»   » ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ

ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ

Posted By:
Subscribe to Filmibeat Kannada

ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಟಾಲಿವುಡ್ ಗೆ ಹಾರುತ್ತಿರುವ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ದೀರಾ. ನಟನೆಯಲ್ಲಿ ಸಾಕಷ್ಟು ಅವಕಾಶಗಳು ಹರಿದುಬರುತ್ತಿದ್ದರೂ, ಸಿಂಪಲ್ ಹುಡುಗಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಹೌದು, ಇನ್ಮುಂದೆ ಶ್ವೇತಾ ಶ್ರೀವಾತ್ಸವ್ ಬರೀ ನಟಿ ಮಾತ್ರ ಅಲ್ಲ...ನಿರ್ದೇಶಕಿ ಕೂಡ. ಅದನ್ನ ಖುದ್ದು ಶ್ವೇತಾ ಶ್ರೀವಾತ್ಸವ್ 'ಫಿಲ್ಮಿಬೀಟ್ ಕನ್ನಡ'ಗೆ ಕನ್ಫರ್ಮ್ ಮಾಡಿದ್ದಾರೆ. ಬರುತ್ತಿರುವ ಅವಕಾಶಗಳ ಬಗ್ಗೆ ತುಂಬಾ ಚ್ಯೂಸಿಯಾಗಿರುವ ಸಿಂಪಲ್ ಕ್ವೀನ್, ತಾವೇ ಚಿತ್ರವನ್ನ ನಿರ್ದೇಶಿಸೋಕೆ ಮುಂದಾಗಿದ್ದಾರೆ. ಆ ಮೂಲಕ ತಮ್ಮ ಬಹುದಿನಗಳ ದೊಡ್ಡ ಕನಸನ್ನ ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ.

Shwetha Srivatsav1

ಈಗಾಗಲೇ ತಮ್ಮ ನಿರ್ದೇಶನದ ಚಿತ್ರಕ್ಕೆ ಪೂರ್ವಾಭಾವಿ ತಯಾರಿ ನಡೆಸುತ್ತಿರುವ ಶ್ವೇತಾ ಸ್ಕ್ರಿಪ್ಟಿಂಗ್ ವರ್ಕ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ನಿರ್ದೇಶನದ ಜೊತೆಗೆ ನಾಯಕಿಯಾಗಿಯೂ ಕಾಣಿಸಿಕೊಳ್ಳುವ ಶ್ವೇತಾ ಈ ಚಿತ್ರಕ್ಕೆ ಕಥೆ ಕೂಡ ಬರೆಯುತ್ತಿದ್ದಾರೆ. ಆ ಮೂಲಕ ಚಿತ್ರದಲ್ಲಿ ಟ್ರಿಪಲ್ ರೋಲ್ ಮಾಡುವ ಪ್ಲಾನ್ ಇವರದ್ದು. [ಸಿಂಪಲ್ ಹುಡುಗಿಗೆ ಇಷ್ಟವಾದ 'ವೇಶ್ಯೆ' ಪಾತ್ರ]

''ನಿರ್ದೇಶನ ಮಾಡುವುದು ನನ್ನ ಡ್ರೀಮ್. ಬಹಳ ದಿನಗಳಿಂದ ನನ್ನ ಮನಸ್ಸಲ್ಲಿ ಕಾಡ್ತಿದ್ದ ಕಥೆಯನ್ನೇ ಇಟ್ಟುಕೊಂಡು ಚಿತ್ರಕಥೆ ಮಾಡುತ್ತಿದ್ದೇನೆ. ನನ್ನನ್ನ ಇಲ್ಲಿಯವರೆಗೂ 'ಮಾತಿನ ಮಲ್ಲಿ' ಅಂತಲೇ ಗುರುತಿಸುತ್ತಿದ್ದಾರೆ. ಡೈಲಾಗ್ ಡೆಲಿವರಿ ಜೊತೆಗೆ ನನ್ನ ಇತರೆ ಸಾಮರ್ಥ್ಯವನ್ನ ಈ ಚಿತ್ರದ ಮೂಲಕ ತೆರೆಮೇಲೆ ತರ್ತ್ತೀನಿ, ಉತ್ತಮ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಶ್ವೇತಾ ಶ್ರೀವಾತ್ಸವ್ ಹೇಳಿದ್ರು.

Shwetha Srivatsav 2

ರೋಮ್ಯಾಂಟಿಕ್ ಮತ್ತು ಕಾಮಿಡಿ ಹೆಚ್ಚಾಗಿರುವ ಈ ಚಿತ್ರದ ಕೆಲಸ ಶುರುವಾಗಿರುವುದಕ್ಕೆ ಶ್ವೇತಾ ಸಖತ್ ಖುಷಿಯಲ್ಲಿದ್ರು. ತಮ್ಮ ಕಥೆಯ ಜೊತೆಗೆ ಮರ್ಡರ್ ಮಿಸ್ಟ್ರಿ ಸಿನಿಮಾವೊಂದನ್ನ ನಿರ್ದೇಶಿಸುವುದಕ್ಕೂ ಶ್ವೇತಾಗೆ ಆಫರ್ ಬಂದಿದೆ. [ಟಾಲಿವುಡ್ ಗೆ ಹಾರಿದ ಸಿಂಪಲ್ ಹುಡುಗಿ ಶ್ವೇತಾ]

ಆದ್ರೆ, ಮುಂದಿನ ವಾರ ಹೈದರಾಬಾದ್ ಗೆ ಹಾರುವುದರಿಂದ, ತೆಲುಗು ಸಿನಿಮಾ ಕಂಪ್ಲೀಟ್ ಆಗುವವರೆಗೂ ಶ್ವೇತಾ ನಟಿಯಾಗಿ ಬಿಜಿ. ಆಮೇಲೇನಿದ್ರೂ, ಡೈರೆಕ್ಟರ್ ಶ್ವೇತಾ ಸಮಯ. (ಫಿಲ್ಮಿಬೀಟ್ ಕನ್ನಡ)

English summary
Shwetha Srivatsav of Simpallag ond love story fame is all set to direct a movie. Its her long time dream to become director and now it has come true. Shwetha Srivatsav have already begun the pre-production work and will make an official annoucement soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada