For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನ 'ಹೋಪ್' ಮೂಲಕ ಬಂದ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್

  |

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದ ನಟಿ ಶ್ವೇತಾ ಶ್ರೀವಾತ್ಸವ್ ಇಂದು (ಸೆಪ್ಟಂಬರ್ 04) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಶ್ವೇತಾ ಮಗಳ ಆರೈಕೆ, ಫ್ಯಾಮಿಲಿ ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಇಂದು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವ ಶ್ವೇತಾ ಇದೇ ಸಂತಸದಲ್ಲಿ ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಶ್ವೇತಾ ಸದ್ಯ 'ಹೋಪ್‌' ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಶ್ವೇತಾ ಕೆಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ವಿಶೇಷ ದಿನ ಹೋಪ್ ಸಿನಿಮಾ ಲುಕ್ ಬಿಡುಗಡೆಯಾಗಿದ್ದು, ಖಡಕ್ ಅಧಿಕಾರಿ ಪಾತ್ರದ ಮೂಲಕ ಶ್ವೇತಾ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಈ ಸಿನಿಮಾಗೆ ವರ್ಷಾ ಸಂಜೀವ್ ಎನ್ನುವವರು ಬಂಡವಾಳ ಹೂಡಿದ್ದಾರೆ. ಸರ್ಕಾರ ಮತ್ತು ರಾಜಕೀಯದ ಕುರಿತು ಈ ಸಿನಿಮಾ ಇದೆಯಂತೆ.

  ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. ವರ್ಷಾ ಸಂಜೀವ್ ನಿರ್ಮಾಣದ ಜೊತೆಗೆ ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡುವ ನಿರ್ಮಾಪಕಿ ವರ್ಷಾ, 'ನಟಿ ಶ್ವೇತಾ ಶ್ರೀವಾತ್ಸವ್ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಅವರಲ್ಲಿರುವ ನೇರ ಮತ್ತು ದಿಟ್ಟ ನಡುವಳಿಕೆಯೇ ಕಾರಣ. ನಮ್ಮ ಹೋಪ್ ಸಿನಿಮಾದಲ್ಲಿ ಅವರು ಅದೇ ರೀತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಹಾಗಾಗಿ ಆ ಪಾತ್ರದ ಬಗ್ಗೆ ಕೇಳಿದಾಗಲೇ ನಮ್ಮ ಮತ್ತು ನಿರ್ದೇಶಕರ ತಲೆಯಲ್ಲಿ ಸುಳಿದಾಡಿದ್ದು ಇವರದೊಂದೇ ಹೆಸರು ಮಾತ್ರ" ಎಂದಿದ್ದಾರೆ.

  "ನಮ್ಮ ಸಿನಿಮಾದಲ್ಲಿ ಕೆಎಎಸ್ ಅಧಿಕಾರಿಯ ಪಾತ್ರದಲ್ಲಿ ಶ್ವೇತಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರಕ್ಕೆ ಅವರೇ ಸೂಕ್ತರು ಎನ್ನುವಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಸಿನಿಮಾ‌ ನೋಡಿದ ನಂತರ ಪ್ರೇಕ್ಷಕರಿಗೂ ಆ ಭಾವನೆ ಬರುತ್ತದೆ. ನಾನು ಅವರ ಹಿಂದಿನ ಸಿನಿಮಾಗಳನ್ನು ನೋಡಿದ್ದೇನೆ. ಅದರಲ್ಲಿ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿನ ಅವರ ಪಾತ್ರ ನನಗೆ ತುಂಬ ಇಷ್ಟ ಆಗಿತ್ತು. ಅಲ್ಲಿನ ದಿಟ್ಟತನದ ಮುಖವು ಇಲ್ಲಿ ಅಧಿಕಾರಿಯ ರೂಪದಲ್ಲಿ ಕಾಣಿಸುತ್ತದೆ' ಎಂದು ಹೇಳಿದ್ದಾರೆ.

  'ಹೋಪ್' ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ್ ಗೆ ಕೆಎಎಸ್ ಅಧಿಕಾರಿ ಪಾತ್ರ. ಚಿತ್ರದ ಬಗ್ಗೆ ಮಾತನಾಡುವ ಶ್ವೇತಾ, "ಇದೊಂದು ಪವರ್‌ಫುಲ್ ಪಾತ್ರ. ನಿರ್ದೇಶಕ ಅಂಬರೀಷ್ ಅವರು ಉತ್ತಮವಾಗಿ ಸಿನಿಮಾ ಮಾಡಿದ್ದಾರೆ. ನಾನಿಲ್ಲಿ ಕೆಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ' ಎಂದು ಶ್ವೇತಾ ಹೇಳಿಕೊಳ್ಳುತ್ತಾರೆ.

  ಚಿತ್ರಕ್ಕೆ ಅಂಬರೀಷ್ ಎನ್ನುವುವವರಪ ನಿರ್ದೇಶನ ಮಾಡಿದ್ದಾರೆ. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

  ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಲೇಶ್ ಛಾಯಾಗ್ರಹಣ ಚಿತ್ರಕ್ಕಿದ್ದು, ಸಂಕಲನವನ್ನು ಹರೀಶ್ ಕೊಮ್ಮೆ ಮಾಡಿದ್ದಾರೆ. 34 ದಿನಗಳಲ್ಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಲಾಕ್‌ಡೌನ್‌ ಅವಧಿಯಲ್ಲೇ ಸಿನಿಮಾದ ಕೆಲಸಗಳು ಮುಕ್ತಾಯಗೊಂಡಿವೆ.

  ನಟಿ ಶ್ವೇತಾ ಶ್ರೀವಾತ್ಸವ್ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಶ್ವೇತಾ ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ 2016ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಬಳಿಕ ಶ್ವೇತಾ ರಹದಾರಿ ಸಿನಿಮಾಗೆ ಸಹಿ ಮಾಡಿದ್ದರು. ಚಿತ್ರೀಕರಣ ಕೂಡ ಪ್ರಾರಂಭ ಮಾಡಿದ್ದರು. ಈ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ. ಆಗಲೇ ಹೋಪ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

  English summary
  Actress Shwetha Srivatsav starrer Hope movie poster release on her birthday.
  Saturday, September 4, 2021, 18:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X