬ ಸುದ್ದಿ ಕೇಳಿದ ಕೂಡಲೆ ನಿಮಗೆಲ್ಲ ಹೇಗೆ ಶಾಕ್/ಸರ್ ಪ್ರೈಸ್ ಆಯ್ತೋ, ನಮಗೂ ಕೂಡ ಹಾಗೇ ಆಯ್ತು. ಈ ಬಗ್ಗೆ ಕನ್ ಫರ್ಮ್ ಮಾಡಿಕೊಳ್ಳೋಕೆ ಅಂತಲೇ ಶುಭ ಪುಂಜ ಗೆ ನಾವು ಫೋನ್ ಮಾಡಿದ್ವಿ. ಆಗಲೇ 'ಇದು ಅಪ್ಪಟ ರೀಲ್ ಸುದ್ದಿ' ಎಂಬ ಸಂಗತಿ ಬಯಲಾಗಿದ್ದು. [ಗೀತಸಾಹಿತಿ 'ವಿ ನಾಗೇಂದ್ರ ಪ್ರಸಾದ್' ಸಂದರ್ಶನ]

  ಶುಭ ಪುಂಜ ಏನಂದರು?

  ಶುಭ ಪುಂಜ ಏನಂದರು?

  ''ಇದು ಶೂಟಿಂಗ್ ನಡೆಯುತ್ತಿರುವಾಗ ಕ್ಲಿಕ್ ಆಗಿರುವ ಫೋಟೋ. ವಿ.ನಾಗೇಂದ್ರ ಪ್ರಸಾದ್ ಡೈರೆಕ್ಟ್ ಮಾಡುತ್ತಿರುವ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಅವರೂ ಕೂಡ ನನ್ನ ಜೊತೆ ಆಕ್ಟ್ ಮಾಡುತ್ತಿದ್ದಾರೆ. ಇವತ್ತು ಮದುವೆ ಸೀಕ್ಷೆನ್ಸ್ ಶೂಟಿಂಗ್ ಮಾಡುತ್ತಿದ್ವಿ. ಆಗ ಯಾರೋ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ'' ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಟಿ ಶುಭ ಪುಂಜ ಸ್ಪಷ್ಟಪಡಿಸಿದರು.

  ವಿ.ನಾಗೇಂದ್ರ ಪ್ರಸಾದ್ ಏನಂದರು?

  ವಿ.ನಾಗೇಂದ್ರ ಪ್ರಸಾದ್ ಏನಂದರು?

  ''ಶೂಟಿಂಗ್ ಸ್ಪಾಟ್ ನಲ್ಲಿ ಯಾರಿಗೂ ಫೋಟೋ ತೆಗೆಯುವ ಅವಕಾಶ ಇರಲಿಲ್ಲ. ಆದರೂ ಯಾರು ಹೀಗೆ ಫೋಟೋ ಕ್ಲಿಕ್ ಮಾಡಿದರೋ ಗೊತ್ತಾಗಲಿಲ್ಲ. ಫೇಸ್ ಬುಕ್ ನಲ್ಲಿ ಹಾಕಿ ಸುಮ್ಮನೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿದ್ದಾರೆ'' ಎನ್ನುತ್ತಾರೆ ವಿ.ನಾಗೇಂದ್ರ ಪ್ರಸಾದ್ ['ಗುರೂಜಿ' ಯಾದ ಸಾಹಿತಿ ವಿ.ನಾಗೇಂದ್ರ ಪ್ರಸಾದ್]

  ಶೂಟಿಂಗ್ ಅಷ್ಟೆ

  ಶೂಟಿಂಗ್ ಅಷ್ಟೆ

  ''ನಮ್ಮ ಸಿನಿಮಾದಲ್ಲಿ ನಡೆಯುವ ಮದುವೆ ಸನ್ನಿವೇಶ ಇದು ಅಷ್ಟೆ. ಇವತ್ತು ಬೆಳಗ್ಗೆ ತಾನೆ ಆ ಸನ್ನಿವೇಶದ ಚಿತ್ರೀಕರಣ ನಡೆಯಿತು'' ಅಂತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಕೂಡ ಕ್ಲಾರಿಫಿಕೇಷನ್ ನೀಡಿದರು.

  ಯಾವ ಸಿನಿಮಾ?

  ಯಾವ ಸಿನಿಮಾ?

  ಇನ್ನೂ ಹೆಸರಿಡದ ಚಿತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್ ಜೊತೆ ನಟಿ ಶುಭ ಪುಂಜ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ರವರೇ ಡೈರೆಕ್ಟರ್. ಸದ್ದಿಲ್ಲದೇ ಈ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ. ಇಂದು ಮದುವೆ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಆಗ ಶೂಟಿಂಗ್ ನೋಡುತ್ತಿದ್ದವರು ಫೋಟೋ ಕ್ಲಿಕ್ ಮಾಡಿ ಫೇಸ್ ಬುಕ್ ನಲ್ಲಿ 'ಗಾಸಿಪ್' ಹಬ್ಬಿಸಿದ್ದಾರೆ.

  ಶಾಕಿಂಗ್ ಸುದ್ದಿ ಕೊಟ್ಟವರು....

  ಶಾಕಿಂಗ್ ಸುದ್ದಿ ಕೊಟ್ಟವರು....

  ''ನವ ದಂಪತಿಗಳಿಗೆ ಒಳ್ಳೆಯದಾಗಲಿ. ಹ್ಯಾಪಿ ಮ್ಯಾರೀಡ್ ಲೈಫ್ ನಾಗೇಂದ್ರ ಪ್ರಸಾದ್ ಸರ್ ಮತ್ತು ಶುಭ ಪುಂಜ'' ಅಂತ ಹರಸುತ್ತಾ ಫೋಟೋ ಸಮೇತ 'ಕೌಶಿಕ್ ಹರ್ಷ' ಎಂಬುವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯ್ತು.

  English summary
  Kannada Actress Shubha Punja-Director cum Lyricist V.Nagendra Prasad's wedding pic goes viral in Social Media. Later both clarified that, The Picture was taken during the shooting of yet-to-be-titled film Directed by V.Nagendra Prasad in which Shubha Punja is playing the lead. Director V.Nagendra Prasad is also playing prominent role in the Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X