'ಮುಖಾಮುಖಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದಲ್ಲಿ ಗುರುತಿಸಿಕೊಂಡವರು ನಟಿ ಶ್ವೇತಾ ಶ್ರೀವಾತ್ಸವ್. ಅಭಿನಯಿಸಿದ್ದು ಬೆರಳೆಣಿಕೆ ಚಿತ್ರದಲ್ಲಿ ಮಾತ್ರವಾದರೂ ಶ್ವೇತಾ ಅಭಿನಯವನ್ನ ಮೆಚ್ಚದ ಪ್ರೇಕ್ಷಕರಿಲ್ಲ. ಏಳು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿರುವ ಶ್ವೇತಾ ಬಾಳಲ್ಲಿ ಅಶ್ಮಿತಾ ಆಗಮನವಾಗಿದೆ.
ಐದು ತಿಂಗಳ ಹಿಂದೆಯಷ್ಟೇ ತಾಯಿ ಆಗಿರುವ ನಟಿ ಶ್ವೇತಾ ಶ್ರೀವಾತ್ಸವ್ ಮಗಳಿಗೆ ಹೆಸರಿಟ್ಟಿದ್ದಾರೆ. ಮುದ್ದಾಗಿರುವ ಐದು ತಿಂಗಳು ಕಂದಮ್ಮ ಇನ್ನು ಮುಂದೆ ಅಶ್ಮಿತಾ ಎಂದು ತಮ್ಮ ಖುಷಿ ವಿಚಾರವನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ ಶ್ವೇತಾ ಅವರ ಪತಿ ಅಮಿತ್ ಶ್ರೀವಾತ್ಸವ್.
ಅಶ್ಮಿತಾ ಹೆಸರನ್ನ ಅಮಿತ್ ಹಾಗೂ ಶ್ವೇತಾ ಹೆಸರಿನ ಪದಗಳನ್ನ ಜೋಡಿಸಿ ಮಾಡಲಾಗಿದೆ. ಹೊಸ ವರ್ಷದಂದು ಮಗಳ ಹೆಸರನ್ನ ಅಭಿಮಾನಿಗಳಿಗೆ ತಿಳಿಸಿರುವ ಶ್ವೇತಾ ಕೆಲವು ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
'ಕಿರುಗೂರಿನ ಗಯ್ಯಾಳಿಗಳು' ಚಿತ್ರದ ನಂತರ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿರುವ ಶ್ವೇತಾ ಶ್ರೀವಾತ್ಸವ್ ಸದ್ಯ ಮಗಳ ಆರೈಕೆ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್ ನಲ್ಲಿ ಶ್ವೇತಾ ಅಭಿನಯದ ಚಿತ್ರವೊಂದು ಅನೌನ್ಸ್ ಆಗಿದ್ದು ಬ್ರೇಕ್ ಮುಗಿದ ನಂತರ ಮತ್ತೆ ಚಿತ್ರಗಳಲ್ಲಿ ಅಭಿನಯಿಸುವ ನಿರೀಕ್ಷೆಯಲ್ಲಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.